For Quick Alerts
  ALLOW NOTIFICATIONS  
  For Daily Alerts

  ರಾಜಕೀಯ ಎಂಟ್ರಿ ಬಗ್ಗೆ ರಾಧಿಕಾ ಕುಮಾರಸ್ವಾಮಿ ಹೇಳಿದ್ದೇನು?

  |

  ನಟಿ ರಾಧಿಕಾ ಕುಮಾರಸ್ವಾಮಿ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಭೈರಾದೇವಿ ಮತ್ತು ದಮಯಂತಿ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಸದ್ಯ ಎರಡು ಚಿತ್ರಗಳ ಚಿತ್ರೀಕರಣ ಮುಗಿದಿದ್ದು ಟೀಸರ್ ರಿಲೀಸ್ ಮತ್ತು ಟ್ರೈಲರ್ ರಿಲೀಸ್ ಅಂತ ಬ್ಯುಸಿಯಾಗಿದ್ದಾರೆ.

  ಇತ್ತೀಚಿಗಷ್ಟೆ ಬಹು ನಿರೀಕ್ಷೆಯ ದಮಯಂತಿ ಚಿತ್ರದ ಟೀಸರ್ ರಿಲೀಸ್ ಮಾಡಿದೆ ಚಿತ್ರತಂಡ. ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ರೌದ್ರಾವತಾರ ತಾಳಿದ್ದಾರೆ. ವಿಭಿನ್ನ ಗೆಟಪ್ ನಲ್ಲಿ ಕಣಿಸಿಕೊಂಡಿರುವ ರಾಧಿಕಾ ಲುಕ್ ಗೆ ಚಿತ್ರಾಭಿಮಾನಿಗಳು ಫಿದಾ ಆಗಿದ್ದಾರೆ.

  ಪಂಚ ಭಾಷೆಯಲ್ಲಿ ಮಿಂಚಲಿದ್ದಾರೆ ರಾಧಿಕಾ ಕುಮಾರಸ್ವಾಮಿಪಂಚ ಭಾಷೆಯಲ್ಲಿ ಮಿಂಚಲಿದ್ದಾರೆ ರಾಧಿಕಾ ಕುಮಾರಸ್ವಾಮಿ

  ಅಂದ್ಹಾಗೆ ಟೀಸರ್ ರಿಲೀಸ್ ಸಮಯದಲ್ಲಿ ಮಾತನಾಡಿದ ರಾಧಿಕಾ ರಾಜಕೀಯ ಎಂಟ್ರಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ರಾಧಿಕಾ ಕುಮಾರಸ್ವಾಮಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದ್ರೀಗ ಬಗ್ಗೆ ಈಗ ಸ್ವತಹ ರಾಧಿಕಾ ಅವರೆ ಸ್ಪಷ್ಟಪಡಿಸಿದ್ದಾರೆ.

  "ನನಗೆ ಸಿನಿಮಾ ಅಂದ್ರೆ ತುಂಬ ಇಷ್ಟ ಎಂದಿರುವ ಸ್ವೀಟಿ ಚಿಕ್ಕವಯಸ್ಸಿನಿಂದ ಸಿನಿಮಾ ಅಂದ್ರೆ ಜೀವ. ಡ್ಯಾನ್ಸ್ ಅಂದ್ರೆ ಪ್ರಾಣ. ಡ್ಯಾನ್ಸ್ ಮಾಡಲು ಬರಲ್ಲ. ಆದ್ರೆ ನೋಡುತ್ತಲೆ ಡ್ಯಾನ್ಸ್ ಮಾಡುವುದನ್ನು ಕಲಿತಿದ್ದೀನಿ. ಸಿನಿಮಾ ಅಂದ್ರೆ ತಂದೆ ತಾಯಿಗೂ ತುಂಬ ಇಷ್ಟ. ಎಷ್ಟು ದಿನ ಸಿನಿಮಾ ಮಾಡಲು ಸಾಧ್ಯನೋ ಅಷ್ಟು ದಿನ ಸಿನಿಮಾಗಳನ್ನು ಮಾಡುತ್ತೇನೆ. ನಾಯಕಿಯಾಗಲು ಸಾಧ್ಯವಾಗದಿದ್ದರೆ ಸಿನಿಮಾ ನಿರ್ಮಾಣ ಮಾಡುತ್ತೇನೆ" ಎಂದು ಹೇಳಿದ್ದಾರೆ.

  ಈ ಮೂಲಕ ರಾಜಕೀಯ ಎಂಟ್ರಿಯ ಬಗ್ಗೆ ಇದ್ದ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಸದ್ಯ ದಮಯಂತಿ ರಿಲೀಸ್ ಗೆ ಎದುರು ನೋಡುತ್ತಿರುವ ರಾಧಿಕಾ ನವರಾತ್ರಿಗೆ ಮತ್ತೊಂದು ಸಿನಿಮಾ ಅನೌನ್ಸ್ ಮಾಡುವ ಪ್ಲಾನ್ ಮಾಡಿದ್ದಾರಂತೆ. ಭೈರಾದೇವಿ ಮತ್ತು ದಮಯಂತಿ ರಿಲೀಸ್ ಆದ ನಂತರ ಹೊಸ ಸಿನಿಮಾಗೆ ಗ್ರೀನ್ ಸಿಗ್ನಸ ನೀಡಲಿದ್ದಾರೆ ರಾಧಿಕಾ.

  English summary
  Kannada actress Radhika Kumaraswamy speak about Political entry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X