ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ನಟಿ ರಕ್ಷಿತಾ ಹೀಗೆ ಹೇಳಿದ್ದೇಕೆ?

Recommended Video

ಎಲ್ಲರಲ್ಲೂ ಕುತೂಹಲ ಮೂಡಿಸಿದ ರಕ್ಷಿತಾ, ದರ್ಶನ್ ಭೇಟಿ | FILMIBEAT KANNADA

ಸ್ಯಾಂಡಲ್ ವುಡ್ ನ ಸುಂಟರಗಾಳಿ ಜೋಡಿ ಎಂದೇ ಖ್ಯಾತಿ ಗಳಿಸಿದ ದರ್ಶನ್ ಮತ್ತು ರಕ್ಷಿತಾ ವರ್ಷಗಳ ಬಳಿಕ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಒಂದು ಕಾಲದ ಸೂಪರ್ ಹಿಟ್ ಜೋಡಿ ಈಗ ಒಟ್ಟಿಗೆ ಕಾಣಿಸಿಕೊಂಡಿದ್ದು ನೋಡಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಒಂದೆಡೆ ಸ್ಟಾರ್ ವಾರ್, ಅಭಿಮಾನಿಗಳ ಕಿತ್ತಾಟ, ಪೈರಸಿ ಸಮಸ್ಯೆ ನಡುವೆ ಕ್ರೇಜಿ ಕ್ವೀನ್, ದರ್ಶನ್ ಭೇಟಿಯಾಗಿ ಫೋಟೋ ಕ್ಲಿಕ್ಕಿಸಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ.

ಕಲಾಸಿಪಾಳ್ಯ, ಅಯ್ಯ, ಮಂಡ್ಯ ಮತ್ತು ಸುಂಟರಗಾಳಿ ಸಿನಿಮಾಗಳಲ್ಲಿ ಮೋಡಿ ಮಾಡಿದ್ದ ಈ ಜೋಡಿಗೆ ಕನ್ನಡ ಚಿತ್ರರಸಿಕರು ಫಿದಾ ಆಗಿದ್ದರು. ದಶಕದ ಹಿಂದೆ ಅಭಿಮಾನಿಗಳ ನಿದ್ದೆ ಗೆಡಿಸಿದ್ದ ರಕ್ಷಿತಾ ಮತ್ತು ದರ್ಶನ್ ಸುಂಟರಗಾಳಿ ನಂತರ ಮತ್ತೆ ಕಾಣಿಸಿಕೊಂಡಿಲ್ಲ. ಆದ್ರೀಗ ವರ್ಷಗಳ ಬಳಿಕ ಇಬ್ಬರು ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ದಿಢೀರನೆ ರಕ್ಷಿತಾ, ದರ್ಶನ್ ಭೇಟಿಯಾಗಿ ಫೋಟೋ ಶೇರ್ ಮಾಡಿದ್ದೇಕೆ? ಮುಂದೆ ಓದಿ..

ರಕ್ಷಿತಾಗೆ ದರ್ಶನ್ 'ಫ್ರೆಂಡ್ ಫಾರ್ ಲೈಫ್'

ರಕ್ಷಿತಾಗೆ ದರ್ಶನ್ 'ಫ್ರೆಂಡ್ ಫಾರ್ ಲೈಫ್'

ಇತ್ತೀಚಿಗೆ ನಟಿ ರಕ್ಷಿತಾ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಇನ್ಸ್ಚಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ ಎ ಫ್ರೆಂಡ್ ಫಾರ್ ಲೈಫ್ ಎಂದು ಕ್ಯಾಪ್ಷನ್ ಕೂಡ ಹಾಕಿದ್ದಾರೆ. ರಕ್ಷಿತಾ ದಿಢೀರನೆ ದರ್ಶನ್ ಜೊತೆ ಫೋಟೋ ಹಾಕಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಇಬ್ಬರು ಮತ್ತೆ ಒಟ್ಟಿಗೆ ಸಿನಿಮಾ ಮಾಡುತ್ತಾರಾ ಅಥವಾ ದರ್ಶನ್ ಸಿನಿಮಾ ನಿರ್ಮಾಣ ಮಾಡುತ್ತಾರಾ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿದೆ.

ಸ್ಯಾಂಡಲ್ ವುಡ್ ನ ಬೆಸ್ಟ್ ಫ್ರೆಂಡ್ಸ್

ಸ್ಯಾಂಡಲ್ ವುಡ್ ನ ಬೆಸ್ಟ್ ಫ್ರೆಂಡ್ಸ್

ದರ್ಶನ್ ಮತ್ತು ರಕ್ಷಿತಾ ಸ್ಯಾಂಡಲ್ ವುಡ್ ನ ಬೆಸ್ಟ್ ಫ್ರೆಂಡ್ಸ್. ಸಿನಿಮಾ ಹೊರತು ಪಡಿಸಿ ಇಬ್ಬರ ನಡುವೆ ಉತ್ತಮವಾದ ಸ್ನೇಹ ಬಾಂಧವ್ಯವಿದೆ. ದರ್ಶನ್ ಕೆಲವೆ ಕೆಲವು ಸ್ನೇಹಿತರಲ್ಲಿ ರಕ್ಷಿತಾ ಕೂಡ ಒಬ್ಬರು. ದರ್ಶನ್ ಅವರನ್ನು ಏಕವಚನದಲ್ಲಿ ಮಾತನಾಡಿಸುವ ಸ್ನೇಹಿತೆ ರಕ್ಷಿತಾ. ದರ್ಶನ್ ಜೊತೆಗಿನ ಸ್ನೇಹದ ಬಗ್ಗೆ ರಕ್ಷಿತಾ ಹಲವು ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ.

ಮತ್ತೆ ದರ್ಶನ್ ಜೊತೆ ಸಿನಿಮಾ ಮಾಡುವ ಆಸೆ

ಮತ್ತೆ ದರ್ಶನ್ ಜೊತೆ ಸಿನಿಮಾ ಮಾಡುವ ಆಸೆ

ಈ ಹಿಂದೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ರಕ್ಷಿತಾ ಈಗಿನ ಹೀರೋಗಳಲ್ಲಿ ಯಾರ ಜೊತೆ ಮತ್ತೆ ನಟಿಸೋಕೆ ಇಷ್ಟಪಡುತ್ತೀರಿ ಎಂದು ಕೇಳಿದ್ದಕ್ಕೆ, ರಕ್ಷಿತಾ "ನನಗೆ ದರ್ಶನ್ ಜೊತೆ ಮತ್ತೆ ನಟಿಸುವ ಇಷ್ಟ ಇದೆ" ಎಂದು ಹೇಳಿದ್ದರು. ಹಾಗಾಗಿ ಮತ್ತೆ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಾರಾ ಎನ್ನುವುದು ಚಿತ್ರಾಭಿಮಾನಿಗಳ ಕುತೂಹಲ.

ಕಿರುತೆರೆಯಲ್ಲಿ ರಕ್ಷಿತಾ ಬ್ಯುಸಿ

ಕಿರುತೆರೆಯಲ್ಲಿ ರಕ್ಷಿತಾ ಬ್ಯುಸಿ

ರಕ್ಷಿತಾ 2007ರ ನಂತರ ಮತ್ತೆ ಬಣ್ಣ ಹಚ್ಚಿಲ್ಲ. ಕೊನೆಯದಾಗಿ ತಾಯಿಯ ಮಡಿಲು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ರಕ್ಷಿತಾ ನಂತರ ನಿರ್ದೇಶಕ ಪ್ರೇಮ್ ಜೊತೆ ಹಸೆಮಣೆ ಏರುತ್ತಾರೆ. ಮದುವೆ ನಂತರ ಬಣ್ಣದ ಲೋಕದಿಂದ ದೂರ ಇದ್ದ ಕ್ರೇಜಿ ಕ್ವೀನ್, ಈಗ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಕಿರುತೆರೆಯಲ್ಲೂ ಬ್ಯುಸಿಯಾಗಿದ್ದಾರೆ. ಖಾಸಗಿ ವಾಹಿನಿಯಲ್ಲಿ ಕಾಮಿಡಿ ಕಾರ್ಯಕ್ರಮದ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Kannada actress Rakshitha prem meet challenging star Darshan after a long time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X