ಮಾಡೆಲಿಂಗ್ ಕ್ಷೇತ್ರಕ್ಕೆ ಬಲಗಾಲಿಟ್ಟು ಬಂದ ಪ್ರೇಮಾ

By ಉದಯರವಿ

'ನಮ್ಮೂರ ಮಂದಾರೆ ಹೂವೆ' ಪ್ರೇಮಾ ಬಹಳ ದಿನಗಳ ಬಳಿಕ ಮತ್ತೆ ಬಣ್ಣ ಹಚ್ಚಿದ್ದಾರೆ. ಆದರೆ ಅವರು ಯಾವುದೇ ಸಿನಿಮಾಗಾಗಿ ಬಣ್ಣ ಹಚ್ಚುತ್ತಿಲ್ಲ, ಬದಲಾಗಿ ಮಾಡೆಲಿಂಗ್ ಕ್ಷೇತ್ರಕ್ಕೆ ಅಡಿಯಿಟ್ಟಿದ್ದಾರೆ. ಹಾಗಂತ ಅವರೇನು ಕ್ಯಾಟ್ ವಾಕ್ ಮಾಡುತ್ತಿಲ್ಲ.

'ಶಿಶಿರ' ಚಿತ್ರದ ಬಳಿಕ ಪ್ರೇಮಾ ಅವರು ಗಾಂಧಿನಗರದಿಂದ ಬಹುತೇಕ ಕಾಣೆಯಾಗಿದ್ದರು. ಆ ಚಿತ್ರದ ಬಳಿಕ ಅವರು ಯಾವ ಚಿತ್ರವನ್ನೂ ಒಪ್ಪಿಕೊಳ್ಳಲಿಲ್ಲ. ಈಗಿನವರಿಗೆ ಕ್ರಿಯಾಶೀಲತೆ ಇಲ್ಲ. ಒಂದೇ ರೀತಿಯ ಕಥೆಗಳನ್ನು ಕೇಳಿಕೇಳಿ ಸಾಕಾಗಿತ್ತು. ನನಗೂ ಬ್ರೇಕ್ ಬೇಕಾಗಿತ್ತು. ಹಾಗಾಗಿ ಯಾವುದೇ ಚಿತ್ರವನ್ನು ಒಪ್ಪಿಕೊಳ್ಳಲಿಲ್ಲ ಎನ್ನುತ್ತಾರೆ ಪ್ರೇಮಾ. [ನಟಿ ಪ್ರೇಮಾ ಮೇಲೆ ಹಾರಾಡಿದ ಗಾಸಿಪ್ ಗೂಬೆ]

Actress Prema
ಈಗವರನ್ನು ಮಾಡೆಲಿಂಗ್ ಕ್ಷೇತ್ರಕ್ಕೆ ಕರೆತಂದವರು ವಸ್ತ್ರವಿನ್ಯಾಸಕ ಗಿರೀಶ್ ಅವರು. ತಮ್ಮ 'ಸರ್ಗಾ' ಸಂಗ್ರಹದ ದಿರಿಸುಗಳಿಗೆ ರಾಯಭಾರಿಯಾಗಿ ಪ್ರೇಮಾ ಅವರನ್ನು ಆಯ್ಕೆ ಮಾಡಿಕೊಂಡು ಅವರನ್ನು ಹೊಸದಾಗಿ ಪರಿಚಯಿಸಿದ್ದಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಈ ಮೂಲಕ ಇದೇ ಮೊದಲ ಬಾರಿಗೆ ಅವರು ವಿನ್ಯಾಸಕರೊಬ್ಬರ ಸಂಗ್ರಹಕ್ಕೆ ರಾಯಭಾರಿಯಾಗಿದ್ದಾರೆ. ನಂದಿಬೆಟ್ಟದಲ್ಲಿ ಅವರ ಸಂಗ್ರಹದ ವಸ್ತ್ರಗಳ ಶೂಟಿಂಗ್ ಮಾಡಲಾಗಿದ್ದು, ಮುಂಬೈನಿಂದಲೂ ಮಾಡೆಲ್ ಗಳನ್ನು ಕರೆಸಿ ಚಿತ್ರೀಕರಿಸಿಕೊಳ್ಳಲಾಗಿದೆ.

ನವೀನ ಹಾಗೂ ಸೃಜನಶೀಲ ವಿನ್ಯಾಸದ ವಸ್ತ್ರಗಳೆಂದರೆ ನನಗಿಷ್ಟ ಎನ್ನುವ ಪ್ರೇಮಾ ಅವರಿಗೆ ಗಿರೀಶ್ ಅವರ 'ಸರ್ಗಾ' ಸಂಗ್ರಹನದ ವರ್ಣ ಸಂಯೋಜನೆಗಳು ಸಖತ್ ಇಷ್ಟವಾಗಿವೆಯಂತೆ. ಕುಟುಂಬ ಸಮೇತ ನೋಡುವಂತ ಸಿನಿಮಾ ಮಾಡಬೇಕೆಂಬ ಆಸೆ ಇದೆ ಎನ್ನುವ ಪ್ರೇಮಾ ಅವರು ಸೆಕೆಂಡ್ ಇನ್ನಿಂಗ್ಸ್ ಗಾಗಿ ಕಾಯುತ್ತಿದ್ದಾರೆ.

‘ಓಂ'. ‘ನಮ್ಮೂರ ಮಂದಾರ ಹೂವೇ', ‘ಕನಸುಗಾರ', ‘ಉಪೇಂದ್ರ', ‘ಯಜಮಾನ', ‘ಆಪ್ತಮಿತ್ರ' ಚಿತ್ರಗಳು ಪ್ರೇಮಾ ಅವರಿಗೆ ಸಾಕಷ್ಟು ಹೆಸರನ್ನು ತಂದುಕೊಟ್ಟಂತಹವು. 'ಸರ್ಗಾ' ಸಂಗ್ರಹ ಪ್ರದರ್ಶನ ಇದೇ ಭಾನುವಾರ (ಡಿಸೆಂಬರ್ 21) ಕಲಾರಸ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ. ಸ್ಥಳ: ಕಲಾರಸ ಆರ್ಟ್ ಗ್ಯಾಲರಿ, ಹೈ ಸ್ಟ್ರೀಟ್, 6ನೇ ಮಹಡಿ, 11ನೇ ಮುಖ್ಯರಸ್ತೆ, ಜಯನಗರ 4ನೇ ಬ್ಲಾಕ್. ಸಮಯ: ಸಂಜೆ 6.30.

More from Filmibeat

English summary
Sandalwood actress Prema comeback to acting but not on silver screen. The actress returned as brand ambassador for 'Sarga' royal collections. Designer Girish has roped in top actress for her new assignment for modelling.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X