ನಟಿ ರಾಗಿಣಿ ಮೈಸೂರಿನ ವಿಕ್ರಂ ಆಸ್ಪತ್ರೆಗೆ ದಾಖಲು

By Suneetha

ಚಂದನವನದ ತುಪ್ಪದ ಬೆಡಗಿ ರಾಗಿಣಿ ಅವರು ತಲೆಗೆ ಪೆಟ್ಟು ಮಾಡಿಕೊಂಡಿದ್ದಾರಂತೆ. ಅಂದಹಾಗೆ ಇದು ಹೇಗಾಯ್ತು ಅಂದುಕೊಂಡ್ರಾ?

ಹೌದು ಈಗಾಗಲೇ ಸೆಟ್ಟೇರಿ ಶೂಟಿಂಗ್ ಪ್ರಾರಂಭವಾಗಿರುವ ರಾಗಿಣಿ ಅವರ ಹೊಸ 'ನಾನೇ' 'ನೆಕ್ಸ್ಟ್ ಸಿಎಂ' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಬಿದ್ದು ತಲೆಗೆ ತೀವ್ರ ಗಾಯ ಮಾಡಿಕೊಂಡಿದ್ದರು.

ನಿನ್ನೆ (ಆಗಸ್ಟ್ 23) ನಟಿ ರಾಗಿಣಿ ಅವರನ್ನು ಮೈಸೂರಿನ ವಿಕ್ರಂ ಆಸ್ಪತ್ರೆ ಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸಿದ ರಾಗಿಣಿ ಅವರು ಚೇತರಿಸಿಕೊಂಡಿದ್ದಾರೆ.[ಇಂದಿನಿಂದ ತುಪ್ಪದ ಬೆಡಗಿ ರಾಗಿಣಿ ಸಿಎಂ]

ನಿರ್ದೇಶಕ ಮುಸ್ಸಂಜೆ ಮಹೇಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ನಾನೇ' 'ನೆಕ್ಸ್ಟ್ ಸಿಎಂ' ಚಿತ್ರದ ಫೈಟಿಂಗ್ ಸೀನ್ ಒಂದರ ಚಿತ್ರೀಕರಣದ ವೇಳೆ ಸಹ ಕಲಾವಿದರೊಬ್ಬರು ಬೀಸಿದ ಹಾಕಿ ಸ್ಟಿಕ್ ರಾಗಿಣಿ ಅವರ ತಲೆಗೆ ತಾಗಿ ಗಾಯವಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.[ರಾಗಿಣಿ ಜೊತೆ ಅಶ್ಲೀಲ ಮಾತನ್ನಾಡಿದ್ದ ಉಮೇಶ್ ದುರಂತ ಸಾವು]

ಸಾಹಸ ನಿರ್ದೇಶಕ ಮಾಸ್ ಮಾದ ಅವರ ನಿರ್ದೇಶನದಲ್ಲಿ ಕಳೆದ ಮೂರು ದಿನಗಳಿಂದ ಮೈಸೂರಿನ ಹೊರವಲಯದ ಅಲೋಕದಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಸಲಾಗಿದ್ದು, ಇಂತಹ ಸಂದರ್ಭದಲ್ಲಿ ಈ ಒಂದು ಘಟನೆ ನಡೆದಿದೆ.

ರಾಗಿಣಿ ಅವರನ್ನು ಸಿಟಿ ಸ್ಕ್ಯಾನ್ ಹಾಗೂ ಎಂ ಆರ್ ಐ ಸ್ಕ್ಯಾನ್ ಗೆ ಒಳಪಡಿಸಿದ ವಿಕ್ರಂ ಆಸ್ಪತ್ರೆಯ ವೈದ್ಯರು ಅಂತಹ ಏನು ತೊಂದರೆ ಇಲ್ಲ ಆದಷ್ಟು ಬೇಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದರು.[ತುಪ್ಪದ ಬೆಡಗಿ ರಾಗಿಣಿಗೆ ತುಳು ಚಿತ್ರದಲ್ಲಿ ನಟಿಸುವ ಆಸೆ]

ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ವಾಪಸಾಗಿರುವ ನಟಿ ರಾಗಿಣಿ ಅವರು ಮತ್ತೆ 'ನಾನೇ' 'ನೆಕ್ಸ್ಟ್ ಸಿಎಂ' ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಂಡಿರುವುದಾಗಿ ಹಾಗೂ ಅಭಿಮಾನಿಗಳ ಹಾರೈಕೆಗೆ ನಾನು ಋಣಿಯಾಗಿರುತ್ತೇನೆ ಎಂದು ಟ್ವೀಟ್ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

More from Filmibeat

English summary
Kannada actress Ragini Dwivedi was injured during the shooting of the movie 'Naane Next CM' on Sunday(August 23). Now she has recoverd in Vikram Hospital in Mysuru(Mysore). The movie is directed by 'Mussanje Maathu' Mahesh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X