ರಮ್ಯಾ ಅಭಿಮಾನಿಗಳ ಅರ್ಥಪೂರ್ಣ ಹುಟ್ಟುಹಬ್ಬ ಆಚರಣೆ
Recommended Video

ರಮ್ಯಾ ಅರ್ಥಪೂರ್ಣ ಹುಟ್ಟುಹಬ್ಬ ಆಚರಣೆ | FILMIBEAT KANNADA
ನಟಿ ರಮ್ಯಾ ನಿನ್ನೆ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದರು. ಅವರ ಈ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳೆಲ್ಲ ಸೇರಿ ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದಾರೆ.

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಫ್ಯಾನ್ಸ್ ಅಸೋಸಿಯೇಷನ್ ವತಿಯಿಂದ ತಮ್ಮ ಮೆಚ್ಚಿನ ನಾಯಕಿಯ ಹುಟ್ಟುಹಬ್ಬವನ್ನ ಸಾಮಾಜಿಕ ಕೆಲಸಗಳ ಮೂಲಕ ಆಚರಿಸಲಾಗಿದೆ. ಅನಾಥ ಮಕ್ಕಳಿಗೆ ಅನ್ನದಾನ ಮಾಡಿ, ಮಕ್ಕಳಿಂದ ಕೇಕ್ ಕಟ್ ಮಾಡಿಸಿ ಅವರ ಖುಷಿಗೆ ಕಾರಣವಾಗಿದ್ದಾರೆ.
ರಮ್ಯಾ ಫ್ಯಾನ್ಸ್ ಅಸೋಸಿಯೇಷನ್ ಅಧ್ಯಕ್ಷ ಭರತ್ ಎಸ್ ಎನ್, ಉಪಾಧ್ಯಕ್ಷ ಪ್ರೇಮ್ ಸಾಗರ್ ಸೇರಿದಂತೆ ಇಡೀ ತಂಡ ಈ ಒಳ್ಳೆಯ ಕೆಲಸಕ್ಕೆ ಕೈ ಜೋಡಿಸಿದೆ. ಇವರು ಪ್ರತಿವರ್ಷ ಕೂಡ ವಿಭಿನ್ನ ರೀತಿಯಲ್ಲಿ ರಮ್ಯಾ ಹುಟ್ಟುಹಬ್ಬವನ್ನು ಮಾಡಿಕೊಂಡು ಬರುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿಯೂ ರಮ್ಯಾಗೆ ಅಭಿಮಾನಿಗಳ ಶುಭಾಶಯಗಳು ಹರಿದು ಬಂದಿವೆ. ಸಿನಿಮಾರಂಗದ ಸ್ನೇಹಿತರು ಸಹ ಶುಭ ಹಾರೈಸಿದ್ದಾರೆ.
More from Filmibeat
English summary
Kannada actress Ramya fans celebrated her birthday by doing social work.


Click it and Unblock the Notifications











