For Quick Alerts
  ALLOW NOTIFICATIONS  
  For Daily Alerts

  ಹೇಗಿದ್ದ ಲಕ್ಕಿ ಸ್ಟಾರ್ ರಮ್ಯಾ ಈಗ ಹೇಗಾಗಿದ್ದಾರೆ ನೋಡಿ

  By Harshitha
  |

  ಅಂತೂ ಇಂತೂ ಲಕ್ಕಿ ಸ್ಟಾರ್ ರಮ್ಯಾ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಕಳೆದ ಮೂರು ತಿಂಗಳಿಂದ ರಮ್ಯಾ ಎಲ್ಲಿ ಹೋದರು? ರಮ್ಯಾ ಲಂಡನ್ ನಲ್ಲಿದ್ದಾರಂತೆ, ರಮ್ಯಾ ಓದ್ತಿದ್ದಾರಂತೆ ಹೌದಾ ಅನ್ನುವ ಊಹಾಪೋಹ, ಗಾಳಿಸುದ್ದಿಗಳನ್ನೆಲ್ಲಾ ನೀವು ಕೇಳಿ ಕೇಳಿ ಸಾಕಾಗಿರ್ತೀರಾ. ಈ ಮ್ಯಾಟ್ರು ರಮ್ಯಾ ಮೇಡಂಗೂ ತಲುಪಿತ್ತೋ ಏನೋ ಅದಕ್ಕೆ ಒಂದು ಸರ್ಪ್ರೈಸ್ ಕೊಟ್ಟಿದ್ದಾರೆ ನೋಡಿ.

  ಇಲ್ಲಿವರೆಗೂ ಸದ್ದು, ಸುದ್ದಿಯಲ್ಲಿದೆ ಸೈಲೆಂಟಾಗಿದ್ದ ರಮ್ಯಾ ನಿನ್ನೆ ಇದ್ದಿಕ್ಕಿದ್ಹಂಗೆ ಟ್ವಿಟರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆ ಮೂಲಕ ರಮ್ಯಾರನ್ನ ಮಿಸ್ ಮಾಡಿಕೊಳ್ತಿದ್ದ ಅಭಿಮಾನಿಗಳ ಮೊಗದಲ್ಲಿ ಮತ್ತೆ ಮಂದಹಾಸ ಮೂಡುವಂತಾಗಿದೆ. [ಫಾರಿನ್ ನಲ್ಲೇ ಸೆಟ್ಲ್ ಆಗ್ತಾರಾ ರಮ್ಯಾ ಮೇಡಂ?]

  ಅಸಲಿಗೆ ಮೂರು ತಿಂಗಳ ಹಿಂದೆ ಇದ್ದ ರಮ್ಯಾಗೂ, ಈಗಿನ ರಮ್ಯಾಗೂ ತುಂಬಾ ವ್ಯತ್ಯಾಸವಿದೆ. ಅಂದಿನ ರಮ್ಯಾ ಈಗಿಲ್ಲ. ಹಿಂದೆಂದಿಗಿಂತಲೂ ರಮ್ಯಾ ಸಖತ್ ಸ್ಲಿಮ್ ಅಂಡ್ ಟ್ರಿಮ್ ಆಗಿದ್ದಾರೆ. ಕಡು ನೀಲಿ ಬಣ್ಣದ ಉಡುಪಲ್ಲಿ ಕ್ಯೂಟಾಗಿ ಸ್ಮೈಲ್ ಮಾಡ್ತಾ ಪೋಸ್ ಕೊಟ್ಟಿರೋ ಫೋಟೋವನ್ನ ರಮ್ಯಾ ಟ್ವೀಟ್ ಮಾಡಿದ್ದಾರೆ.

  ಅಷ್ಟಕ್ಕೂ ಈ ಫೋಟೋ, ನ್ಯೂಯಾರ್ಕ್ ಸಿಟಿಯಲ್ಲಿ ನಡೆದ ಐ.ಆರ್.ಸಿ ಫ್ರೀಡಂ ಅವಾರ್ಡ್ ಡಿನ್ನರ್ ನಲ್ಲಿ ರಮ್ಯಾ ಕ್ಲಿಕಿಸಿದ್ದು. ''ಅರೆ...ಲಂಡನ್ ನಲ್ಲಿದ್ದ ರಮ್ಯಾ, ನ್ಯೂಯಾರ್ಕ್ ಗೆ ಯಾವಾಗ ತೆರಳಿದ್ರು?'' ಅಂತ ನೀವು ಕೇಳಬಹುದು. ನಿಮ್ಗೆಲ್ಲಾ ಗೊತ್ತಿರೋ ಹಾಗೆ ಸಮಾಜಸೇವೆ ಮತ್ತು ಮಾನವಹಿತಕಾರಿ ಕಾರ್ಯಗಳಲ್ಲಿ ರಮ್ಯಾ ಸದಾ ಮುಂದು.

  ಇದರಿಂದ ಇಂಟರ್ ನ್ಯಾಷನಲ್ ರೆಸ್ಕ್ಯೂ ಕಮಿಟಿ ವತಿಯಿಂದ ನವೆಂಬರ್ 5ರಂದು ಮಾನವಹಿತಕಾರಿ ಕಾರ್ಯಗಳಿಗೆ ನೀಡುವ ಫ್ರೀಡಂ ಅವಾರ್ಡ್ ಸಮಾರಂಭಕ್ಕೆ ಗೋಲ್ಡನ್ ಕ್ವೀನ್ ರಮ್ಯಾಗೆ ಆಹ್ವಾನ ಸಿಕ್ಕಿತ್ತಂತೆ. ಹೀಗಾಗಿ ನ್ಯೂಯಾರ್ಕ್ ಫ್ಲೈಟ್ ಹತ್ತಿದ್ರು.

  ''ಇಂಟರ್ ನ್ಯಾಷನಲ್ ರೆಸ್ಕ್ಯೂ ಕಮಿಟಿ ಆಯೋಜಿಸಿದ್ದ ಫ್ರೀಡಂ ಅವಾರ್ಡ್ ಡಿನ್ನರ್ ಗೆ ಆಹ್ವಾನಿಸಿದ್ದ ಡೇವಿಡ್ ಮಿಲಿಬ್ಯಾಂಡ್ ಗೆ ನನ್ನ ಕೃತಜ್ಞತೆಗಳು'' ಅಂತ ಟ್ವೀಟ್ ಮಾಡಿದ್ದಾರೆ ರಮ್ಯಾ. ಲಂಡನ್ ನಲ್ಲಿ ರಾಜ್ಯಶಾಸ್ತ್ರ ಓದುತ್ತಿರುವ ಜೊತೆಗೆ ಮಾನವಹಿತಕಾರಿ ಕಾರ್ಯಗಳಿಗೂ ಕೈಜೋಡಿಸುತ್ತಿರುವ ರಮ್ಯಾ ಮತ್ತೆ ಹಳೇ ದಾರಿ ಹಿಡಿದು ರಾಜಕೀಯಕ್ಕೆ ಮರಳಿದ್ರೆ ಆಶ್ಚರ್ಯ ಪಡಬೇಕಾಗಿಲ್ಲ. (ಫಿಲ್ಮಿಬೀಟ್ ಕನ್ನಡ)

  English summary
  Golden Queen Ramya is back on Twitter again. Ramya has tweeted her recent picture with the new look. Ramya, being one of the invites from IRC Freedom Awards Dinner, she had fled to NewYork city.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X