For Quick Alerts
  ALLOW NOTIFICATIONS  
  For Daily Alerts

  ಮೈಸೂರಿನಲ್ಲಿ ಮೈಲಾರಿ ದೋಸೆ ಸವಿದ ನಟಿ ರಚಿತಾ ರಾಮ್

  |

  ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯ ಮೈಸೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಮೈಸೂರಿನ ಫೇಮಸ್ ಮೈಲಾರಿ ದೋಸೆ ಸವಿದು ರಚಿತಾ ಸಂತಸ ಪಟ್ಟಿದ್ದಾರೆ. ಅಂದ್ಹಾಗೆ ಮೈಲಾರಿ ದೋಸೆ ಸವಿಯಲು ರಚಿತಾಗೆ ಜೋಗಿ ಪ್ರೇಮ್ ಕೂಡ ಸಾಥ್ ನೀಡಿದ್ದಾರೆ.

  ನಿರ್ದೇಶಕ ಪ್ರೇಮ್ ಸಾರಥ್ಯದಲ್ಲಿ 'ಏಕ್ ಲವ್ ಯಾ' ಸಿನಿಮಾ ಚಿತ್ರೀಕರಣ ಬರ್ಜರಿಯಾಗಿ ನಡೆಯುತ್ತಿದೆ. ರಕ್ಷಿತಾ ಸಹೋದರ ರಾಣಾ ನಾಯಕನಾಗಿ ಮಿಂಚಿರುವ ಏಕ್ ಲವ್ ಯಾ ಸಿನಿಮಾದಲ್ಲಿ ರಚಿತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರೀಕರಣ ಸದ್ಯ ಮೈಸೂರಿನಲ್ಲಿ ನಡೆಯುತ್ತಿದೆ.

  ಪ್ರೇಮ್ ಬರ್ತ್ ಡೇ ಪಾರ್ಟಿಯಲ್ಲಿ ರಚಿತಾ ರಾಮ್ ಮಸ್ತ್ ಡ್ಯಾನ್ಸ್ಪ್ರೇಮ್ ಬರ್ತ್ ಡೇ ಪಾರ್ಟಿಯಲ್ಲಿ ರಚಿತಾ ರಾಮ್ ಮಸ್ತ್ ಡ್ಯಾನ್ಸ್

  ಹಬ್ಬದ ಪ್ರಯುಕ್ತ ಚಿತ್ರೀಕರಣಕ್ಕೆ ಬ್ರೇಕ್ ಹಾಕಿರುವ ಪ್ರೇಮ್ ಮತ್ತು ತಂಡ, ಚಿತ್ರೀಕರಣ ಮುಗಿಸಿ ನಂತರ ಚಾಮುಂಡಿ ತಾಯಿಯ ಆಶೀರ್ವಾದ ಪಡೆದಿದ್ದಾರೆ. ಚಾಮುಂಡಿ ಬೆಟ್ಟದಿಂದ ಹೊರಟ ಚಿತ್ರತಂಡ ಸೀದ ಮೈಲಾರಿ ದೋಸೆ ಹೋಟೆಲ್ ಗೆ ಎಂಟ್ರಿ ಕೊಟ್ಟಿದ್ದಾರೆ. ದೋಸೆ ತಿಂದು ಆಸೆ ಈಡೇರಿಸಿಕೊಂಡ ರಚಿತಾ ದೀಪಾವಳಿ ಆಚರಣೆ ಮಾಡಲು ಊರ್ ಕಡೆ ಹೊರಟಿದ್ದಾರೆ.

  ಈ ಬಗ್ಗೆ ನಿರ್ದೇಶಕ ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಬೆರೆದುಕೊಂಡಿದ್ದಾರೆ. ದೋಸೆ ತಿನ್ನುತ್ತಿರುವ ಫೋಟೋವನ್ನು ಶೇರ್ ಮಾಡುವ ಜೊತೆಗೆ "#Ekloveya ಶೂಟಿಂಗ್'ಗೇ ಮೈಸೂರಿಗ್ ಬಂದ್ಮೇಲೆ ತಾಯಿ ಚಾಮುಂಡೇಶ್ವರಿ ದರ್ಶನ ಮಾಡ್ದೇ ಇರಕ್ಕಾಗುತ್ತಾ, ಮೈಲಾರಿ ದೋಸೆ ತಿಂದೇ ಇರಕ್ಕಾಗುತ್ತಾ. ನಮ್ ಇಡೀ ಟೀಮ್ ಶೂಟಿಂಗ್ ಮುಗ್ಸಿ ಬೆಳಿಗ್ ಬೆಳಿಗ್ಗೆ ಬೆಟ್ಟ ಹತ್ತಿ ದರ್ಶನ ಮಾಡಿ ದೋಸೆ ತಿಂದು ಊರ್ ಕಡೆ ದೀಪಾವಳಿ ಪಟಾಕಿ ಹೊಡಿಯಕ್ ಹೊಂಟ್ವಿ ಗುರು" ಎಂದು ಬರೆದುಕೊಂಡಿದ್ದಾರೆ.

  English summary
  Kannada Actress Rachita Ram ate Mylari Dosa with Jogi prem in Mysore. Rachitha Ram currently shooting in Ek Love Ya movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X