For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಿನ್ಸಸ್ ರಾಧಿಕಾ ಪಂಡಿತ್

  By Suneetha
  |

  ಸ್ಯಾಂಡಲ್ ವುಡ್ ನ ಪ್ರಿನ್ಸಸ್ ರಾಧಿಕಾ ಪಂಡಿತ್ ಅವರಿಗೆ ಇಂದು (ಮಾರ್ಚ್ 7) ಹುಟ್ಟುಹಬ್ಬದ ಸಂಭ್ರಮ. ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟಿ ರಾಧಿಕಾ ಪಂಡಿತ್ ಅವರು ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಬಹು ಬೇಡಿಕೆಯುಳ್ಳ ನಟಿ.

  ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ನಟಿಯರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿ ರಾಧಿಕಾ ಪಂಡಿತ್ ಅವರಿಗೆ ಹುಟ್ಟು ಹಬ್ಬದ ಅಂಗವಾಗಿ ಟ್ವಿಟ್ಟರ್ ಮತ್ತು ಫೇಸ್ ಬುಕ್ಕ್ ಗಳಲ್ಲಿ ಶುಭಾಶಯಗಳ ಸುರಿಮಳೆಯೇ ಸುರಿಯುತ್ತಿದೆ.[ಯಶ್ 'ರಾಮಾಚಾರಿ' ತೆಲುಗಿನಲ್ಲಿ ಸೌಂಡ್ ಮಾಡೋದು ಪಕ್ಕಾ]

  ಮೊದಲ ಬಾರಿಗೆ ನಿರ್ದೇಶಕ ಅಶೋಕ್ ಕಶ್ಯಪ್ ಅವರ 'ನಂದ ಗೋಕುಲ' ಧಾರಾವಾಹಿ ಮೂಲಕ ಕಿರುತೆರೆ ಕ್ಷೇತ್ರಕ್ಕೆ ಕಾಲಿಟ್ಟು ಅಲ್ಲಿ 'ಸತ್ಯ' ಎಂಬ ಹೆಸರಿನಲ್ಲಿ ಎಲ್ಲರ ಮನೆ-ಮನದಲ್ಲಿಯೂ ಜಾಗ ಗಳಿಸಿದ್ದರು. ತದನಂತರ 2008 ರಲ್ಲಿ ಬಿಡುಗಡೆ ಆದ 'ಮೊಗ್ಗಿನ ಮನಸು' ಚಿತ್ರದಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿ ಎಲ್ಲರ ಅಚ್ಚುಮೆಚ್ಚಿನ ನಟಿಯಾದರು.[ಯಶ್-ರಾಧಿಕಾ ಪಂಡಿತ್ ಚಿತ್ರದ ಟೈಟಲ್ ಮತ್ತೆ ಬದಲಾಯಿತೆ?]

  ಮೊದಲು ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ '18th ಕ್ರಾಸ್' ಎಂಬ ಚಿತ್ರದ ಮೂಲಕ ಕಾಲಿಟ್ಟಾರಾದರೂ ಅಷ್ಟಾಗಿ ಯಶಸ್ಸು ಗಳಿಸಲಿಲ್ಲ. ಜೊತೆಗೆ ಆ ಸಿನಿಮಾದ ಬಗ್ಗೆ ಅಷ್ಟಾಗಿಯೂ ಮಾಹಿತಿ ಇಲ್ಲ. ಮುಂದೆ ಓದಿ....

  ಪ್ರಶಸ್ತಿಗಳ ಸುರಿಮಳೆ

  ಪ್ರಶಸ್ತಿಗಳ ಸುರಿಮಳೆ

  'ಮೊಗ್ಗಿನ ಮನಸು' ಚಿತ್ರದ ಅಭಿನಯಕ್ಕೆ ನಟಿ ರಾಧಿಕಾ ಪಂಡಿತ್ ಅವರಿಗೆ 'ಉತ್ತಮ ನಟಿ' ಎಂಬ ಪ್ರಶಸ್ತಿ ಲಭಿಸಿತು. ಇನ್ನು ಪ್ರಿನ್ಸಸ್ ರಾಧಿಕಾ ಪಂಡಿತ್ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿದಂತೆ ಮೂರು ಸೌತ್ ಫಿಲಂಫೇರ್ ಪ್ರಶಸ್ತಿ ಲಭಿಸಿದೆ.['ZOOಮ್' ಚಿತ್ರಕ್ಕೆ 'ಗಾನ ಕೋಗಿಲೆ' ಆದರು ನಟಿ ರಾಧಿಕಾ ಪಂಡಿತ್!]

  ಜನಪ್ರಿಯ ನಟಿ

  ಜನಪ್ರಿಯ ನಟಿ

  2009 ರಲ್ಲಿ ನಟಿಸಿದ 'ಲವ್ ಗುರು' ಹಾಗೂ 2010 ರಲ್ಲಿ ನಟ ಅಜೇಯ್ ರಾವ್ ಅವರ ಜೊತೆ ನಟಿಸಿದ 'ಕೃಷ್ಣನ್ ಲವ್ ಸ್ಟೋರಿ' ಚಿತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಲ್ಲದೆ, ಉತ್ತಮ ಅಭಿನಯಕ್ಕೆ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡು ಜನಪ್ರಿಯ ನಟಿಯಾಗಿ ಹೊರಹೊಮ್ಮಿದರು.

  ಹುಟ್ಟೂರು ಬೆಂಗಳೂರು

  ಹುಟ್ಟೂರು ಬೆಂಗಳೂರು

  ಬೆಂಗಳೂರಿನಲ್ಲಿ ಜನಿಸಿರುವ ನಟಿ ರಾಧಿಕಾ ಅವರ ತಂದೆ ಕೃಷ್ಣ ಪ್ರಸಾದ್ ಪಂಡಿತ್, ತಾಯಿ ಮಂಗಳಾ. ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿದ ನಟಿ ಬೆಂಗಳೂರಿನಲ್ಲಿಯೇ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ್ದಾರೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಡಿಗ್ರಿ ಪೂರೈಸಿದ್ದಾರೆ.

  ಮುಟ್ಟಿದ್ದೆಲ್ಲಾ ಚಿನ್ನ

  ಮುಟ್ಟಿದ್ದೆಲ್ಲಾ ಚಿನ್ನ

  ಮುದ್ದು ಮುಖದ ಬೆಡಗಿ ರಾಧಿಕಾ ಅವರು ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತೆ ಅವರು ನಟಿಸಿದ 'ಹುಡುಗರು', 'ಅದ್ಧೂರಿ', 'ಬಹದ್ದೂರ್', 'ಮಿ.ಅಂಡ್.ಮಿಸಸ್ ರಾಮಾಚಾರಿ' ಚಿತ್ರಗಳು ಬಾಕ್ಸಾಫೀಸ್ ನಲ್ಲಿ ಸೂಪರ್ ಹಿಟ್ ಆದವು.

  ಧಾರಾವಾಹಿಗಳಲ್ಲೂ ಸೈ ಎನಿಸಿಕೊಂಡಾಕೆ

  ಧಾರಾವಾಹಿಗಳಲ್ಲೂ ಸೈ ಎನಿಸಿಕೊಂಡಾಕೆ

  ಸಿನಿಮಾ ಕ್ಷೇತ್ರಕ್ಕೆ ಬರುವ ಮೊದಲು ರಾಧಿಕಾ ಪಂಡಿತ್ ಅವರು 'ನಂದ ಗೋಕುಲ', ಸುಮಂಗಲಿ', ಹಾಗೂ 'ಕಾದಂಬರಿ' ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಸದ್ಯಕ್ಕೆ ಪುನೀತ್ ಅವರ ಜೊತೆ ಕಾಣಿಸಿಕೊಂಡಿರುವ 'ದೊಡ್ಮನೆ ಹುಡುಗ' ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ.

  ಹ್ಯಾಪಿ ಬರ್ತ್ ಡೇ ರಾಧಿಕಾ

  ಹ್ಯಾಪಿ ಬರ್ತ್ ಡೇ ರಾಧಿಕಾ

  ಹಿಟ್ ಸಿನಿಮಾಗಳನ್ನು ಕೊಟ್ಟು ಯಶಸ್ಸಿನ ತುತ್ತ ತುದಿಯಲ್ಲಿರುವ ನಟಿ ರಾಧಿಕಾ ಪಂಡಿತ್ ಅವರಿಗೆ ನಮ್ಮ ಕಡೆಯಿಂದಲೂ ಹುಟ್ಟುಹಬ್ಬದ ಶುಭಾಶಯಗಳು.

  English summary
  Kannada Actress Radhika Pandit celebrates her birthday March 7th. Born to an ultimate traditional Pandit's family, Radhika Pandit completed her schooling from Cluny Convent High School and later pursued a Bachelor of Commerce, at the Mount Carmel College, Bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X