Don't Miss!
- News
ಫೆಬ್ರವರಿ 4ರಂದು 313 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Sports
ಭಾರತ vs ಆಸ್ಟ್ರೇಲಿಯಾ: ಸುಂದರ್ ಸೇರಿ ನಾಲ್ವರು ಸ್ಪಿನ್ನರ್ಗಳು ನೆಟ್ ಬೌಲರ್ಗಳಾಗಿ ತಂಡಕ್ಕೆ ಸೇರ್ಪಡೆ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಒಪ್ಪೋ ರೆನೋ 8T 5G ಫಸ್ಟ್ ಲುಕ್: ಪವರ್ಫುಲ್ ಫೀಚರ್ಸ್ ಜೊತೆಗೆ ಹೊಸ ಲುಕ್!
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಟಗರು' 'ಡಾಲಿ'ಗೆ ಜೋಡಿಯಾಗ್ತಾರಾ ಡಿಂಪಲ್ ಕ್ವೀನ್ ರಚಿತಾ ರಾಮ್?
ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಬಳಿ ಸಾಲು ಸಾಲು ಸಿನಿಮಾಗಳಿವೆ. ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುವ ರಚಿತಾ ಈಗ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಇತ್ತೀಚಿಗಷ್ಟೆ ಐ ಲವ್ ಯು ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ರಚಿತಾ, ಹಾಟ್ ಆಗಿ ಕಾಣಿಸಿಕೊಂಡಿದ್ದೀನಿ ಎಂದು ಕಣ್ಣೀರು ಹಾಕಿ ಸೈಲೆಂಟ್ ಆಗಿದ್ರು. ಸದ್ಯ ಸಿನಿಮಾ ಆಯ್ತು ರಿಯಾಲಿಟಿ ಶೋ ಆಯ್ತು ಅಂತ ಇರುವ ರಚಿತಾ ಈಗ ಡಾಲಿ ಧನಂಜಯ್ ಗೆ ನಾಯಕಿಯಾಗಲು ಸಜ್ಜಾಗುತ್ತಿದ್ದಾರೆ.
ಐ
ಲವ್
ಯೂ
ಕಲೆಕ್ಷನ್
ಬಗ್ಗೆ
ಹರಿದಾಡ್ತಿರುವ
ಈ
ಸುದ್ದಿ
ನಿಜಾನ?

'ಡಾಲಿ' ಚಿತ್ರದಲ್ಲಿ ಧನಂಜಯ್
'ಟಗರು' ಚಿತ್ರದ ನಂತರ ಡಾಲಿ ಅಂತಾನೆ ಖ್ಯಾತಿ ಗೊಳಿಸಿರುವ ನಟ ಧನಂಜಯ್ ಈಗ ಸಖತ್ ಬ್ಯುಸಿ. ಖಳನಟನಾಗಿ, ನಾಯಕನಾಗಿ, ಪೊಲೀಸ್ ಅಧಿಕಾರಿಯಾಗಿ ಹೀಗೆ ತರಹೇವಾರಿ ಪಾತ್ರಗಳಲ್ಲಿ ಧನಂಜಯ್ ಮಿಂಚುತ್ತಿದ್ದಾರೆ. ಕೈ ತುಂಬ ಸಿನಿಮಾಗಳನ್ನು ಇಟ್ಟುಕೊಂಡಿರುವ ಧನಂಜಯ್ ಈಗ 'ಡಾಲಿ' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಧನಂಜಯ್ ಗೆ ರಚಿತಾ ನಾಯಕಿ
ಧನಂಜಯ್ ನಾಯಕನಾಗಿ ಮಿಂಚುತ್ತಿರುವ ಡಾಲಿ ಚಿತ್ರದಲ್ಲಿ ಬುಲ್ ಬುಲ್ ನಟಿ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಳ್ಳುವ ಸಾಧ್ಯೆತೆ ಇದೆ. ಈಗಾಗಲೆ ಚಿತ್ರತಂಡ ರಚಿತಾ ಬಳಿ ಮಾತುಕತೆ ನಡೆಸಿದೆಯಂತೆ. ಆದ್ರೆ ರಚಿತಾ ಕಡೆಯಿಂದ ಗ್ರೀನ್ ಸಿಗ್ನಲ್ ಬರುವುದೊಂದೆ ಬಾಕಿ ಇದೆಯಂತೆ. ಒಂದು ವೇಳೆ ರಚಿತಾ ಒಪ್ಪಿಕೊಂಡರೆ ಧನಂಜಯ್ ಜೊತೆ ನಾಯಕಿಯಾಗಿ ಮಿಂಚಲಿದ್ದಾರೆ.

'ಎರಡನೇ ಸಲ' ಜೋಡಿ
ಧನಂಜಯ್ ನಾಯಕನಾಗಿ ಮಿಂಚುತ್ತಿರುವ ಡಾಲಿ ಚಿತ್ರಕ್ಕೆ, ಎರಡನೆ ಸಲ ಚಿತ್ರದ ನಿರ್ಮಾಪಕ ಯೋಗೇಶ್ ನಾರಾಯಣ್ ಬಂಡವಾಳ ಹೂಡುತ್ತಿದ್ದಾರೆ. 'ಎರಡನೇ ಸಲ' ಚಿತ್ರದ ಮೂಲಕ ಧನಂಜಯ್ ಮತ್ತು ಯೋಗೇಶ್ 'ಮೊದಲ ಸಹ' ಒಟ್ಟಿಗೆ ಕೆಲಸ ಮಾಡಿದ್ದರು. ಈಗ ಡಾಲಿ ಚಿತ್ರದ ಮೂಲಕ ಮತ್ತೆ ಯೋಗೇಶ್ ನಾರಾಯಣ್ ಹಾಗೂ ಧನಂಜಯ್ ಒಂದಾಗಿದ್ದಾರೆ. ಅಂದ್ಹಾಗೆ ಚಿತ್ರಕ್ಕೆ ಪ್ರಭು ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದಾರೆ.
'ಐ
ಲವ್
ಯೂ'
ಚಿತ್ರದ
ವಿವಾದದ
ಹಾಡಿನ
ವಿಡಿಯೋ
ಬಿಡುಗಡೆ

ಸೆಪ್ಟಂಬರ್ ನಲ್ಲಿ ಸೆಟ್ಟೇರಲಿದೆ ಸಿನಿಮಾ
ಧನಂಜಯ್ ಮತ್ತು ರಚಿತಾ ಅಭಿನಯದ 'ಡಾಲಿ' ಸಿನಿಮಾ ಸೆಪ್ಟಂಬರ್ ನಲ್ಲಿ ಸೆಟ್ಟೇರಲಿದೆ. ಚಿತ್ರದ ಫಸ್ಟ್ ಲುಕ್ ಫೆಬ್ರವರಿಯಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದೆಯಂತೆ ಚಿತ್ರತಂಡ. ಧನಂಜಯ್ ಮತ್ತು ರಚಿತಾ ರಾಮ್ ಸಿನಿಮಾಗಳ ಕಮಿಟ್ ಮೆಂಟ್ ಮುಗಿದ ಬಳಿಕ ಸಿನಿಮಾ ಶುರುವಾಗಲಿದೆ. ಅಂದ್ಹಾಗೆ ರಚಿರಾ ರಾಮ್ ಸದ್ಯ, ರಮೇಶ್ ಅರವಿಂದ್ ನಿರ್ದೇಶನದ 100, ಏಕ್ ಲವ್ ಯಾ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಜೊತೆಗೆ ಆಯುಷ್ಮಾನ್ ಭವ ಮತ್ತು ಗೆಸ್ಟ್ ಪಾತ್ರದಲ್ಲಿ ಬಣ್ಣ ಹಚ್ಚಿರುವ ಭರಾಟೆ ಚಿತ್ರ ರಿಲೀಸ್ ಗೆ ರೆಡಿಯಾಗುತ್ತಿದೆ.