»   » 'ಗಣಪ' ನಾಯಕಿ ಪ್ರಿಯಾಂಕಾಗೆ ಒಲಿದು ಬಂತು ಮತ್ತೊಂದು ಅದೃಷ್ಟ

'ಗಣಪ' ನಾಯಕಿ ಪ್ರಿಯಾಂಕಾಗೆ ಒಲಿದು ಬಂತು ಮತ್ತೊಂದು ಅದೃಷ್ಟ

Posted By:
Subscribe to Filmibeat Kannada

'ಗಣಪ' ಚಿತ್ರದ ನಂತರ ತೆರೆ ಮರೆಯಾಗಿದ್ದ ನಟಿ ಪ್ರಿಯಾಂಕಾ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಪಟಾಕಿ' ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಗಮನ ಸೆಳೆದಿದ್ದರು. ಇದೀಗ, ಪ್ರಿಯಾಂಕಾಗೆ ಅದೃಷ್ಟ ಖುಲಾಯಿಸಿದ್ದು, ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಕಾರ್ತಿಕ್ ಸರಗೂರು ಅವರ ಮುಂದಿನ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆಯಾಗಿದ್ದಾರೆ.

ಹೌದು, 'ಪಟಾಕಿ' ಚಿತ್ರದಲ್ಲಿ ಮೂಕ ಹುಡುಗಿಯಾಗಿ ಮುಗ್ದ ಅಭಿನಯ ಮಾಡಿದ್ದ ಪ್ರಿಯಾಂಕಾ, ತಮ್ಮ ಮುಂದಿನ ಚಿತ್ರದಲ್ಲಿ ಮಧ್ಯಮ ವರ್ಗದ ಹೆಣ್ಣು ಮಗಳಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಚಿತ್ರವನ್ನ 'ಜೀರ್ಜಿಂಬೆ' ಚಿತ್ರಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದ ಕಾರ್ತಿಕ್ ಸರಗೂರು ನಿರ್ದೇಶನ ಮಾಡುತ್ತಿದ್ದು, ಪುಷ್ಕರ್ ಮಲ್ಲಿಕಾರ್ಜುನ ಅವರು ಬಂಡವಾಳ ಹಾಕುತ್ತಿದ್ದಾರೆ.

Kannada Actress Priyanka Next with Jerjinmbe Director

ಇದೊಂದು ಲವ್ ಕಮ್ ಫ್ಯಾಮಿಲಿ ಕಥೆಯಾಗಿದ್ದು, 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಅಭಿನಯಿಸಿದ್ದ ಅರವಿಂದ್ ಅಯ್ಯರ್ ಮೊದಲ ಭಾರಿಗೆ ನಾಯಕನಾಗಿ ಭರ್ತಿ ಪಡೆಯುತ್ತಿದ್ದಾರಂತೆ. 'ದೃಶ್ಯ' ಖ್ಯಾತಿಯ ಆರೋಹಿ ನಾರಾಯಣ್ ಕೂಡ ಚಿತ್ರದ ಪ್ರಮುಖ ಪಾತ್ರವನ್ನ ನಿರ್ವಹಿಸಲಿದ್ದಾರೆ. ಉಳಿದಂತೆ ಬಾಲನಟಿ ಹಾಗೂ ಗಾಯಕಿ ಆದ್ಯಾ ಮತ್ತು ಅಚ್ಯುತ್ ಕುಮಾರ್ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೇ, ಜುಲೈ 25 ರಿಂದ ಚಿತ್ರೀಕರಣ ಶುರು ಮಾಡಲಿದ್ದಾರಂತೆ ಚಿತ್ರತಂಡ.

English summary
State Award-winning Jeerjimbe director Karthik Saragur announced his next film, Actress Priyanka of Ganapa and Pataki fame is now a part of the project.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada