For Quick Alerts
  ALLOW NOTIFICATIONS  
  For Daily Alerts

  ಮತ್ಸ್ಯಕನ್ಯೆ ರಾಗಿಣಿ ದ್ವಿವೇದಿ ಡೈವ್ ಹೊಡೆದಿದ್ದೆಲ್ಲಿ.?

  By Suneetha
  |

  ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರು ಹಲವಾರು ಪ್ರಾಜೆಕ್ಟ್ ಗಳನ್ನು ಕೈಯಲ್ಲಿ ಹಿಡಿದು ಓಡಾಡುತ್ತಿದ್ದು, ಇದರಿಂದಾಗುವ ಒತ್ತಡಗಳನ್ನು ತಗ್ಗಿಸಿಕೊಳ್ಳಲು ಹೊಸದಾಗಿ ಚಿತ್ರಕಲೆ ಬೇರೆ ಅಭ್ಯಾಸ ಮಾಡಿಕೊಂಡಿದ್ದಾರೆ.

  ಅಂದಹಾಗೆ ನಟಿ ರಾಗಿಣಿ ದ್ವಿವೇದಿ ಅವರು ಇತ್ತೀಚೆಗೆ ಶೂಟಿಂಗ್ ನಿಮಿತ್ತ ಮಾಲ್ಡೀವ್ಸ್ ಗೆ ಭೇಟಿ ಕೊಟ್ಟಿದ್ದರು. ಇದೀಗ ಅಲ್ಲಿಂದ ಹಿಂದಿರುಗಿ ಬಂದಿರುವ ರಾಗಿಣಿ ಅವರು ಮತ್ತೊಂದು ಹೊಸ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದಾರೆ.[ಬಿಡುವಿನ ವೇಳೆ ಚಿತ್ರಕಲೆ ಮಾಡಲು ರಾಗಿಣಿಗೆ ಇವರೇ ಸ್ಫೂರ್ತಿ]

  ಹೌದು ನಟಿ ರಾಗಿಣಿ ಅವರು ಸಮುದ್ರದಾಳಕ್ಕೆ ಜಿಗಿದು ಈಜುವ ಆಟ ಸ್ಕೂಬಾ ಡೈವಿಂಗ್ ಮಾಡಿದ್ದರಂತೆ. ಶೂಟಿಂಗ್ ನಿಮಿತ್ತ ವಿದೇಶಕ್ಕೆ ತೆರಳಿದ್ದ ನಟಿ ಬಿಡುವಿನ ವೇಳೆಯಲ್ಲಿ ಸ್ಕೂಬಾ ಡೈವಿಂಗ್ ತರಬೇತಿ ಪಡೆಯಲು ಹೋಗಿದ್ದರು.[ವಾವ್.! ರಾಗಿಣಿ ಸಖತ್ ಸ್ಲಿಮ್ ಬ್ಯೂಟಿ ಆದ್ರು ಕಣ್ರೀ]

  "ಹೊಸ ಹೊಸ ಸಾಹಸಮಯ ಕ್ರೀಡೆಗಳನ್ನು ಕಲಿಯುವುದು ನನ್ನ ಹವ್ಯಾಸ. ಮೊಟ್ಟ ಮೊದಲ ಬಾರಿಗೆ ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್ ನಲ್ಲಿ ಸ್ಕೂಬಾ ಡೈವಿಂಗ್ ಮಾಡಿದ್ದೆ. ಆಗ ನನಗೆ ಇದರ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿತು. ಎನ್ನುವ ರಾಗಿಣಿ ಸ್ಕೂಬಾ ಡೈವಿಂಗ್ ಬಗ್ಗೆ ವಿಶೇಷ ತರಬೇತಿ ಪಡೆದು ಪ್ರಮಾಣ ಪತ್ರ ಪಡೆದಿದ್ದಾರಂತೆ.[ಬಾಲಿವುಡ್ ನಲ್ಲೂ ರಾಗಿಣಿ ಅವರ ತುಪ್ಪ ಘಮ ಘಮ ಅನ್ನುತ್ತಿದೆ]

  ಇನ್ನು ಈ ಆಟವನ್ನು ತಮ್ಮ ಮುಂದಿನ ಚಿತ್ರಗಳಲ್ಲೂ ಬಳಸಿಕೊಳ್ಳಲು ರಾಗಿಣಿ ಅವರು ಉತ್ಸುಕರಾಗಿದ್ದಾರೆ. ಸದ್ಯಕ್ಕೆ ತುಪ್ಪದ ಬೆಡಗಿ ಸಾಕಷ್ಟು ಸ್ಲಿಮ್ ಆಗಿ ಮುಂದಿನ ಪ್ರಾಜೆಕ್ಟ್ ಗಳಿಗೆ ತಯಾರಾಗುತ್ತಿದ್ದಾರೆ.

  English summary
  Kannada Actress Ragini Dwivedi has just returned from a holiday in Maldives. Not one to simply chill-out on her break, the pretty lady has been rather active she went deep-sea diving and even rescued turtles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X