Don't Miss!
- News
7th Pay Commission; ಮುಂಬಡ್ತಿ, ಬಡ್ತಿ, ಭತ್ಯೆಯ ನಿಗದಿ ಮಾನದಂಡಗಳು
- Technology
ಆಪಲ್ ಗ್ರಾಹಕರಿಗೆ ಬಿಗ್ ಶಾಕ್; ಆದ್ರೂ, ಗ್ರಾಹಕರಿಗೆ ಕೊನೆಯ ಅವಕಾಶ ನೀಡಿದೆ!
- Sports
WIPL 2023: ಮಹಿಳಾ ಐಪಿಎಲ್ಗಾಗಿ ತನ್ನ ಕೋಚಿಂಗ್ ಬಳಗ ಪ್ರಕಟಿಸಿದ ಮುಂಬೈ ಇಂಡಿಯನ್ಸ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೋಹಕತಾರೆ ರಮ್ಯಾ ಅಭಿನಯದ ಎಲ್ಲಾ ಚಿತ್ರಗಳ ಫಲಿತಾಂಶದ ವಿವರ; ಯಾವುದು ಹಿಟ್, ಯಾವುದು ಫ್ಲಾಪ್?
ಸ್ಯಾಂಡಲ್ವುಡ್ ಕ್ವೀನ್, ಮೋಹಕತಾರೆ ರಮ್ಯಾ ಇಂದು ( ನವೆಂಬರ್ 29 ) ತಮ್ಮ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಟಿ ರಮ್ಯಾಗೆ ಚಂದನವನದ ನಟ ನಟಿಯರು, ಅಭಿಮಾನಿಗಳು ಮಾತ್ರವಲ್ಲದೇ ತಮಿಳು ಹಾಗೂ ತೆಲುಗು ಚಿತ್ರರಂಗದ ಕಲಾವಿದರು ಹಾಗೂ ಸಿನಿ ಪ್ರೇಮಿಗಳೂ ಸಹ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ.
ಮೊದಲಿಗೆ ಪುನೀತ್ ರಾಜ್ಕುಮಾರ್ ಅಭಿನಯದ ಎರಡನೇ ಚಿತ್ರ 'ಅಭಿ' ಮೂಲಕ ಸಿನಿಮಾ ಕ್ಷೇತ್ರ ಪ್ರವೇಶಿಸಿದ ನಟಿ ರಮ್ಯಾ ಪ್ರಥಮ ಚಿತ್ರದಲ್ಲಿಯೇ ಸೂಪರ್ ಹಿಟ್ ಬಾರಿಸಿ ತನ್ನ ನಟನೆಯಿಂದ ಭರವಸೆ ಹುಟ್ಟಿಸಿದ್ದರು ಹಾಗೂ ಸಾಲು ಸಾಲು ಆಫರ್ಗಳನ್ನೂ ಸಹ ಪಡೆದುಕೊಂಡಿದ್ದರು. ಅಭಿ ಯಶಸ್ಸಿನ ಬಳಿಕ ಎಕ್ಸ್ಕ್ಯೂಸ್ಮಿ ಚಿತ್ರದಲ್ಲಿ ನಟಿಸಿದ ರಮ್ಯಾ ಬ್ಲಾಕ್ಬಸ್ಟರ್ ಹಿಟ್ ನೀಡಿದರು.
ಹೀಗೆ ಮೊದಲೆರಡು ಚಿತ್ರಗಳಲ್ಲೇ ಭರ್ಜರಿ ಯಶಸ್ಸು ಸಾಧಿಸಿದ ನಟಿ ರಮ್ಯಾ ನಂತರ ತೆಲುಗು ಹಾಗೂ ತಮಿಳು ಚಿತ್ರಗಳಲ್ಲೂ ಸಹ ಬಣ್ಣಹಚ್ಚಿದರು. ತಮಿಳು ಚಿತ್ರರಂಗದಲ್ಲೂ ಸಹ ಯಶಸ್ಸು ಸಾಧಿಸಿದ ರಮ್ಯಾ ತೆಲುಗು ಚಿತ್ರರಂಗದಲ್ಲಿ ಅಷ್ಟೇನು ಸದ್ದು ಮಾಡಲಿಲ್ಲ. ಇನ್ನು ನಟಿ ರಮ್ಯಾ ಕನ್ನಡದ ಈಗಿನ ಬಹುತೇಕ ಎಲ್ಲಾ ಸ್ಟಾರ್ ನಟರ ಚಿತ್ರಗಳಲ್ಲೂ ನಟಿಸಿದ್ದು, ಹಲವು ಯುವ ನಟರ ಚಿತ್ರಗಳಲ್ಲೂ ಬಣ್ಣ ಹಚ್ಚಿದ್ದಾರೆ.

ಒಟ್ಟು 39 ಚಿತ್ರಗಳಲ್ಲಿ ರಮ್ಯಾ ನಟನೆ
ಇಲ್ಲಿಯವರೆಗೂ ಎಲ್ಲಾ ಭಾಷೆಗಳೂ ಸೇರಿದಂತೆ 39 ಚಿತ್ರಗಳಲ್ಲಿ ರಮ್ಯಾ ನಟಿಸಿದ್ದಾರೆ. ಈ ಪೈಕಿ ಒಂದು ಕಿರುಚಿತ್ರ ಹಾಗೂ ಮತ್ತೆರಡು ಚಿತ್ರಗಳಲ್ಲಿ ರಮ್ಯಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ 36 ಚಿತ್ರಗಳಲ್ಲಿ ನಟಿ ರಮ್ಯಾ ಮುಖ್ಯ ನಾಯಕಿಯಾಗಿ ನಟಿಸಿದ್ದು ಈ ಚಿತ್ರಗಳ ಫಲಿತಾಂಶವೇನು ಎಂಬುದರ ಕುರಿತಾದ ಮಾಹಿತಿ ಕೆಳಕಂಡಂತಿದೆ..

ರಮ್ಯಾ ನಟನೆಯ 36 ಚಿತ್ರಗಳು ಮತ್ತು ಅವುಗಳ ಫಲಿತಾಂಶ
1. ಅಭಿ ( ಕನ್ನಡ ) - ಸೂಪರ್ ಹಿಟ್
2. ಎಕ್ಸ್ಕ್ಯೂಸ್ಮಿ ( ಕನ್ನಡ ) - ಬ್ಲಾಕ್ಬಸ್ಟರ್
3. ಅಭಿಮನ್ಯು ( ತೆಲುಗು ) - ಫ್ಲಾಪ್
4. ಕುತ್ತು ( ತಮಿಳು ) - ಸಾಧಾರಣ
5. ರಂಗ ಎಸ್ಎಸ್ಎಲ್ಸಿ ( ಕನ್ನಡ ) - ಹಿಟ್
6. ಕಂಠಿ ( ಕನ್ನಡ ) - ಫ್ಲಾಪ್
7. ಗಿರಿ ( ತಮಿಳು ) - ಸೂಪರ್ ಹಿಟ್
8. ಆದಿ ( ಕನ್ನಡ ) - ಸಾಧಾರಣ
9. ಆಕಾಶ್ ( ಕನ್ನಡ ) - ಬ್ಲಾಕ್ಬಸ್ಟರ್
10. ಗೌರಮ್ಮ ( ಕನ್ನಡ ) - ಬ್ಲಾಕ್ಬಸ್ಟರ್
11. ಅಮೃತಧಾರೆ ( ಕನ್ನಡ ) - ಸೂಪರ್ ಹಿಟ್
12. ಸೇವಂತಿ ಸೇವಂತಿ ( ಕನ್ನಡ ) - ಹಿಟ್
13. ಜೂಲಿ ( ಕನ್ನಡ ) - ಫ್ಲಾಪ್
14. ದತ್ತ ( ಕನ್ನಡ ) - ಸಾಧಾರಣ
15. ಜೊತೆ ಜೊತೆಯಲಿ ( ಕನ್ನಡ ) - ಹಿಟ್
16. ತನನಂ ತನನಂ ( ಕನ್ನಡ ) - ಫ್ಲಾಪ್
17. ಅರಸು ( ಕನ್ನಡ ) - ಸೂಪರ್ ಹಿಟ್
18. ಮೀರಾ ಮಾಧವ ರಾಘವ ( ಕನ್ನಡ ) - ಫ್ಲಾಪ್
19. ಪೊಲ್ಲದವನ್ ( ತಮಿಳು ) - ಸಾಧಾರಣ
20. ಮುಸ್ಸಂಜೆ ಮಾತು ( ಕನ್ನಡ ) - ಸೂಪರ್ ಹಿಟ್
21. ತೂಂಡಿಲ್ ( ತಮಿಳು ) - ಫ್ಲಾಪ್
22. ಬೊಂಬಾಟ್ ( ಕನ್ನಡ ) - ಫ್ಲಾಪ್
23. ಅಂತು ಇಂತು ಪ್ರೀತಿ ಬಂತು ( ಕನ್ನಡ ) - ಫ್ಲಾಪ್
24. ವಾರಣಮ್ ಆಯಿರಮ್ ( ತಮಿಳು ) - ಸೂಪರ್ ಹಿಟ್
25. ಜಸ್ಟ್ ಮಾತ್ ಮಾತಲ್ಲಿ ( ಕನ್ನಡ ) - ಫ್ಲಾಪ್
26. ಜೊತೆಗಾರ ( ಕನ್ನಡ ) - ಸಾಧಾರಣ
27. ಕಿಚ್ಚ ಹುಚ್ಚ ( ಕನ್ನಡ ) - ಫ್ಲಾಪ್
28. ಸಿಂಗಮ್ ಪುಲಿ ( ತಮಿಳು ) - ಸಾಧಾರಣ
29. ಸಂಜು ವೆಡ್ಸ್ ಗೀತಾ ( ಕನ್ನಡ ) - ಸೂಪರ್ ಹಿಟ್
30. ದಂಡಂ ದಶಗುಣಂ ( ಕನ್ನಡ ) - ಫ್ಲಾಪ್
31. ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ ( ಕನ್ನಡ ) - ಸೂಪರ್ ಹಿಟ್
32. ಸಿದ್ಲಿಂಗು ( ಕನ್ನಡ ) - ಹಿಟ್
33. ಲಕ್ಕಿ ( ಕನ್ನಡ ) - ಹಿಟ್
34. ಕಠಾರಿವೀರ ಸುರಸುಂದರಾಂಗಿ ( ಕನ್ನಡ ) - ಹಿಟ್
35. ಆರ್ಯನ್ ( ಕನ್ನಡ ) - ಸಾಧಾರಣ
36. ನಾಗರಹಾವು ( ಕನ್ನಡ ) - ಫ್ಲಾಪ್

ರಮ್ಯಾ ಅಭಿನಯಿಸಿದ ಕಿರುಚಿತ್ರ ಹಾಗೂ ಅತಿಥಿ ಪಾತ್ರಗಳು
2007ರಲ್ಲಿ ನಟಿ ರಮ್ಯಾ ಪ್ರಾರಂಭ ಎಂಬ ತಮಿಳು ಕಿರುಚಿತ್ರದಲ್ಲಿ ನಟಿಸಿದ್ದರು ಹಾಗೂ ಪ್ರಜ್ವಲ್ ದೇವರಾಜ್ ಅಭಿನಯದ ಮೆರವಣಿಗೆ ಮತ್ತು ರವಿಚಂದ್ರನ್ ಅಭಿನಯದ ಕ್ರೇಜಿ ಲೋಕ ಚಿತ್ರಗಳಲ್ಲಿ ಅತಿಥಿ ಪಾತ್ರಗಳನ್ನು ನಿರ್ವಹಿಸಿದ್ದರು.

ಉತ್ತರಕಾಂಡ ಮೂಲಕ ಕಮ್ಬ್ಯಾಕ್
2016ರಲ್ಲಿ ತೆರೆ ಕಂಡಿದ್ದ ನಾಗರಹಾವು ಚಿತ್ರದ ಬಳಿಕ ಚಿತ್ರರಂಗದಿಂದ ದೂರಾಗಿದ್ದ ನಟಿ ರಮ್ಯಾ ಆರು ವರ್ಷಗಳ ಬಳಿಕ ಚಿತ್ರರಂಗದತ್ತ ಮುಖ ಮಾಡಿದ್ದು ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಮೂಲಕ ನಿರ್ಮಾಪಕಿಯಾಗಿದ್ದಾರೆ. ಆಪಲ್ ಬಾಕ್ಸ್ ಸ್ಟುಡಿಯೋ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ರಮ್ಯಾ ಸ್ಥಾಪಿಸಿದ್ದಾರೆ. ಅಷ್ಟೇ ಅಲ್ಲದೇ ಮುಂದಿನ ವರ್ಷ ನಟಿಯಾಗಿಯೂ ಸಹ ರಮ್ಯಾ ಕಮ್ಬ್ಯಾಕ್ ಮಾಡುವುದು ಖಚಿತವಾಗಿದ್ದು, ಡಾಲಿ ಧನಂಜಯ್ ನಾಯಕನಾಗಿ ನಟಿಸಲಿರುವ 'ಉತ್ತರಕಾಂಡ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರದ ಮುಹೂರ್ತ ಕೂಡ ನಡೆದಿದ್ದು ಚಿತ್ರೀಕರಣ ಆರಂಭವಾಗಬೇಕಿದೆ.