ರಶ್ಮಿಕಾ ಮಂದಣ್ಣ ಉದ್ದ ಕೂದಲಿಗೆ ಬಿತ್ತು ಕತ್ತರಿ: ಹೊಸ ಲುಕ್ ನಲ್ಲಿ ಕೊಡಗಿನ ಕುವರಿ.!
ಹಾಲು ಗಲ್ಲದ ಮುಖ... ಬಟ್ಟಲು ಕಂಗಳು... ಉದ್ದನೆಯ ಕೂದಲು... ಕಣ್ಣಿಗೆ ಕಪ್ಪು ಕನ್ನಡಕ... ನಟಿ ರಶ್ಮಿಕಾ ಮಂದಣ್ಣ ಎಂದ ಕೂಡಲೆ ಎಲ್ಲರ ತಲೆಯಲ್ಲೂ ಥಟ್ ಅಂತ ಮೂಡುವ ಚಿತ್ರ ಇದು.
'ಕಿರಿಕ್ ಪಾರ್ಟಿ', 'ಅಂಜನಿಪುತ್ರ', 'ಚಲೋ', 'ಚಮಕ್'... ಈ ಎಲ್ಲಾ ಸಿನಿಮಾಗಳಲ್ಲೂ ನಟಿ ರಶ್ಮಿಕಾ ಮಂದಣ್ಣ ಉದ್ದನೆಯ ಸಿಲ್ಕಿ ಕೂದಲಿನಿಂದಲೇ ಮಿಂಚಿದ್ದರು.
ಆದ್ರೀಗ, ತಮ್ಮ ಅಂದವಾದ ಕೇಶರಾಶಿಗೆ ನಟಿ ರಶ್ಮಿಕಾ ಮಂದಣ್ಣ ಕತ್ತರಿ ಪ್ರಯೋಗ ಮಾಡಿಸಿದ್ದಾರೆ. ಅರ್ಥಾತ್ ಹೇರ್ ಕಟ್ ಮಾಡಿಸಿದ್ದಾರೆ. ಉದ್ದವಾಗಿದ್ದ ನಟಿ ರಶ್ಮಿಕಾ ಮಂದಣ್ಣ ಕೂದಲು ಹೇರ್ ಕಟ್ ಆದ್ಮೇಲೆ, ಸಖತ್ ಶಾರ್ಟ್ ಆಗಿದೆ.

ಅಂದ್ಹಾಗೆ, ಹೊಸ ಲುಕ್ ನಲ್ಲಿ ರಶ್ಮಿಕಾ ಮಂದಣ್ಣ ಹೇಗೆ ಕಾಣ್ತಾರೆ ಅಂತ ನೀವೇ ನೋಡ್ಬಿಡಿ...
ಅಷ್ಟಕ್ಕೂ, ನಟಿ ರಶ್ಮಿಕಾ ಮಂದಣ್ಣ ಏಕ್ದಂ ತಮ್ಮ ಕೂದಲಿಗೆ ಕತ್ತರಿ ಹಾಕಿದ್ದು ಯಾಕೆ ಅಂದ್ರೆ.. ತಮ್ಮ ಮುಂದಿನ ಸಿನಿಮಾಗಾಗಿ. ತೆಲುಗಿನಲ್ಲಿ ನಟ ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ಮಂದಣ್ಣ 'ಡಿಯರ್ ಕಾಮ್ರೇಡ್' ಅಂತ ಸಿನಿಮಾ ಮಾಡ್ತಿದ್ದಾರೆ.
'ಡಿಯರ್ ಕಾಮ್ರೇಡ್' ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣಗೊಂದು ಸ್ಪೆಷಲ್ ಪಾತ್ರ ಇದೆ. ಈ ಪಾತ್ರಕ್ಕಾಗಿ ತಮ್ಮ ಕೂದಲನ್ನ ಶಾರ್ಟ್ ಮಾಡಿಸಿಕೊಂಡಿದ್ದಾರೆ ನಟಿ ರಶ್ಮಿಕಾ ಮಂದಣ್ಣ.
ಅಂದ್ಹಾಗೆ, ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಅಭಿನಯದ 'ಗೀತ ಗೋವಿಂದಂ' ಸಿನಿಮಾ ಆಗಸ್ಟ್ 15 ರಂದು ಬಿಡುಗಡೆ ಆಗಲಿದೆ. ಟೀಸರ್ ಹಾಗೂ ಹಾಡುಗಳಿಂದಲೇ 'ಗೀತ ಗೋವಿಂದಂ' ಸಿಕ್ಕಾಪಟ್ಟೆ ಕುತೂಹಲ ಸೃಷ್ಟಿಸಿದೆ.


Click it and Unblock the Notifications











