ಕಾಫಿ ದೊರೆ ಸಿದ್ದಾರ್ಥ್ ಸಾವು : ಸುದ್ದಿ ಕೇಳಿ ಆಘಾತಗೊಂಡ ರಾಗಿಣಿ
ಕಾಫಿ ಕಿಂಗ್ ಎಂದೇ ಜನಪ್ರಿಯತೆ ಪಡೆದಿದ್ದ ಸಿದ್ದಾರ್ಥ್ ನಿಧನರಾಗಿದ್ದಾರೆ. ಇವರ ಸಾವಿನ ಸುದ್ದಿ ಕೇಳಿ ನಟಿ ರಾಗಿಣಿ ದ್ವಿವೇದಿ ದುಃಖದಲ್ಲಿ ಇದ್ದಾರೆ. ಈ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ರಾಗಿಣಿ ಮಾತನಾಡಿದ್ದಾರೆ.
''ವೈಯಕ್ತಿಕವಾಗಿ ಸಿದ್ದಾರ್ಥ್ ಅವರು ಅಷ್ಟೊಂದು ಗೊತ್ತಿಲ್ಲ. ಆದರೆ, ಒಮ್ಮೆ ಒಂದು ಕಾರ್ಯಕ್ರಮದಲ್ಲಿ ಅವರನ್ನು ಭೇಟಿ ಮಾಡಿದ್ದೆ. ಅವರು ತುಂಬ ಒಳ್ಳೆಯ ವ್ಯಕ್ತಿ. ತುಂಬ ಜನರಿಗೆ ಸಹಾಯ ಮಾಡಿದ್ದಾರೆ. ಈ ಘಟನೆ ತಿಳಿದು ನಾನು ಆಘಾತಗೊಂಡೆ.'' ಎಂದು ರಾಗಿಣಿ ಹೇಳಿದ್ದಾರೆ.
VG Siddhartha LIVE: 'ಟ್ಯಾಕ್ಸ್ ಟೆರರಿಸಂ'ಗೆ ಬಲಿಯಾದ್ರಾ ಸಿದ್ಧಾರ್ಥ?
''ಅಷ್ಟೊಂದು ದೊಡ್ಡ ಮಟ್ಟದ ವ್ಯಕ್ತಿ ಈ ರೀತಿ ನಿಧನ ಹೊಂದುವುದು ದುಃಖದ ಸಂಗತಿ. ಅವರು ಕಷ್ಟದಲ್ಲಿ ಇದ್ದೇನೆ ಎಂದು ಅವರ ಸುತ್ತ ಮುತ್ತ ಇರುವವರಿಗೆ ತಿಳಿಸಿದ್ದರೆ, ಯಾರಾದರೂ ಸಹಾಯ ಮಾಡುತ್ತಿದ್ದರೆನೋ. ಆದರೆ, ಇದನ್ನು ನೋಡಿ ತುಂಬ ಬೇಸರ ಆಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.'' ಎಂದು ರಾಗಿಣಿ ಸಂತಾಪ ಸೂಚಿಸಿದ್ದಾರೆ.

ಎರಡು ವರ್ಷದ ಹಿಂದೆ ಒಂದು ಕಾರ್ಯಕ್ರಮದಲ್ಲಿ ಸಿದ್ದಾರ್ಥ್ ಮತ್ತು ರಾಗಿಣಿ ಇಬ್ಬರು ಅತಿಥಿಗಳಾಗಿ ಹೋಗಿದ್ದರಂತೆ. ಈ ವೇಳೆ ಸಿದ್ದಾರ್ಥ್ ಅವರನ್ನು ರಾಗಿಣಿ ಮೊದಲ ಬಾರಿಗೆ ಭೇಟಿ ಮಾಡಿದ್ದಾರೆ.
ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ನಾಪತ್ತೆಯಾಗಿದ್ದ ಸಿದ್ದಾರ್ಥ್, ಮಂಗಳೂರಿನ ಉಳ್ಳಾಲದ ನೇತ್ರಾವತಿ ಸೇತುವೆ ಬಳಿ ಕಣ್ಮರೆಯಾಗಿದ್ದರು. ಮಂಗಳವಾರ ಬೆಳಗ್ಗಿನಿಂದ ರಾತ್ರಿವರೆಗೂ ಹುಡುಕಾಟ ನಡೆಸಲಾಗಿತ್ತು. ನೇತ್ರಾವತಿ ಸಮುದ್ರ ಸೇರುವ ಮೊದಲೇ ದಂಡೆಯಲ್ಲಿ ಶವ ಇಂದು (ಬುಧವಾರ) ಬೆಳಗ್ಗೆ ಪತ್ತೆಯಾಗಿದೆ.


Click it and Unblock the Notifications











