ತೂಕ ಇಳಿಸಿಕೊಂಡ ರಚಿತಾ ರಾಮ್ : ಕಾರಣ ಕೇಳ್ಬೇಡಿ

Recommended Video

ಬರೋಬ್ಬರಿ 7 ಕೆಜಿ ತೂಕ ಇಳಿಸಿಕೊಂಡ ರಚಿತಾ ರಾಮ್ | ಕಾರಣ? | Filmibeat Kannada

ನೀವು 'ಅಯೋಗ್ಯ' ಸಿನಿಮಾ ನೋಡಿದ್ದೀರಾ...?. ಸಿನಿಮಾ ನೋಡದೆ ಇದ್ದರೂ ಪರ್ವಾಗಿಲ್ಲ, 'ಅಯೋಗ್ಯ' ಚಿತ್ರದ ಚಿತ್ರದ 'ಏನಮ್ಮಿ.. ಏನಿಮ್ಮಿ..' ಹಾಡು ನೋಡಿದ್ದೀರಾ ತಾನೇ. ಆ ಹಾಡಿನಲ್ಲಿ ನೀವು ರಚಿತಾ ಅವರನ್ನು ಸ್ವಲ್ಪ ಗಮನಿಸಿ ಅವರು ಕೊಂಚ ದಪ್ಪ ಆಗಿದ್ದಾರೆ ಅನಿಸೋದಿಲ್ವ.

ಸ್ವಲ್ಪ ದಪ್ಪ ಆಗಿದ್ದ ರಚಿತಾ ರಾಮ್ ಇದೀಗ ತಮ್ಮ ತೂಕ ಇಳಿಸಿಕೊಂಡಿದ್ದಾರೆ. ಅದು ಯಾವ ಸಿನಿಮಾಗಾಗಿ ಅಲ್ಲ. ಮೊದಲನಿಂದ ತೆಳ್ಳಗೆ ಇರಲು ಇಷ್ಟ ಪಡುವ ಅವರು, ಜಿಮ್ ನಲ್ಲಿ ಸತತವಾಗಿ ವರ್ಕ್ ಔಟ್ ಮಾಡಿ ಮತ್ತೆ ಹಳೆಯ ಲುಕ್ ಗೆ ಮರಳಿದ್ದಾರೆ.

ಅಂದಹಾಗೆ ರಚಿತಾ ರಾಮ್ ಹಿಂದೆ ಎಷ್ಟು ತೂಕ ಇದ್ದರೂ ಈಗ ಎಷ್ಟು ತೂಕ ಕಡಿಮೆ ಆಗಿದ್ದಾರೆ. ಜೊತೆಗೆ ತೂಕ ಇಳಿಸಿಕೊಂಡ ರಚಿತಾ ಹೇಗೆ ಕಾಣುತ್ತಾರೆ ಎಂಬ ಕುತೂಹಲ ನಿಮಗೂ ಇದ್ದರೆ ಹಾಗೆ ಮುಂದೆ ನೋಡಿ...

7 ಕೆಜಿ ತೂಕ ಕಡಿಮೆ

7 ಕೆಜಿ ತೂಕ ಕಡಿಮೆ

ನಟಿ ರಚಿತಾ ರಾಮ್ ಈಗ 7 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. 'ಅಯೋಗ್ಯ' ಸಿನಿಮಾದ ಸಮಯದಲ್ಲಿ 65 ಕೆಜಿ ಇದ್ದ ರಚಿತಾ ಈಗ 58 ಕೆಜಿಗೆ ಇಳಿದಿದ್ದಾರೆ. ಬರೀ 25 ದಿನಗಳಲ್ಲಿ 7 ಕೆಜಿ ತೂಕವನ್ನು ತಗ್ಗಿಸಿಕೊಂಡಿದ್ದಾರೆ. ಗುಂಡು ಗುಂಡಾಗಿ ಇದ್ದ ರಚಿತಾ ಈಗ ತೆಳ್ಳಗೆ ಬಳ್ಳಿಯಂತೆ ಆಗಿದ್ದಾರೆ.

ಹೊಸ ಫೋಟೋ ಶೂಟ್

ಹೊಸ ಫೋಟೋ ಶೂಟ್

ತೂಕ ಕಡಿಮೆ ಆದ ಬಳಿಕ ಹೇಗೆ ಕಾಣುತ್ತಿದ್ದೇನೆ ಎಂದು ನೋಡಲು ರಚಿತಾ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ಗುಲಾಬಿ ಬಣ್ಣದ ಬಟ್ಟೆ ತೊಟ್ಟು ಬುಲ್ ಬುಲ್ ಬೆಡಗಿ ಮಿಂಚಿದ್ದಾರೆ. ತಮ್ಮ ಹೊಸ ಫೋಟೋ ಶೂಟ್ ನ ಫೋಟೋಗಳನ್ನು ಇನ್ಟಾಗ್ರಾಮ್ ಖಾತೆಯಲ್ಲಿ ಅವರು ಹಂಚಿಕೊಂಡಿದ್ದಾರೆ.

ಎರಡು ಸಿನಿಮಾದಲ್ಲಿ ದಪ್ಪ ಇದ್ದರು

ಎರಡು ಸಿನಿಮಾದಲ್ಲಿ ದಪ್ಪ ಇದ್ದರು

ರಚಿತಾ ರಾಮ್ 'ಅಯೋಗ್ಯ' ಹಾಗೂ 'ಸೀತಾರಾಮ ಕಲ್ಯಾಣ' ಈ ಎರಡು ಚಿತ್ರದಲ್ಲಿ ಸ್ವಲ್ಪ ದಪ್ಪ ಕಾಣುತ್ತಿದ್ದರು. ಆ ಸಿನಿಮಾಗಳ ಬಳಿಕ ಈಗ ಏಳು ಕೆಜಿ ಇಳಿಸಿದ್ದಾರೆ. ಜಿಮ್ ನಲ್ಲಿ ವರ್ಕ್ ಔಟ್ ಮಾಡಿ ತೆಳ್ಳಗೆ ಕಾಣುವಂತೆ ಆಗಿದ್ದರೆ. ತೂಕ ಕಡಿಮೆ ಮಾಡಿಕೊಂಡಿರುವ ರಚಿತಾ ಇನ್ನಷ್ಟು ಚೆನ್ನಾಗಿ ಕಾಣುತ್ತಿದ್ದಾರೆ.

ಇದು ಹೊಸ ಸಿನಿಮಾಗಾಗಿ ಅಲ್ಲ

ಇದು ಹೊಸ ಸಿನಿಮಾಗಾಗಿ ಅಲ್ಲ

ರಚಿತಾ ಈಗ ತೂಕ ಕಡಿಮೆ ಮಾಡಿಕೊಂಡಿರುವುದು ಬೇರೆ ಯಾವ ಹೊಸ ಸಿನಿಮಾಗಾಗಿಯೂ ಅಲ್ಲವಂತೆ. ಅಂದಹಾಗೆ, ರಚಿತಾ ಸದ್ಯ ಪುನೀತ್ ರಾಜ್ ಕುಮಾರ್ ನಟನೆಯ 'ನಟ ಸಾರ್ವಭೌಮ' ಹಾಗೂ ಉಪೇಂದ್ರ ನಟನೆಯ 'ಐ ಲವ್ ಯೂ' ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

English summary
Check out pictures : Kannada actress Rachita Ram lost 7 kgs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X