»   » ನಟಿ ರಮ್ಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್

ನಟಿ ರಮ್ಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್

Written By:
Subscribe to Filmibeat Kannada

ಮೋಹಕ ತಾರೆ ರಮ್ಯಾ ಕಳೆದ ಕೆಲ ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೋಸ್ಕರ ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ರಮ್ಯಾ ಅವರು ಸಂಪೂರ್ಣ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.[ಮೋಹಕ ತಾರೆ ರಮ್ಯಾ ಆಸ್ವತ್ರೆಗೆ ದಾಖಲು! ]

Kannada Actress Ramya Discharged from Hospital

ಸೆಪ್ಟಂಬರ್ 29 ರಂದು ರಮ್ಯಾ ತಮ್ಮ ಹುಟ್ಟುಹಬ್ಬವನ್ನ ಮಂಡ್ಯದಲ್ಲಿ ಆಚರಿಸಿಕೊಂಡಿದ್ದರು. ಅದಾದ ನಂತರ ದೆಹಲಿ ಹೋಗಿ ಬಂದಿದ್ದ ಅವರಿಗೆ, ಪ್ರಯಾಣದಿಂದ ಬಳಲಿದ್ದ ಪರಿಣಾಮ ಜ್ವರ ಉಲ್ಬಣಿಸಿತ್ತು. ಈಗ ಸಂಪೂರ್ಣವಾಗಿ ಚಿಕಿತ್ಸೆ ಪಡೆದು ಮನೆಗೆ ವಾಪಾಸ್ಸಾಗಿದ್ದಾರೆ.

ಆಸ್ಪತ್ರೆಯಿಂದ ಮನೆಗೆ ಹೋಗಿರುವಾಗ ಬಗ್ಗೆ ಖುದ್ದು, ಮಾಜಿ ಸಂಸದೆ ನಟಿ ರಮ್ಯಾ ಅವರೇ ಟ್ವೀಟ್ ಮೂಲಕ ಸ್ವಷ್ಟಪಡಿಸಿದ್ದಾರೆ. ಇನ್ನೂ, ತಮ್ಮ ಬಗ್ಗೆ ಕಾಳಜಿ ತೋರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ಇನ್ನೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ರಮ್ಯಾ ಅವರು, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ನಿಧನ ವಿಚಾರ ತಿಳಿದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

English summary
Kannada Actress Ramya Discharged from Mallya Hospital. Ramya Was Recently admitted to Mallya Hospital in Bengaluru due to viral Fever.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada