ದಶಕದ ಬಳಿಕ ತೆರೆ ಮೇಲೆ ರಕ್ಷಿತಾ: ಡಿಂಪಲ್ ಕ್ವೀನ್ ಜೊತೆ ಕ್ರೇಜಿ ಕ್ವೀನ್ ಡ್ಯಾನ್ಸ್
ಸ್ಯಾಂಡಲ್ ವುಡ್ ನ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ನಿರ್ಮಾಣದ ಜೊತೆಗೆ ಕಾಮಿಡಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಕ್ಷಿತಾ ತೆರೆ ಮೇಲೆ ಮಿಂಚದೆ ದಶಕವೆ ಆಗಿದೆ. 'ತಾಯಿಯ ಮಡಿಲು' ಸಿನಿಮಾದ ನಂತರ ರಕ್ಷಿತ ಮತ್ತೆ ಬಣ್ಣ ಹಚ್ಚಿಲ್ಲ.
ಇತ್ತೀಚಿಗಷ್ಟೆ ಚಾಲೆಂಜಿಂಗ್ ಸ್ಟಾರ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು "ಎ ಪ್ರೆಂಡ್ ಫಾರ್ ಲೈಫ್" ಅಂತ ಬರೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಕ್ರೇಜಿ ಕ್ವೀನ್ ಫೋಟೋ ಹಾಕುತ್ತಿದ್ದಂತೆ ರಕ್ಷಿತಾ ಮತ್ತೆ ತೆರೆಮೇಲೆ ಮಿಂಚುತ್ತಾರಾ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಮೂಡಿತ್ತು. ಆದ್ರೀಗ ರಕ್ಷಿತಾ ತೆರೆಮೇಲೆ ಮಿಂಚುವುದು ಪಕ್ಕಾ ಆಗಿದೆ. ಆದ್ರೆ ಅದು ದರ್ಶನ್ ಜೊತೆ ಅಲ್ಲ.

ರಚಿತಾ ಜೊತೆ ರಕ್ಷಿತಾ ಡ್ಯಾನ್ಸ್
ರಕ್ಷಿತಾ ಮತ್ತೆ ತೆರೆ ಮೇಲೆ ಬರುತ್ತಿರುವುದು ನಟಿ ರಚಿತಾ ರಾಮ್ ಜೊತೆ. ಡಿಂಪಲ್ ಕ್ವೀನ್ ಮತ್ತು ಕ್ರೇಜಿ ಕ್ವೀನ್ ಇಬ್ಬರು ಒಂದೆ ಸಿನಿಮಾದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ. ಈ ಮೂಲಕ ದಶಕದ ಬಳಿಕ ಮತ್ತೆ ರಕ್ಷಿತಾ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ವಿಶೇಷ ಪಾತ್ರದಲ್ಲಿ ರಕ್ಷಿತಾ ಕಾಣಿಸಿಕೊಳ್ಳಲಿದ್ದಾರೆ. ಅಂದ್ಹಾಗೆ ರಕ್ಷಿತಾ ಮತ್ತೆ ಬಣ್ಣ ಹಚ್ಚುತ್ತಿರುವುದು ಎಕ್ ಲವ್ ಯಾ ಸಿನಿಮಾಗಾಗಿ. ಈ ಚಿತ್ರವನ್ನು ರಕ್ಷಿತಾ ಅವರೆ ನಿರ್ಮಾಣ ಮಾಡುತ್ತಿದ್ದಾರೆ.

ಪ್ರೇಮ್ ನಿರ್ದೇಶನದ ಸಿನಿಮಾ
ನಿರ್ದೇಶಕ ಪ್ರೇಮ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಏಕ್ ಲವ್ ಯಾ ಸಿನಿಮಾದಲ್ಲಿ ಪತ್ನಿ ರಕ್ಷಿತಾ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಏಕ್ ಲವ್ ಯಾ ರಕ್ಷಿತಾ ಸಹೋದರ ರಾಣಾ ಅಭಿನಯದ ಸಿನಿಮಾ. ಈಗಾಗಾಲೆ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಚಿತ್ರದಲ್ಲಿ ನಾಯಕಿಯಾಗಿ ರೀನಾ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೊಂದು ವಿಶೇಷ ಪಾತ್ರದಲ್ಲಿ ರಚಿತಾ ಕೂಡ ಬಣ್ಣ ಹಚ್ಚುತ್ತಿದ್ದಾರೆ.

ಲವ್ ಫೆಲ್ಯೂರ್ ಹಾಡಿನಲ್ಲಿ ರಕ್ಷಿತಾ
ರಚಿತಾ ಮತ್ತು ರಕ್ಷಿತಾ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಹಾಡು ಲವ್ ಫಲ್ಯೂರ್ ಸಾಂಗ್ ಅಂತೆ. ಲವ್ ಬ್ರೇಕ್ ಅಪ್ ಆದ ಹುಡುಗಿಯ ಸಾಂಗ್ ಇದಾಗಿದೆಯಂತೆ. ಹಾಗಾಗಿ ಎಲ್ಲಾ ಹುಡುಗಿಯರಿಗೆ ಈ ಹಾಡನ್ನು ಅರ್ಪಣೆ ಮಾಡುತ್ತಿದೆಯಂತೆ ಚಿತ್ರತಂಡ.

ಸಧ್ಯದಲ್ಲೇ ಹಾಡಿನ ಚಿತ್ರೀಕರಣ
ರಕ್ಷಿತಾ ಮತ್ತು ರಚಿತಾ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಲವ್ ಫೇಲ್ಯೂರ್ ಸಾಂಗ್ ಅನ್ನು ಈಗಾಗಲೆ ಚಿತ್ರೀಕರಣ ಮಾಡಬೇಕಿತಂತೆ. ಆದ್ರೆ ಮಳೆಯ ಕಾರಣದಿಂದ ಚಿತ್ರೀಕರಣವನ್ನು ಮುಂದೂಡಿದೆಯಂತೆ ಚಿತ್ರತಂಡ. ಹಾಗಾಗಿ ಈ ವಾರ ಅಂದ್ರೆ ಗುರುವಾರ ಚಿತ್ರದ ವಿಶೇಷ ಹಾಡನ್ನು ಚಿತ್ರೀಕರಣ ಮಾಡಲು ಪ್ಲಾನ್ ಮಾಡಿದೆಯಂತೆ. ಈ ಹಾಡಿಗೆ ಮೋಹನ್ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ.


Click it and Unblock the Notifications











