ಸಕ್ಕರೆ ಸೇವನೆ ತ್ಯಜಿಸಿದ ನಟಿ ರಮ್ಯಾ.! ಏನಿದರ ಗುಟ್ಟು.?
ಒಂದ್ಕಾಲದಲ್ಲಿ ಸ್ಯಾಂಡಲ್ ವುಡ್ ಗೆ 'ಪದ್ಮಾವತಿ' ಆಗಿ ಮೆರೆದ 'ಲಕ್ಕಿ ಸ್ಟಾರ್' ರಮ್ಯಾ ಈಗ ಚಿತ್ರರಂಗದಿಂದ ದೂರ ಉಳಿದಿದ್ದಾರೆ. 'ಕೈ' ಪಾಳಯ ಸೇರಿಕೊಂಡ ಮೇಲೆ ನಟಿ ರಮ್ಯಾ ರಾಜಕಾರಣ ಮಾಡುವುದರಲ್ಲಿಯೇ ಬಿಜಿಯಾಗಿದ್ದಾರೆ.
ಎಂ.ಪಿ ಆಗಿದ್ದ ರಮ್ಯಾ ಒಮ್ಮೆ ಪರಾಭವ ಅನುಭವಿಸಿದ ಮೇಲೆ ಚುನಾವಣೆ ಎಂಬ ಅಗ್ನಿಪರೀಕ್ಷೆಯನ್ನ ಮತ್ತೆ ಎದುರಿಸಿಲ್ಲ. ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಸೆಲ್ ನ ಮುಖ್ಯಸ್ಥೆ ಆಗಿರುವ ರಮ್ಯಾ ತಮ್ಮ ಕೆಲಸವನ್ನ ಇಷ್ಟ ಪಟ್ಟು ಮಾಡುತ್ತಿದ್ದಾರೆ.
ಇಂತಿಪ್ಪ ರಮ್ಯಾ ಇದೀಗ ಸಕ್ಕರೆ ಸೇವನೆ ಮಾಡುವುದನ್ನು ನಿಲ್ಲಿಸಿದ್ದಾರೆ. ಅರೇ.. ರಮ್ಯಾಗಿನ್ನೂ 35 ವರ್ಷ ವಯಸ್ಸು. ಇಷ್ಟು ಬೇಗ ಸಕ್ಕರೆಯಿಂದ ರಮ್ಯಾ ದೂರ ಉಳಿದಿರುವುದು ಯಾಕೆ ಅಂತ ನೀವು ಪ್ರಶ್ನಿಸಬಹುದು. ಅದಕ್ಕೆ ಕಾರಣ ಬೇರೆ ಇದೆ. ಅದನ್ನ ನೀವೇ ನೋಡಿ ಫೋಟೋ ಸ್ಲೈಡ್ ಗಳಲ್ಲಿ...

ಸಕ್ಕರೆ ಕಂಡ್ರೆ ರಮ್ಯಾಗೆ ಪಂಚಪ್ರಾಣ
ಸಕ್ಕರೆ ಹಾಗೂ ಸಿಹಿ ಪದಾರ್ಥಗಳನ್ನ ಕಂಡ್ರೆ ರಮ್ಯಾಗೆ ಪಂಚಪ್ರಾಣ. ಖುಷಿ ಅಥವಾ ಒತ್ತಡ ಹೆಚ್ಚಾದಾಗೆಲ್ಲ ಸಿಹಿ ಸೇವಿಸುತ್ತಿದ್ದ ರಮ್ಯಾಗೆ ಇದೀಗ ಅದರ ದುಷ್ಪರಿಣಾಮ ಅರಿವಿಗೆ ಬಂದಿದೆ. ಹೀಗಾಗಿ, ಈ ವರ್ಷಾಂತ್ಯದವರೆಗೂ ಸಕ್ಕರೆ ಹಾಗೂ ಸಿಹಿ ಪದಾರ್ಥಗಳನ್ನ ಸೇವಿಸದೇ ಇರಲು ರಮ್ಯಾ ದೃಢ ನಿರ್ಧಾರ ಮಾಡಿದ್ದಾರೆ.

ನೋ ಶುಗರ್ ಚಾಲೆಂಜ್
ಸಕ್ಕರೆ ಹಾಗೂ ಸಿಹಿ ಪದಾರ್ಥಗಳು ತಮ್ಮ ಜೀವನ ಶೈಲಿಯ ಮೇಲೆ ಭಾರಿ ಪರಿಣಾಮ ಬೀರಿರುವ ಕಾರಣ ಡಿಸೆಂಬರ್ 31 ರವರೆಗೂ ನಟಿ ಹಾಗೂ ಮಾಜಿ ಸಂಸದೆ ರಮ್ಯಾ #ನೋಶುಗರ್ ಚಾಲೆಂಜ್ ಸ್ವೀಕರಿಸಿದ್ದಾರೆ.

ಸಕ್ಕರೆ ಮತ್ತು ನಟಿ ರಮ್ಯಾ
''ಇದು ಸಕ್ಕರೆ ಇಲ್ಲದ ನನ್ನ ಮೊದಲ ದಿನ. ಈ ವರ್ಷಾಂತ್ಯದವರೆಗೂ ಇದನ್ನೇ ಮುಂದುವರೆಸಲು ನಾನು ತೀರ್ಮಾನ ಮಾಡಿದ್ದೇನೆ. ಇಲ್ಲಿಯವರೆಗೂ ಎಲ್ಲವೂ ಸರಾಗವಾಗಿದೆ. ಸಕ್ಕರೆಯನ್ನ ಬಿಟ್ಟು ಇರಬೇಕು ಅಂತ ಹಲವಾರು ಬಾರಿ ನಾನು ಪ್ರಯತ್ನ ಪಟ್ಟಿದ್ದೇನೆ. ಆದ್ರೆ, 2-3 ದಿನಗಳಿಗಿಂತ ಹೆಚ್ಚು ದಿನ ಬಿಟ್ಟಿರಲು ಸಾಧ್ಯ ಆಗಲಿಲ್ಲ. ಎಷ್ಟೋ ಬಾರಿ ಸಕ್ಕರೆ ತ್ಯಜಿಸಲು ನಾನು ಪ್ರತಿಜ್ಞೆ ಮಾಡಿದ್ದೇನೆ ಎನ್ನುವುದನ್ನೇ ನಾನು ಮರೆತುಬಿಡುತ್ತಿದ್ದೆ'' - ನಟಿ ರಮ್ಯಾ

ವರ್ಷಾಂತ್ಯದವರೆಗೂ ಸಕ್ಕರೆ ತಿನ್ನಲ್ಲ
''ಮುಂಚೆ ಇಷ್ಟಪಟ್ಟು ಸಿಹಿ ತಿನಿಸುಗಳನ್ನು ತಿನ್ನುತ್ತಿದ್ದೆ. ಆದ್ರೆ ಅದೇ ಅಡಿಕ್ಷನ್ ಆಗ್ಹೋಗಿದೆ. ಒತ್ತಡ ಹೆಚ್ಚಾದಾಗ ಸಿಹಿ ತಿನ್ನಬೇಕು ಎನಿಸುತ್ತದೆ. ದೈಹಿಕ ಹಾಗೂ ಮಾನಸಿಕವಾಗಿ ಸಕ್ಕರೆ ಭಾರಿ ಪ್ರಭಾವ ಬೀರಿರುವ ಕಾರಣ ಡಿಸೆಂಬರ್ 31 ರವರೆಗೆ ಸಕ್ಕರೆಗೆ ಗುಡ್ ಬೈ ಹೇಳಲು ನಿರ್ಧಾರ ಮಾಡಿದ್ದೇನೆ'' ಎಂದು ನಟಿ ರಮ್ಯಾ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.


Click it and Unblock the Notifications











