ಬ್ಯಾಕ್ ಲೆಸ್ ಟಾಪ್ ನಲ್ಲಿ ರಶ್ಮಿಕಾ ಮಂದಣ್ಣ ಬೋಲ್ಡ್ ಫೋಟೋಶೂಟ್
ನಟಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತೀಯ ಚಿತ್ರರಂಗದ ಬಹುಬೇಡಿಯ ನಟಿ. ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಕಿರಿಕ್ ಚೆಲುವೆ ಈಗ ಬೋಲ್ಡ್ ಲುಕ್ ನಲ್ಲಿ ಮಿಂಚುತ್ತ ಅಭಿಮಾನಿಗಳಿಗೆ ಕಿಕ್ ಏರಿಸುತ್ತಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಟಾಪ್ ನಟಿಯರ ಸಾಲಿನಲ್ಲಿ ಮೆರೆಯುತ್ತಿರುವ ರಶ್ಮಿಕಾ ಸದ್ಯ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸಿನಿಮಾದಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ. ಎಷ್ಟೇ ವಿವಾದಗಳನ್ನು ಮಾಡಿಕೊಂಡರು. ಯಾರೆ ಎಷ್ಟು ಕಾಲೆಳೆದರು ತಲೆಕೆಡಿಸಿಕೊಳ್ಳದ ರಶ್ಮಿಕಾ, ಇತ್ತೀಚಿಗೆ ಮತ್ತೊಂದು ಬೋಲ್ಡ್ ಫೋಟೋಶೂಟ್ ಮಾಡಿಸಿದ್ದಾರೆ. ರಶ್ಮಿಕಾ ಬೋಲ್ಡ್ ಫೋಟೋಗಳೀಗ ಸಿಕ್ಕಾಪಟ್ಟೆ ವೈರಲ್ ಆಗಿವೆ.

ಬ್ಯಾಕ್ ಲೆಸ್ ಟಾಪ್ ನಲ್ಲಿ ರಶ್ಮಿಕಾ ಮಿಂಚಿಂಗ್
ಬಹುಬೇಡಿಕೆಯ ನಟಿಯಾಗಿ ಮೆರೆಯುತ್ತಿರುವ ರಶ್ಮಿಕಾ ಮಂದಣ್ಣ ಇತ್ತೀಚಿಗೆ ಮಾಡಿಸಿರುವ ಬೋಲ್ಡ್ ಫೋಟೋಶೂಟ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಬ್ಯಾಕ್ ಲೆಸ್ ಟಾಪ್ ನಲ್ಲಿ ಮಿಂಚಿರುವ ರಶ್ಮಿಕಾ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಈ ಹಿಂದೆ ಕೂಡ ರಶ್ಮಿಕಾ ಬೋಲ್ಡ್ ಅವತಾರದಲ್ಲಿ ಮಿಂಚಿದ್ದರು.

ರಶ್ಮಿಕಾ ಬೋಲ್ಡ್ ಫೋಟೋಗೆ ಸಿಕ್ಕಾಪಟ್ಟೆ ಲೈಕ್ಸ್
ರಶ್ಮಿಕಾ ಮಂದಣ್ಣ ಕ್ಲಿಕ್ಕಿಸಿಕೊಂಡಿರುವ ಬೋಲ್ಡ್ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಪಿಂಕ್ ಬಣ್ಣದ ಬ್ಯಾಕ್ ಲೆಸ್ ಟಾಪ್ ಧರಿಸಿರುವ ರಶ್ಮಿಕಾ ಫೋಟೋಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಮೆಂಟ್ಸ್ ಹರಿದು ಬಂದಿವೆ. ಅನೇಕರು ರಶ್ಮಿಕಾ ಫೋಟೋನೋಡಿ ವಾವ್..ಸೂಪರ್ ಅಂತ ಕಮೆಂಟ್ ಮಾಡುತ್ತಿದ್ದಾರೆ ಇನ್ನು ಕೆಲವರು ರಶ್ಮಿಕಾ ಕಾಲೆಯತ್ತಿದ್ದಾರೆ.

ಬೋಲ್ಡ್ ಅವತಾರದಲ್ಲಿ ಟ್ರೋಲ್ ಆಗಿದ್ದ ರಶ್ಮಿಕಾ
ಈ ಹಿಂದೆ ಕೂಡ ರಶ್ಮಿಕಾ ಬೋಲ್ಡ್ ಫೋಟೋಶೂಟ್ ಮಾಡಿಸಿದ್ದರು. ರಶ್ಮಿಕಾ ಫೋಟೋಗಳು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದವು. ಕೇವಲ ಟಾಪ್ ಮಾತ್ರ ಹಾಕಿದ್ದಾರೆ ರಶ್ಮಿಕಾ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದರು. ಆದ್ರೆ ರಶ್ಮಿಕಾ ಮಾತ್ರ ಯಾವುದಕ್ಕು ತಲೆಕೆಡಿಸಿಕೊಂಡಿರಲಿಲ್ಲ.

ಬಾಲಿವುಡ್ ಗೆ ಹೋಗ್ತಾರಂತೆ ಕಿರಿಕ್ ಸುಂದರಿ
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮಿಂಚುತ್ತಿರುವ ರಶ್ಮಿಕಾ ಸದ್ಯ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ನಟ ಶಾಹಿದ್ ಕಪೂರ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ.


Click it and Unblock the Notifications











