For Quick Alerts
  ALLOW NOTIFICATIONS  
  For Daily Alerts

  ಪ್ರೇಮಾ 2ನೇ ಮದುವೆ ವದಂತಿ; ಸ್ಪಷ್ಟನೆ ನೀಡಿದ ನಟಿ

  |

  ಕನ್ನಡ ಚಿತ್ರರಂಗದ ಖ್ಯಾತ ನಟಿ ಪ್ರೇಮಾ ಮತ್ತೆ ಸುದ್ದಿಯಲ್ಲಿದ್ದಾರೆ. ಅಂದಹಾಗೆ ಮತ್ತೆ ಸದ್ದು ಮಾಡುತ್ತಿರುವ ಸಿನಿಮಾ ವಿಚಾರಕ್ಕಲ್ಲ, ವೈಯಕ್ತಿಕ ಜೀವನದ ವಿಚಾರವಾಗಿ. ಸದ್ಯ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿರುವ ಪ್ರೇಮಾ ಸಾಮಾಜಿಕ ಜಾಲತಾಣದಲ್ಲೂ ಅಷ್ಟು ಸಕ್ರಿಯರಾಗಿಲ್ಲ.

  ಸಾರ್ವಜನಿಕವಾಗಿಯೂ ಎಲ್ಲೂ ಕಾಣಿಸಿಕೊಳ್ಳದ ಪ್ರೇಮಾ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದ ಪ್ರೇಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವದಂತಿಯೊಂದು ಹರಿದಾಡುತ್ತಿದೆ. ನಟಿ ಪ್ರೇಮಾ ಎರಡನೇ ಮದುವೆಗೆ ಸಿದ್ಧರಾಗುತ್ತಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲವು ವೆಬ್‌ಸೈಟ್‌ಗಳಲ್ಲಿ ಪ್ರೇಮಾ ಮದುವೆ ಸುದ್ದಿ ಬಿತ್ತರವಾಗಿದೆ. ಮುಂದೆ ಓದಿ...

  ಮದುವೆ ವದಂತಿ ವೈರಲ್

  ಮದುವೆ ವದಂತಿ ವೈರಲ್

  ಪ್ರೇಮಾ ಮೊದಲ ಮದುವೆ ಮುರಿದು ಬಿದ್ದು ವರ್ಷಗಳೇ ಆಗಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಬಳಿಕ ಏಕಾಂಗಿಯಾಗಿಯೇ ಜೀವನ ನಡೆಸುತ್ತಿರುವ ಪ್ರೇಮಾ ಚಿತ್ರರಂಗದಿಂದಲೂ ದೂರ ಉಳಿದಿದ್ದಾರೆ. ಇತ್ತೀಚಿಗೆ ನಟಿ ಪ್ರೇಮಾ ತಂದೆಯನ್ನು ಕಳೆದುಕೊಂಡಿದ್ದಾರೆ. ತಂದೆಯನ್ನು ಕಳೆದುಕೊಂಡ ಬಳಿಕ ಪ್ರೇಮಾ ಮದುವೆಗೆ ಮನೆಯವರಿಂದ ಒತ್ತಾಯ ಕೇಳಿಬರುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

  ನಟಿ ಪ್ರೇಮಾ ಸ್ಪಷ್ಟನೆ

  ನಟಿ ಪ್ರೇಮಾ ಸ್ಪಷ್ಟನೆ

  ಈ ಬಗ್ಗೆ ನಟಿ ಪ್ರೇಮಾ ಈಗ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಿತ್ತರವಾಗಿರುವ ಸುದ್ದಿಯ ಸ್ಕ್ರೀನ್ ಶಾಟ್ ಶೇರ್ ಮಾಡಿ, ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ಇಂಥ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಮನವಿ ಮಾಡಿದ್ದಾರೆ.

  ವೀಕೆಂಡ್ ವಿತ್ ರಮೇಶ್ ನಲ್ಲಿ ಪ್ರೇಮಾ ಮಾತು

  ವೀಕೆಂಡ್ ವಿತ್ ರಮೇಶ್ ನಲ್ಲಿ ಪ್ರೇಮಾ ಮಾತು

  ಮದುವೆ ವಿಚಾರವಾಗಿ ನಟಿ ಪ್ರೇಮಾ ಇತ್ತೀಚಿಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸ್ಪಷ್ಟನೆ ನೀಡಿದ್ದರು. ಮದುವೆ ಮುಗಿದ ಅಧ್ಯಾಯ. ಆ ವಿಚಾರ ಚರ್ಚಿಸಲು ಇಷ್ಟವಿಲ್ಲ. ನನಗೆ ಮಕ್ಕಳಿಲ್ಲ. ನಾನು ಆರೋಗ್ಯವಾಗಿದ್ದೀನಿ' ಎಂದು ಹೇಳುವ ಮೂಲಕ ಮದುವೆ ವಿಚಾರದ ಬಗ್ಗೆ ಇದ್ದ ಒಂದಿಷ್ಟು ಗೊಂದಲಗಳಿಗೆ ಉತ್ತರ ನೀಡಿದ್ದರು.

  Chiru ಜೊತೆ ತೆಗೆಸಿಕೊಂಡ ಕೊನೆಯ ಫೋಟೋ ಇದು | Pannaga Bharana | Filmibeat Kannada
  ಪ್ರೇಮಾ ಸಿನಿಮಾಗಳು

  ಪ್ರೇಮಾ ಸಿನಿಮಾಗಳು

  ಮದುವೆ ಬಳಿಕ ಶಿಶಿರ ಸಿನಿಮಾ ಬಳಿಕ ಮತ್ತೆ ಬಣ್ಣ ಹಚ್ಚಿದ ಪ್ರೇಮಾ ಚಿತ್ರರಂಗದಲ್ಲಿ ಸಕ್ರಿಯರಾಗಿರುತ್ತಾರೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಪ್ರೇಮಾ ಚಿತ್ರರಂಗದಿಂದ ದೂರ ಉಳಿದರು. 2017ರಲ್ಲಿ ಉಪೇಂದ್ರ ಮತ್ತೆ ಹುಟ್ಟಿ ಬಾ ಸಿನಿಮಾ ಮೂಲಕ ರಿಯಲ್ ಸ್ಟಾರ್ ಜೊತೆ ತೆರೆಹಂಚಿಕೊಂಡರು. ಬಳಿಕ ಮತ್ತೆ ಬಣ್ಣ ಹಚ್ಚಿಲ್ಲ. ಸಿನಿಮಾ ಆಫರ್‌ಗಳು ಬಂದರೂ ಪ್ರೇಮಾ ಮತ್ತೆ ತೆರೆಮೇಲೆ ಮಿಂಚಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಪ್ರೇಮಾ ಮತ್ತೆ ಬಣ್ಣ ಹಚ್ಚಲಿ, ಅಭಿಮಾನಿಗಳನ್ನು ರಂಜಿಸಲಿ ಎನ್ನುವುದು ಚಿತ್ರಪ್ರೇಕ್ಷಕರ ಆಶಯ.

  English summary
  Kannada Actress Prema gives clarification on rumors about her personal life.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X