ರಾಧಿಕಾ ಪಂಡಿತ್ ಮತ್ತೆ ಗರ್ಭಿಣಿ : 2ನೇ ಮಗುವಿಗೆ ಅಪ್ಪ ಆಗುತ್ತಿರುವ ಯಶ್
Recommended Video

ಸ್ಯಾಂಡಲ್ ವುಡ್ ನ ರಾಕಿಂಗ್ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಮೊದಲ ಮಗುವಿಗೆ ಆಯ್ರಾ ಅಂತ ನಾಮಕರಣ ಮಾಡಿದ್ದ ಈ ಜೋಡಿ ಈಗ ಮತ್ತೊಂದು ಮಗುವಿನ ನಿರೀಕ್ಷೆಯ ಬಗ್ಗೆ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಹೌದು, ರಾಧಿಕಾ ಮತ್ತೆ ಗರ್ಭಿಣಿ ಆಗಿದ್ದಾರೆ. ಎರಡನೆ ಮಗುವಿಗೆ ತಾಯಿಯಾಗುತ್ತಿದ್ದಾರೆ. ಮೊದಲ ಮಗುವಿಗೆ ಇನ್ನು ಆರು ತಿಂಗಳು. ಆಗಲೆ ಯಶ್ ಮತ್ತೊಂದು ಮಗುವಿಗೆ ತಂದೆಯಾಗುತ್ತಿರುವ ಸಂತಸವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಯಶ್ ವೈಜಿಎಪ್ ಚಾಪ್ಟರ್ -2 ಎಂದು ಹೇಳಿ ಮಗಳ ವೀಡಿಯೋವನ್ನು ಶೇರ್ ಮಾಡಿದ್ದಾರೆ. ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಆಯ್ರಾ ಹೇಳುತ್ತಿರುವ ಹಾಗೆ ವೀಡಿಯೋ ಮಾಡಿ ಹರಿಬಿಡಲಾಗಿದೆ.

ಆಯ್ರಾ ನಾಮಕರಣದಲ್ಲೆ ನೀಡಿದ್ರು ಸುಳಿವು
ಇತ್ತೀಚಿಗಷ್ಟೆ ಮೊದಲ ಮಗಳ ನಾಮಕಾರಣದ ಮಾಡಲಾಗಿದೆ. ಆ ಸಂದರ್ಭದಲ್ಲೆ ರಾಧಿಕಾ ಅವರು ಗರ್ಭಿಣಿ ಆಗಿರುವ ಬಗ್ಗೆ ಗೊತ್ತಾಗುತ್ತಿದೆ. ನಾಮಕರಣ ವೇಳೆ ಗೋಲ್ಡನ್ ಬಣ್ಣದ ಸೀರೆ ಧರಿಸಿದ್ದ ರಾಧಿಕಾ ಅವರ ಬೇಬಿ ಬಂಪ್ ಎರಡನೇ ಬಾರಿ ತಾಯಿಯಾಗುತ್ತಿರುವ ಸುಳಿವು ನೀಡುತ್ತಿದೆ. ಆದ್ರೆ ಇಂದು ಅಧಿಕೃತವಾಗಿ ಬಹಿರಂಗ ಪಡಿಸಿದ್ದಾರೆ ಯಶ್ ದಂಪತಿ.

ಡಿಸೆಂಬರ್ ನಲ್ಲಿ ಮೊದಲ ಮಗು ಜನನ
ಕಳೆದ ವರ್ಷ ಡಿಸೆಂಬರ್ ನಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ್ರು ರಾಧಿಕಾ. ಡಿಸೆಂಬರ್ 2 ರಂದು ರಾಧಿಕಾ ಆಯ್ರಾಗೆ ಜನ್ಮ ನೀಡಿದ್ದಾರೆ. ಈಗ ಆಯ್ರಾಗೆ ಆರು ತಿಂಗಳು ಕಳೆದು ಏಳನೆ ತಿಂಗಳು ನಡೆಯುತ್ತಿದೆ. ಆಗಲೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಅಚ್ಚರಿಯ ಜೊತೆಗೆ ಸಂತಸ ಪಡುತ್ತಿದ್ದಾರೆ ಅಭಿಮಾನಿಗಳು.

ಡಿಸೆಂಬರ್ ಗೆ ಎರಡನೆ ಮಗು ಜನನ
ಕಳೆದ ಡಿಸೆಂಬರ್ ಗೆ ಮೊದಲ ಮಗುವಿಗೆ ಜನ್ಮ ನೀಡಿದ್ದ ರಾಧಿಕಾ. ಎರಡನೆ ಮಗು ಕೂಡ ಈ ವರ್ಷ ಡಿಸೆಂಬರ್ ಸಮಯದಲ್ಲಿ ಜನಿಸಲಿದೆ. ಸದ್ಯ ರಾಧಿಕಾ ಅವರು ಮೂರು ತಿಂಗಳ ಗರ್ಭಿಣಿ ಆಗಿದ್ರೆ ಎರಡನೇ ಮಗು ಕೂಡ ಡಿಸೆಂಬರ್ ಸಮಯದಲ್ಲಿ ಜನಿಸಲಿದೆ. ಒಂದು ವರ್ಷದ ಅಂತರದಲ್ಲೆ ಎರಡು ಮಕ್ಕಳ ತಾಯಿಯಾಗುತ್ತಿದ್ದಾರೆ ರಾಧಿಕಾ.

ಇತ್ತೀಚಿಗೆ ನಡೆದಿದೆ ಮೊದಲ ಮಗುವಿನ ನಾಮಕರಣ
ಇತ್ತಿಚಿಗಷ್ಟೆ ಮೊದಲ ಮಗಳ ನಾಮಕರಣ ಮಾಡಿದ್ದಾರೆ ಯಶ್ ದಂಪತಿ. ಸರಳವಾಗಿ ಸಂಪ್ರದಾಯ ಬದ್ದವಾಗಿ ನಾಮಕರಣ ಸಮಾರಂಭ ಮಾಡುವ ಮೂಲಕ ಮಗಳಿಗೆ ಆಯ್ರಾ ಎಂದು ಹೆಸರಿಟ್ಟಿದ್ದಾರೆ. ನಾಮಕರಣ ಸಮಾರಂಭಕ್ಕೆ ಕುಟುಂಬದವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಮುದ್ದು ಮಗಳಿಗೆ ಆರು ತಿಂಗಳಾದ ಹಿನ್ನಲೆಯಲ್ಲಿ ಮುದ್ದಾದ ಫೋಟೋಶೂಟ್ ಕೂಡ ಮಾಡಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಆಯ್ರಾ ಫೋಟೋಗಳು ವೈರಲ್ ಆಗಿವೆ. ಮೊದಲ ಮಗುವಿನ ಆರೈಕೆಯಲ್ಲಿರುವ ರಾಧಿಕಾ ಈಗ ಎರಡನೆ ಬಾರಿ ಗರ್ಭಿಣಿ ಆಗುತ್ತಿದ್ದಾರೆ.


Click it and Unblock the Notifications











