For Quick Alerts
  ALLOW NOTIFICATIONS  
  For Daily Alerts

  ನಟಿ ವಿಜಯಲಕ್ಷ್ಮಿಗೆ ಮಾನಸಿಕ ಸ್ಥೈರ್ಯ ತುಂಬಿದ ರಾಧಿಕಾ ಕುಮಾರಸ್ವಾಮಿ

  By Harshitha
  |
  ವಿಜಯಲಕ್ಷ್ಮಿ ಕೈ ಹಿಡಿದರು ಸ್ಯಾಂಡಲ್‌ವುಡ್ ಮಂದಿ..!! | Filmibeat Kannada

  ''ಕನ್ನಡ ಚಿತ್ರರಂಗವನ್ನು ಬಿಟ್ಟು ತಮಿಳು ಸಿನಿಮಾ ಇಂಡಸ್ಟ್ರಿ ಕಡೆ ಮುಖ ಮಾಡಿದ ನಟಿ ವಿಜಯಲಕ್ಷ್ಮಿ ತೀರಿಕೊಂಡಿದ್ದಾರೆ'' ಎಂಬ ಸುಳ್ಳು ಸುದ್ದಿಗಳಿಂದ ಬೇಸೆತ್ತ ನಟಿ ವಿಜಯಲಕ್ಷ್ಮಿ ಇತ್ತೀಚೆಗಷ್ಟೇ ಕನ್ನಡದ ಸುವರ್ಣ ನ್ಯೂಸ್ 24*7 ಸುದ್ದಿ ವಾಹಿನಿಯಲ್ಲಿ ಪ್ರತ್ಯಕ್ಷವಾದರು.

  ಜೀವನದಲ್ಲಿ ಬಹಳ ನೊಂದಿರುವ ನಟಿ ವಿಜಯಲಕ್ಷ್ಮಿ ಇದೀಗ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಾರೆ. ಒಂದ್ಕಾಲದಲ್ಲಿ ನಂಬರ್ 1 ನಟಿಯಾಗಿ ಮೆರೆದ ನಟಿ ವಿಜಯಲಕ್ಷ್ಮಿ ಸದ್ಯ ಆರ್ಥಿಕ ಸಂಕಷ್ಟದಲ್ಲಿದ್ದಾರೆ.

  ಸಂಕಷ್ಟಕ್ಕೆ ಸಿಲುಕಿರುವ ನಟಿ ವಿಜಯಲಕ್ಷ್ಮಿಗೆ ಸಹಾಯ ಹಸ್ತ ಚಾಚಲು ಕನ್ನಡ ಚಿತ್ರರಂಗ ಮುಂದಾಗಿದೆ. ನಟಿ ವಿಜಯಲಕ್ಷ್ಮಿಗೆ ತಾರಾ, ಸಾರಾ ಗೋವಿಂದು, ಪ್ರಿಯಾ ಹಾಸನ್, ನಾಗೇಂದ್ರ ಪ್ರಸಾದ್ ಸೇರಿದ ಹಲವರು ಮಾನಸಿಕ ಸ್ಥೈರ್ಯ ತುಂಬಿದ್ದಾರೆ.

  ''ನಿಮ್ಮ ಜೊತೆ ನಾನಿರುವೆ'' ಎನ್ನುವ ಮೂಲಕ 'ನವಶಕ್ತಿ ವೈಭವ' ಎಂಬ ಚಿತ್ರದಲ್ಲಿ ವಿಜಯಲಕ್ಷ್ಮಿ ಜೊತೆಗೆ ತೆರೆ ಹಂಚಿಕೊಂಡಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಕೂಡ ಧೈರ್ಯ ನೀಡಿದ್ದಾರೆ. ಮುಂದೆ ಓದಿರಿ...

  [ಕೃಪೆ: ಸುವರ್ಣ ನ್ಯೂಸ್ 24*7]

  ರಾಧಿಕಾ ಕುಮಾರಸ್ವಾಮಿ ಏನಂದರು.?

  ರಾಧಿಕಾ ಕುಮಾರಸ್ವಾಮಿ ಏನಂದರು.?

  ''ಯಾವುದಕ್ಕೂ ಕುಗ್ಗದೆ, ಸಂತೋಷವಾಗಿರಿ. ನಿಮ್ಮ ಜೊತೆ ನಾನಿರುವೆ. ನಾವೆಲ್ಲ ಕಷ್ಟ ಪಟ್ಟು, ಯಾರ ಸಪೋರ್ಟ್ ಇಲ್ಲದೆ ಮೇಲೆ ಬಂದಿರೋರು. ಹೀಗಾಗಿ, ನೀವು ಸ್ಟ್ರಾಂಗ್ ಆಗಿ ಇರಬೇಕು. ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ'' ಎಂದು ವಿಜಯಲಕ್ಷ್ಮಿಗೆ ಧೈರ್ಯ ತುಂಬಿದರು ನಟಿ ರಾಧಿಕಾ ಕುಮಾರಸ್ವಾಮಿ, ನಟಿ

  ವಿಜಯಲಕ್ಷ್ಮಿ ಕುಟುಂಬಕ್ಕೆ ನಟಿ ಜಯಪ್ರದ ಸಹೋದರ ಕೊಟ್ಟ ಯಮಯಾತನೆ ಅಷ್ಟಿಷ್ಟಲ್ಲ.!ವಿಜಯಲಕ್ಷ್ಮಿ ಕುಟುಂಬಕ್ಕೆ ನಟಿ ಜಯಪ್ರದ ಸಹೋದರ ಕೊಟ್ಟ ಯಮಯಾತನೆ ಅಷ್ಟಿಷ್ಟಲ್ಲ.!

  ನಟಿ ತಾರಾ ಹೇಳಿದಿಷ್ಟು...

  ನಟಿ ತಾರಾ ಹೇಳಿದಿಷ್ಟು...

  ''ವಿಜಯಲಕ್ಷ್ಮಿ ಜೊತೆ ನಾನು ಕೂಡ ಆಕ್ಟ್ ಮಾಡಿದ್ದೇನೆ. ಆಕೆ ಮತ್ತೆ ಕನ್ನಡ ಚಿತ್ರರಂಗಕ್ಕೆ ವಾಪಸ್ ಬರಬೇಕು, ಇಲ್ಲಿ ಬಿಜಿ ನಟಿ ಆಗಬೇಕು, ಅವರ ಮನೆಯಲ್ಲಿ ಎಲ್ಲರೂ ಸಂತೋಷವಾಗಿರಬೇಕು ಅಂತ ನಾನು ಹಾರೈಸುತ್ತೇನೆ'' ಎಂದರು ನಟಿ ತಾರಾ.

  ವಿಜಯಲಕ್ಷ್ಮಿಗೆ 'ಚಪ್ಪಲಿ' ವಿಜಿ ಅಂದಿದ್ಯಾರು.? ವರ್ಷಗಳ ಬಳಿಕ ವಿವಾದದ ಸತ್ಯ ಅನಾವರಣ..ವಿಜಯಲಕ್ಷ್ಮಿಗೆ 'ಚಪ್ಪಲಿ' ವಿಜಿ ಅಂದಿದ್ಯಾರು.? ವರ್ಷಗಳ ಬಳಿಕ ವಿವಾದದ ಸತ್ಯ ಅನಾವರಣ..

  ನಾಗೇಂದ್ರ ಪ್ರಸಾದ್ ಹೇಳಿದ್ದೇನು.?

  ನಾಗೇಂದ್ರ ಪ್ರಸಾದ್ ಹೇಳಿದ್ದೇನು.?

  ''ವಿಜಯಲಕ್ಷ್ಮಿಯವರು ಬೆಂಗಳೂರಿಗೆ ಬಂದಿದ್ದಾರೆ ಅಂತ ನನಗೆ ಗೊತ್ತಿರಲಿಲ್ಲ. ಕನ್ನಡ ಚಿತ್ರರಂಗ ಯಾರನ್ನೂ ಕೈಬಿಡುವುದಿಲ್ಲ. ಅವರ ಕಷ್ಟಕ್ಕೆ ಸ್ಯಾಂಡಲ್ ವುಡ್ ಖಂಡಿತ ಸ್ಪಂದಿಸುತ್ತದೆ'' - ನಾಗೇಂದ್ರ ಪ್ರಸಾದ್, ನಿರ್ದೇಶಕರ ಸಂಘದ ಅಧ್ಯಕ್ಷ

  ಫಿಲ್ಮ್ ಚೇಂಬರ್ ಅಧ್ಯಕ್ಷರ ಮಾತು

  ಫಿಲ್ಮ್ ಚೇಂಬರ್ ಅಧ್ಯಕ್ಷರ ಮಾತು

  ''ನನ್ನ ಚಿತ್ರದ ನಾಯಕಿ ಅವರು. 'ರಂಗಣ್ಣ' ಸಿನಿಮಾ ಸೂಪರ್ ಡ್ಯೂಪರ್ ಹಿಟ್ ಆಯ್ತು. ವಿಜಯಲಕ್ಷ್ಮಿ ಅವರ ಫ್ಯಾಮಿಲಿ ಕೂಡ ನನಗೆ ಗೊತ್ತು. ಆಕೆಗೆ ಅವಕಾಶಕ್ಕಿಂತ ಹೆಚ್ಚಾಗಿ ಮೊದಲು ಆರ್ಥಿಕ ಸಹಾಯ ಮಾಡಬೇಕಾಗಿದೆ. ಅಂತಹ ಕೆಲಸ ನಾನು ಮಾಡುವೆ'' - ಸಾರಾ ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ.

  ನಿರ್ಮಾಪಕ ಸುರೇಶ್ ಹೀಗಂದ್ರು

  ನಿರ್ಮಾಪಕ ಸುರೇಶ್ ಹೀಗಂದ್ರು

  ''ಆಕೆ ತುಂಬಾ ಒಳ್ಳೆಯ ನಟಿ. ಆಕೆಯ ಕಥೆ ಕೇಳಿ ನನ್ನ ಮನಸ್ಸಿಗೆ ತುಂಬಾ ಬೇಸರ ಆಯ್ತು. ನಮ್ಮ ಚಿತ್ರರಂಗ ಆಕೆಯ ಹಿಂದೆ ಖಂಡಿತ ಇರುತ್ತದೆ'' ನಿರ್ಮಾಪಕ ಸುರೇಶ್

  ಭರವಸೆ ನೀಡಿದ ಟಿ.ಎ.ಶರವಣ

  ಭರವಸೆ ನೀಡಿದ ಟಿ.ಎ.ಶರವಣ

  ''ವೈಯುಕ್ತಿಕವಾಗಿ ಕೂಡ ಸಹಾಯ ಮಾಡುವೆ. ಸರ್ಕಾರದ ವತಿಯಿಂದ ಕೂಡ ಸಹಾಯ ಮಾಡಲು ಪ್ರಯತ್ನ ಮಾಡುವೆ'' ಎಂದು ಟಿ.ಎ.ಶರವಣ ಭರವಸೆ ನೀಡಿದರು

  ಪ್ರಿಯಾ ಹಾಸನ್ ಏನಂದರು.?

  ಪ್ರಿಯಾ ಹಾಸನ್ ಏನಂದರು.?

  ''ನನಗೂ ತಂದೆ-ತಾಯಿ ಇಲ್ಲ. ಇತ್ತೀಚೆಗಷ್ಟೇ ನಾನು ಮದುವೆ ಅದೆ. ನನಗೆ ಗಂಡ ಬಿಟ್ಟರೆ ಇನ್ಯಾರೂ ಇಲ್ಲ. ಅವರು ಧೈರ್ಯ ತೆಗೆದುಕೊಳ್ಳಬೇಕು'' ಎಂದರು ನಟಿ ಪ್ರಿಯಾ ಹಾಸನ್.

  English summary
  Kannada Actress Radhika Kumaraswamy is ready to help Kannada Actress Vijayalakshmi

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X