ಮದುವೆಗೂ ಮುಂಚೆ ರಾಧಿಕಾ ಪಂಡಿತ್ ಕೊನೆ ಪಾರ್ಟಿ !
'ಯಶ್ ಹಾಗೂ ರಾಧಿಕಾ ಪಂಡಿತ್' ಮದುವೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಮತ್ತೊಂದೆಡೆ ರಾಕಿಂಗ್ ಸ್ಟಾರ್ ಯಶ್ ಚಿತ್ರರಂಗದ ಗಣ್ಯರಿಗೆ, ರಾಜಕೀಯ ಗಣ್ಯರಿಗೆ ಮದುವೆಯ ಆಮಂತ್ರಣ ನೀಡುತ್ತಿದ್ದಾರೆ.
ಆದ್ರೆ, ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಅವರು ಮಾತ್ರ ಪಾರ್ಟಿ ಮೂಡ್ ನಲ್ಲಿದ್ದಾರೆ. ಹೌದು, ಹುಡುಗಿ ಕಡೆಯಿಂದ ಗಣ್ಯರಿಗೆ ಮದುವೆ ಆಮಂತ್ರಣ ನೀಡುತ್ತಿರುವ ರಾಧಿಕಾ, ಈ ಮಧ್ಯೆ ತಮ್ಮ ಸ್ನೇಹಿತೆಯರ ಜೊತೆ ಬ್ಯಾಚಿಲ್ಲೋರೆಟ್ (Bachelorette) ಪಾರ್ಟಿಯನ್ನ ಎಂಜಾಯ್ ಮಾಡುತ್ತಿದ್ದಾರೆ.[ರಾಧಿಕಾ ಪಂಡಿತ್ - ಯಶ್ ಮದುವೆ: ಸೂಪರ್ ಸ್ಪೆಷಾಲಿಟಿಗಳು ಏನೇನು.?]

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಕಲ್ಯಾಣಕ್ಕೆ ಕೆಲವೇ ದಿನಗಳು ಮಾತ್ರ ಬಾಕಿಯಿದೆ. ಡಿಸೆಂಬರ್ 9 ರಂದು 'ಯಶ್-ರಾಧಿಕಾ' ಅವರ ಮದುವೆ ನೆರೆವೇರಲಿದ್ದು, ಇಬ್ಬರು ಕೌಟುಂಬಿಕ ಜೀವನಕ್ಕೆ ಕಾಲಿಡಲಿದ್ದಾರೆ. ಹೀಗಾಗಿ ಮದುವೆಯ ನಂತರ ಬ್ಯಾಚುಲರ್ ಜೀವನವನ್ನ ಎಂಜಾಯ್ ಮಾಡಲು ಸಾಧ್ಯವಿಲ್ಲ. ಆದ್ದರಿಂದ ರಾಧಿಕಾ ಪಂಡಿತ್ ಅವರು, ತಮ್ಮ ಕೊನೆಯ ಬ್ಯಾಚಿಲ್ಲೋರೆಟ್ (Bachelorette) ಪಾರ್ಟಿಯನ್ನ ತಮ್ಮ ಫ್ರೆಂಡ್ಸ್ ಜೊತೆ ಸೆಲೆಬ್ರೇಟ್ ಮಾಡಿದ್ದಾರೆ.[ಯಶ್-ರಾಧಿಕಾ ಮದುವೆ: ಹುಡುಗಿ ಕಡೆಯ 'ಆಹ್ವಾನ ಪತ್ರಿಕೆ' ರೆಡಿ]

ಕೊನೆಯ ಬ್ಯಾಚಿಲ್ಲೋರೆಟ್ (Bachelorette) ಪಾರ್ಟಿಯ ಸಂಭ್ರಮದ ಕ್ಷಣಗಳನ್ನ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಅಪಲೋಡ್ ಮಾಡಿರುವ ರಾಧಿಕಾ ಪಂಡಿತ್, ಅಭಿಮಾನಿಗಳ ಜೊತೆ ಸಂತಸವನ್ನ ವ್ಯಕ್ತಪಡಿಸಿಕೊಂಡಿದ್ದಾರೆ.[ನೀವು ನೋಡದೆ ಇರುವ ಯಶ್-ರಾಧಿಕಾ ಪರ್ಸನಲ್ ಫೋಟೋ ಆಲ್ಬಂ]


Click it and Unblock the Notifications











