For Quick Alerts
  ALLOW NOTIFICATIONS  
  For Daily Alerts

  ವಾವ್.! ರಾಗಿಣಿ ಸಖತ್ ಸ್ಲಿಮ್ ಬ್ಯೂಟಿ ಆದ್ರು ಕಣ್ರೀ

  By Suneetha
  |

  ಇತ್ತೀಚೆಗೆ ಸಾಹಸ ಪ್ರದಾನ ಚಿತ್ರಗಳಲ್ಲಿ ಹೆಚ್ಚಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ತೂಕದ ಬಗ್ಗೆ ಹೆಚ್ಚಿನ ಗಮನ ಕೊಡದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರು ಇದೀಗ ಸಾಕಷ್ಟು ಪ್ರಮಾಣದಲ್ಲಿ ತೂಕ ಇಳಿಸಿಕೊಂಡು ತಮ್ಮ ಮೈಮಾಟಕ್ಕೆ ನ್ಯೂ ಲುಕ್ ತಂದಿದ್ದಾರೆ.

  ಹೌದು, ಸಖತ್ ದಪ್ಪ ಆಗಿ ಸ್ಯಾಂಡಲ್ ವುಡ್ ನಲ್ಲಿ ಟಾಕ್ ಆಫ್ ದ ಟಾಪಿಕ್ ಆಗಿದ್ದ ನಟಿ ರಾಗಿಣಿ ದ್ವಿವೇದಿ ಅವರು ಇದೀಗ ಬರೋಬ್ಬರಿ 15 ಕೆ.ಜಿ ತೂಕ ಕಡಿಮೆ ಮಾಡಿಕೊಂಡು ತಮ್ಮ ಮೈಮಾಟಕ್ಕೆ ಮತ್ತಷ್ಟು ಮೆರುಗು ತಂದಿದ್ದಾರೆ.[ಬಾಲಿವುಡ್ ನಲ್ಲೂ ರಾಗಿಣಿ ಅವರ ತುಪ್ಪ ಘಮ ಘಮ ಅನ್ನುತ್ತಿದೆ]

  ಸದ್ಯಕ್ಕೆ 'ನಾನೇ ನೆಕ್ಸ್ಟ್ ಸಿಎಂ' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ತುಪ್ಪದ ಬೆಡಗಿ ರಾಗಿಣಿ ಅವರು ಚಿತ್ರದ ಹಾಡಿನ ಶೂಟಿಂಗ್ ಗಾಗಿ ಮನಾಲಿಗೆ ತೆರಳಿ ಇತ್ತೀಚೆಗಷ್ಟೇ ಬೆಂಗಳೂರಿಗೆ ವಾಪಸಾಗಿದ್ದಾರೆ.[ಇಂದಿನಿಂದ ತುಪ್ಪದ ಬೆಡಗಿ ರಾಗಿಣಿ ಸಿಎಂ]

  'ನಾನೇ ನೆಕ್ಸ್ಟ್ ಸಿಎಂ' ಚಿತ್ರದ ಜೊತೆಗೆ ಜೋ ಸೈಮನ್ ಅವರ ಪುತ್ರ ಜಿತೇಂದ್ರ ಜೋಸೈಮನ್ ಅವರು ಆಕ್ಷನ್-ಕಟ್ ಹೇಳಿರುವ 'ಹುಲಿ ದೇವರ ಕಾಡು' ಚಿತ್ರದ ಶೂಟಿಂಗ್ ನಲ್ಲಿ ಕೂಡ ರಾಗಿಣಿ ಅವರು ಪಾಲ್ಗೊಂಡಿದ್ದಾರೆ. ಹೆಚ್ಚಿನ ವಿವರಗಳನ್ನು ನೋಡಲು ಈ ವಿಡಿಯೋ ನೋಡಿ..

  ಹೆಚ್ಚಿನ ವಿವರಗಳನ್ನು ಓದಿ ಕೆಳಗಿನ ಸ್ಲೈಡುಗಳಲ್ಲಿ..

  ಹುಲಿ ದೇವರಿಗಾಗಿ ತೂಕ ಕಡಿಮೆ

  ಹುಲಿ ದೇವರಿಗಾಗಿ ತೂಕ ಕಡಿಮೆ

  'ಹುಲಿ ದೇವರ ಕಾಡು' ಚಿತ್ರದಲ್ಲಿ ಸುಮಾರು ಐದಾರು ಗೆಟಪ್ ನಲ್ಲಿ ರಾಗಿಣಿ ಅವರು ಕಾಣಿಸಿಕೊಳ್ಳಲಿರುವುದರಿಂದ ಒಂದು ಪಾತ್ರದ ಗೆಟಪ್ ಗೆ ತುಂಬಾ ಸಣ್ಣಗಾಗಬೇಕಿತ್ತೆಂದು ಬರೋಬ್ಬರಿ 15 ಕೆ.ಜಿ ತೂಕ ಇಳಿಸಿಕೊಂಡು ಸ್ಲಿಮ್ ಬ್ಯೂಟಿ ಆಗಿದ್ದಾರೆ.[ಅಯ್ಯೋ ಶಿವಾ..! ರಾಗಿಣಿಗೆ ಇದ್ದಕ್ಕಿದ್ದಂತೆ ಏನಾಯ್ತಪ್ಪಾ.?]

  2 ತಿಂಗಳಿನಿಂದ ಪ್ರಯತ್ನ

  2 ತಿಂಗಳಿನಿಂದ ಪ್ರಯತ್ನ

  ಕಳೆದ ಎರಡೂವರೆ ತಿಂಗಳಿನಿಂದ ತೂಕ ಇಳಿಸಿಕೊಳ್ಳುವಲ್ಲಿ ನಟಿ ರಾಗಿಣಿ ದ್ವಿವೇದಿ ಅವರು ನಿರತರಾಗಿದ್ದು, ಇದಕ್ಕಾಗಿ ಯೋಗಾಸನಗಳನ್ನು ಕೂಡ ಮಾಡಿದ್ದಾರೆ. ಇದರಿಂದ ಸುಮಾರು ಎರಡು ಸಾವಿರ ಕ್ಯಾಲೊರಿಗಳಿಂದ 500 ಕ್ಯಾಲೊರಿ ಇಳಿಸಿದ್ದಾರೆ.[ತುಪ್ಪದ ಬೆಡಗಿ ರಾಗಿಣಿ ಅಭಿನಯದ 'ಅಮ್ಮ' ಸಿನಿಮಾ ನಿಂತ್ಹೋಯ್ತಾ?]

  ಕಷ್ಟ ಆದರೂ ಸಾಧಿಸಿದೆ

  ಕಷ್ಟ ಆದರೂ ಸಾಧಿಸಿದೆ

  'ತೂಕ ಇಳಿಸಿಕೊಳ್ಳುವ ಟೈಮ್ ನಲ್ಲಿ ಹೆಚ್ಚಾಗಿ ದ್ರವ ಸೇವಿಸುತ್ತಿದ್ದೆ, ಅದು ಕಷ್ಟದ ಕೆಲಸ ಆದರೂ ತೂಕ ಇಳಿಸುವ ಗಟ್ಟಿ ಮನಸ್ಸು ಮಾಡಿದ್ದರಿಂದ ಸರಿ ಸುಮಾರು 15 ಕೆ.ಜಿಯಷ್ಟು ತೂಕ ಇಳಿಸಿಕೊಂಡೆ' ಎನ್ನುತ್ತಾರೆ ನಟಿ ರಾಗಿಣಿ ಅವರು.

  ಬಾಲಿವುಡ್ ಗೆ ಆಫರ್

  ಬಾಲಿವುಡ್ ಗೆ ಆಫರ್

  ಈ ನಡುವೆ ಬಾಲಿವುಡ್ ಕ್ಷೇತ್ರಕ್ಕೂ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಲು ರಾಗಿಣಿ ಅವರಿಗೆ ಆಫರ್ ಗಳು ಬರುತ್ತಿವೆಯಂತೆ. ಈ ಬಗ್ಗೆ ಸಣ್ಣ ಸುಳಿವು ನೀಡಿರುವ ರಾಗಿಣಿ ಅವರು ಸದ್ಯದಲ್ಲೇ ಬಿಟೌನ್ ನಲ್ಲಿ ಕಾಣಬಹುದು. 'ಬಾಲಿವುಡ್ ಕ್ಷೇತ್ರಕ್ಕೆ ತೆಳ್ಳಗೆ ಬಳುಕುವ ಬಳ್ಳಿಯಂತಹ ಫಿಗರ್ ಇದ್ದರೆ ಚೆನ್ನಾಗಿರುತ್ತದೆ' ಅಂತ ನಗುತ್ತಾರೆ ರಾಗಿಣಿ.

  ತಮಿಳು-ತೆಲುಗಿನಲ್ಲಿ ಆಫರ್ ಇದೆ

  ತಮಿಳು-ತೆಲುಗಿನಲ್ಲಿ ಆಫರ್ ಇದೆ

  ಈಗಾಗಲೇ ತೆಲುಗಿನ ಒಂದು ಚಿತ್ರಕ್ಕೆ ಹಾಗೂ ತಮಿಳಿನಲ್ಲಿ ಎರಡು ಚಿತ್ರಕ್ಕೆ ಸಹಿ ಹಾಕಿರುವ ರಾಗಿಣಿ ಅವರು ದಕ್ಷಿಣ ಭಾರತದಲ್ಲೂ ಶೈನ್ ಆಗಲು ಕಾಯುತ್ತಿದ್ದಾರೆ. ಇದೆಲ್ಲವನ್ನೂ ನೋಡುತ್ತಿದ್ದರೆ, ರಾಗಿಣಿ ಅವರು ಪಕ್ಕಾ ಪ್ಲ್ಯಾನ್ ಮಾಡಿ ತೂಕ ಕಡಿಮೆ ಮಾಡಿಕೊಂಡಿರಬಹುದು ಅನ್ನೋ ಅನುಮಾನ ಕೂಡ ಕಾಡುತ್ತಿದೆ.

  English summary
  Kannada Actress Ragini Dwivedi is back in the limelight after a three-month hiatus. Actress Ragini drops 15 Kilos.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X