»   » 'ಗೌಪ್ಯತೆ' ಕಾಪಾಡುತ್ತಿರುವ ರಚಿತಾ ರಾಮ್ ಹಿಂದಿದ್ಯಾ ಕೆಟ್ಟ ಅನುಭವ.?

'ಗೌಪ್ಯತೆ' ಕಾಪಾಡುತ್ತಿರುವ ರಚಿತಾ ರಾಮ್ ಹಿಂದಿದ್ಯಾ ಕೆಟ್ಟ ಅನುಭವ.?

Posted By:
Subscribe to Filmibeat Kannada
Rachita Ram, the Heroine of Bharjari movie speaks about her role | Watch video | Filmibeat Kannada

ವೈಯುಕ್ತಿಕ ವಿಚಾರ ಆಗಿರಲಿ ಅಥವಾ ಸಿನಿಮಾಗೆ ಸಂಬಂಧ ಪಟ್ಟ ಸಂಗತಿಯೇ ಆಗಿರಲಿ... ಸದಾ ಸುದ್ದಿಯಲ್ಲಿ ಇರಲು ಕೆಲವರು ಸುಮ್ ಸುಮ್ನೆ ಗುಲ್ಲೆಬ್ಬಿಸುತ್ತಾರೆ.

''ನಾನ್ ಆ ಸಿನಿಮಾ ಕಥೆ ಕೇಳಿದ್ದೀನಿ, ಈ ಚಿತ್ರದ ಮಾತುಕತೆ ನಡೆಯುತ್ತಿದೆ'' ಅಂತೆಲ್ಲಾ ಕೆಲವರು ಬಿಟ್ಟಿ ಬಿಲ್ಡಪ್ ತೆಗೆದುಕೊಳ್ತಾರೆ. ಕೊನೆಗೆ ಆ ಚಿತ್ರದಲ್ಲಿ ಅವರು ಇರ್ತಾರೋ, ಇಲ್ವೋ ಅದು ಬೇರೆ ಮಾತು. ಆದ್ರೆ, ಆ ಕ್ಷಣಕ್ಕೆ ಮಾತ್ರ ಅವರು 'ಬ್ರೇಕಿಂಗ್ ನ್ಯೂಸ್' ಆಗಿರುತ್ತಾರೆ.

ಆದ್ರೆ, ನಟಿ ರಚಿತಾ ರಾಮ್ ಹಾಗಲ್ಲ. ಇಲ್ಲದಿರುವುದನ್ನು ಹೇಳಿ ಸದ್ದು ಮಾಡಲು ರಚಿತಾ ರಾಮ್ ಇಷ್ಟ ಪಡಲ್ಲ. ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಾಲ್ಕು ವರ್ಷಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಗೋಲ್ಡನ್ ಸ್ಟಾರ್ ಗಣೇಶ್, ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ನಟಿಸಿರುವ ರಚಿತಾ ರಾಮ್ 'ಗೌಪ್ಯತೆ' ಕಾಪಾಡುವುದನ್ನು ಕಲಿತಿದ್ದಾರೆ. ಮುಂದೆ ಓದಿರಿ...

ಕನ್ಫರ್ಮ್ ಆಗುವವರೆಗೂ ಹೇಳಲ್ಲ.!

''ನಿಮ್ಮ ಮುಂದಿನ ಚಿತ್ರಗಳು ಯಾವುದು.?'' ಎಂಬ ಪ್ರಶ್ನೆಯನ್ನ ನಟಿ ರಚಿತಾ ರಾಮ್ ಮುಂದಿಟ್ಟರೆ, ಅವರ ಬಾಯಿಂದ ಬರುವ ಉತ್ತರ 'ಉಪ್ಪಿ ರುಪಿ' ಹಾಗೂ 'ಅಯೋಗ್ಯ'. ಈಗಾಗಲೇ 'ಉಪ್ಪಿ ರುಪಿ' ಹಾಗೂ 'ಅಯೋಗ್ಯ' ಚಿತ್ರದಲ್ಲಿ ರಚಿತಾ ಅಭಿನಯಿಸುತ್ತಿದ್ದಾರೆ.

'ಭರ್ಜರಿ' ಚಿತ್ರದಲ್ಲಿನ ತಮ್ಮ ಪಾತ್ರದ ಗುಟ್ಟು ಬಿಟ್ಟು ಕೊಟ್ಟ 'ಪುಟ್ಟಗೌರಿ' ರಚಿತಾ

ಅದು ಬಿಟ್ಟು ಬೇರೆ ಹೇಳಲ್ಲ.!

'ಉಪ್ಪಿ ರುಪಿ' ಹಾಗೂ 'ಅಯೋಗ್ಯ' ಚಿತ್ರಗಳನ್ನ ಬಿಟ್ಟು ಮಾತುಕತೆ ಹಂತದಲ್ಲಿ ಇರುವ ಯಾವ ಚಿತ್ರಗಳನ್ನೂ ನಟಿ ರಚಿತಾ ಹೆಸರಿಸುವುದಿಲ್ಲ.

'ಗೌಪ್ಯತೆ' ಕಾಪಾಡುವ ಉದ್ದೇಶ

ಗೌಪ್ಯತೆ ಕಾಪಾಡುವ ಉದ್ದೇಶದಿಂದ ನಟಿ ರಚಿತಾ ರಾಮ್ ಹೀಗೆ ಮಾಡ್ತಿದ್ದಾರೆ. ಹಾಗಂತ ಸ್ವತಃ ನಟಿ ರಚಿತಾ ರಾಮ್ ಹೇಳಿದ್ದಾರೆ. ಅದು ನಿಮ್ಮ 'ಫಿಲ್ಮಿಬೀಟ್ ಕನ್ನಡ'ಕ್ಕೆ ನೀಡಿರುವ ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ.

'ಫಿಲ್ಮಿಬೀಟ್ ಕನ್ನಡ'ಗೆ ಎಕ್ಸ್ ಕ್ಲೂಸಿವ್ ಸಂದರ್ಶನ

'ಭರ್ಜರಿ' ಚಿತ್ರದ ಪ್ರಮೋಷನ್ ನಿಮಿತ್ತ 'ಒನ್ ಇಂಡಿಯಾ' ಕಛೇರಿಗೆ ಆಗಮಿಸಿದ ನಟಿ ರಚಿತಾ ರಾಮ್, 'ಭರ್ಜರಿ' ಚಿತ್ರದ ಬಗ್ಗೆ ಹಾಗೂ ತಮ್ಮ ಮುಂದಿನ ಚಿತ್ರಗಳ ಬಗ್ಗೆ ಮಾತನಾಡಿದರು. 'ಈ ವೇಳೆ ನಿಮ್ಮ ಮುಂದಿನ ಚಿತ್ರಗಳ ಬಗ್ಗೆ ಹೇಳಿ' ಎಂದು ಕೇಳಿದಾಗ, 'ಉಪ್ಪಿ ರುಪಿ' ಹಾಗೂ 'ಅಯೋಗ್ಯ' ಚಿತ್ರಗಳನ್ನು ಹೆಸರಿಸಿ ನಟಿ ರಚಿತಾ ರಾಮ್ ಹೇಳಿದಿಷ್ಟು.

ಸೀಕ್ರೆಟ್ ಮೇನ್ಟೇನ್ ಮಾಡೋಣ ಅಂತ

''ನಾನು ಯಾವ ವಿಷಯವನ್ನು ರಿವೀಲ್ ಮಾಡಲು ಇಷ್ಟ ಪಡಲ್ಲ, ಮಾಡುವುದೂ ಇಲ್ಲ. ಯಾಕಂದ್ರೆ, ಯಾವ ಸಮಯದಲ್ಲಿ ಏನಾಗುತ್ತೋ ಗೊತ್ತಾಗಲ್ಲ. ಅದಕ್ಕೆ ಸ್ವಲ್ಪ ಸೀಕ್ರೆಟ್ ಮೇನ್ಟೇನ್ ಮಾಡೋಣ ಅಂತ ಅಷ್ಟೇ''

ಅನುಭವದಿಂದ ಹೇಳಿದ ಮಾತು

''ಒಂದು ಒಳ್ಳೆ ಕೆಲಸಕ್ಕೆ ನೂರೆಂಟು ವಿಘ್ನ ಅನ್ನೋ ಹಾಗೆ ಅನುಭವದಿಂದ ಈ ಮಾತನ್ನ ಹೇಳುತ್ತಿದ್ದೇನೆ. ಚಿತ್ರತಂಡದವರೇ ಅಫೀಶಿಯಲ್ ಆಗಿ ಅನೌನ್ಸ್ ಮಾಡಲಿ ಎಂಬ ಅಸೆ ಅಷ್ಟೇ. ನನಗೆ ಯಾವುದೇ ಪ್ಲಾನ್ ಇಲ್ಲ. ಯಾವ ಸಿನಿಮಾ ಬರುತ್ತೆ, ಅದನ್ನ ಖುಷಿಯಿಂದ ಒಪ್ಪಿಕೊಂಡು ಮಾಡುತ್ತೇನೆ'' ಎಂದು ನಟಿ ರಚಿತಾ ರಾಮ್ ಹೇಳಿದರು. ರಚಿತಾ ರಾಮ್ ಸಂದರ್ಶನದ ಪೂರ್ತಿ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ....

ಕೆಟ್ಟ ಅನುಭವ ಆಗಿದ್ಯಾ.?

ವಿಘ್ನಗಳ ಬಗ್ಗೆ ಉಲ್ಲೇಖಿಸಿದ ನಟಿ ರಚಿತಾ ರಾಮ್ ಗೆ ಅವಕಾಶಗಳ ವಿಚಾರವಾಗಿ ಕೆಟ್ಟ ಅನುಭವ ಏನಾದರೂ ಆಗಿದ್ಯಾ.? ಎಂಬ ಪ್ರಶ್ನೆ ಇದೀಗ ಎಲ್ಲರ ತಲೆಯಲ್ಲೂ ಕಾಡುತ್ತಿದೆ.

'ಭರ್ಜರಿ' ಸವಾರಿ ಮುಂದುವರಿಯಲಿ...

ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರಿಗೆ ನಾಯಕಿ ಆಗುತ್ತಿರುವ ರಚಿತಾ ರಾಮ್ ಯಶಸ್ಸಿನ ಸವಾರಿ ಹೀಗೆ ಮುಂದುವರಿಯಲಿ ಎಂಬುದೇ ಅಭಿಮಾನಿಗಳ ಆಶಯ.

English summary
''I want to maintain secrecy about my upcoming films until it is announced officially'' says Kannada Actress Rachita Ram.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada