ಮೋಹಕ ತಾರೆ ರಮ್ಯಾಗೆ ಹುಟ್ಟುಹಬ್ಬದ ಸಂಭ್ರಮ
ಲಕ್ಕಿ ಸ್ಟಾರ್, ಗೋಲ್ಡನ್ ಗರ್ಲ್, ಸ್ಯಾಂಡಲ್ ವುಡ್ ಕ್ವೀನ್, ಮಂಡ್ಯದ ರಾಣಿ...ಅಂತೆಲ್ಲಾ ಕರೆಸಿಕೊಳ್ಳುವ ನಟಿ ಹಾಗೂ ಮಾಜಿ ಸಂಸದೆ ರಮ್ಯಾಗಿಂದು 34ನೇ ಹುಟ್ಟುಹಬ್ಬದ ಸಂಭ್ರಮ.
ತಮ್ಮ ನೆಚ್ಚಿನ ನಟಿಯ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು ಫೇಸ್ ಬುಕ್ ಹಾಗೂ ಟ್ವಿಟ್ಟರ್ ಮೂಲಕ ಶುಭಾಶಯಗಳನ್ನ ಕೋರಿದ್ದಾರೆ.[ಕಟೌಟ್ ನಲ್ಲಿ ರಾರಾಜಿಸಿದ ರಮ್ಯಾ: ಕಟೌಟ್ ಗೂ ಉಕ್ಕು ಸೇತುವೆಗೂ ಏನ್ ಸಂಬಂಧ ]

ಕನ್ನಡ ಚಿತ್ರರಂಗದಲ್ಲಿ ಸುಮಾರು 1 ದಶಕದ ಕಾಲ ಯುವರಾಣಿಯಂತೆ ಮಿಂಚಿದ್ದ ರಮ್ಯಾ ಯಶಸ್ಸಿನ ಉತ್ತುಂಗಕ್ಕೇರಿದ್ದರು. ತದ ನಂತರ ರಾಜಕೀಯ ರಂಗಕ್ಕೆ ಕಾಲಿಟ್ಟ ಈ ನಾಯಕಿ ಇಂದು ಕರ್ನಾಟಕದ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

2003 ರಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ 'ಅಭಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ರಮ್ಯಾ, 'ಎಕ್ಸ್ ಕ್ಯೂಸ್ ಮೀ', 'ಸೇವಂತಿ ಸೇವಂತಿ', 'ಜ್ಯೂಲಿ', 'ಜೊತೆ ಜೊತೆಯಲಿ', 'ಮುಸ್ಸಂಜೆ ಮಾತು', 'ಸಂಜು ವೆಡ್ಸ್ ಗೀತಾ', 'ಸಿದ್ಲಿಂಗು', 'ಲಕ್ಕಿ' ಚಿತ್ರಗಳು ಸೇರಿದಂತೆ ಸುಮಾರು 39 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ, ತಮಿಳಿನ ಧನುಶ್, ಸೂರ್ಯ, ಸಿಂಬು ಜೊತೆಯೂ ನಾಯಕಿಯಾಗಿ ಅಭಿನಯಿಸಿದ್ದಾರೆ.['ಕನ್ನಡದ ಅರುಂಧತಿ' ಆದ್ರಾ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ !]

ಇನ್ನೂ ಈ ವರ್ಷ ರಮ್ಯಾ ಅಭಿನಯದ ಬಹುನಿರೀಕ್ಷೆಯ ಚಿತ್ರ 'ನಾಗರಹಾವು' ತೆರೆಕಂಡಿತ್ತು. ಸುಮಾರು 2 ವರ್ಷಗಳ ನಂತರ ಬೆಳ್ಳಿತೆರೆಯಲ್ಲಿ ರಾರಾಜಿಸಿದ್ದ ರಮ್ಯಾ 'ನಾಗರಹಾವು' ಚಿತ್ರದ ಮೂಲಕ ತಮ್ಮ ಅಭಿಮಾನಿಗಳನ್ನ ಮತ್ತೆ ರಂಜಿಸಿದ್ದರು.

ರಮ್ಯಾ ಅವರ 34ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳ ಸಂಘ ಕ್ರಿಕೆಟ್ ಪಂದ್ಯಾವಳಿ ಮತ್ತು ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿಭಿನ್ನವಾಗಿ ಸ್ಯಾಂಡಲ್ ವುಡ್ ಕ್ವೀನ್ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. [ಕಾವೇರಿ ನೀರಿನ ಸಮಸ್ಯೆ ಪರಿಹಾರಕ್ಕೆ ರಮ್ಯಾ ನೀಡಿದ ಉಪಾಯ]

2011ರಲ್ಲಿ ಯ್ಯೂತ್ ಕಾಂಗ್ರೆಸ್ ಗೆ ಸೇರ್ಪಡೆಯಾದ ರಮ್ಯಾ, ಅದೇ ಕಾಂಗ್ರೆಸ್ ಪಕ್ಷದಿಂದ ಮಂಡ್ಯದ ಸಂಸದೆಯಾಗಿದ್ದರು. ರಾಜಕೀಯ ಸೇರಿದ್ಮೇಲೆ ಇತ್ತೀಚಿನ ವರ್ಷಗಳಲ್ಲಿ ರಮ್ಯಾ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅವರ ಅಭಿಮಾನಿಗಳು ಮಾತ್ರ, ರಮ್ಯಾ ಮತ್ತೆ ಸಿನಿಮಾಗಳಲ್ಲಿ ಅಭಿನಯಿಸಬೇಕು ಎಂದು ಕಾಯುತ್ತಿದ್ದಾರೆ. ಎನಿ ವೇ, ನಮ್ಮ ಕಡೆಯಿಂದಲೂ ಮೋಹಕ ತಾರೆಗೆ ಹುಟ್ಟುಹಬ್ಬದ ಶುಭಾಶಯಗಳು.


Click it and Unblock the Notifications











