ಗಾಸಿಪ್ ಸುದ್ದಿಯನ್ನ ಖಚಿತ ಪಡಿಸಿದ ನಟಿ ರಶ್ಮಿಕಾ ಮಂದಣ್ಣ.!

ಕಳೆದ ಎರಡು ವಾರಗಳಿಂದಲೂ ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ನಲ್ಲಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಬಗ್ಗೆಯೇ ಸುದ್ದಿ. ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಬ್ರೇಕಪ್ ಆಗಿದ್ದಾರೆ ಎಂಬ ಗಾಸಿಪ್ ಕನ್ನಡ ಹಾಗೂ ತೆಲುಗು ಚಿತ್ರರಂಗವನ್ನ ಒಂದು ರೌಂಡ್ ಹಾಕೊಂಡ್ ಬಂತು.

ಬ್ರೇಕಪ್ ಬಗ್ಗೆ ರಶ್ಮಿಕಾ ತಾಯಿ ಸುಮನ್ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ ಕೊಟ್ಟಿದ್ದರೆ ವಿನಃ ರಶ್ಮಿಕಾ ಮಂದಣ್ಣ ಮಾತ್ರ ತುಟಿಕ್ ಪಿಟಿಕ್ ಎನ್ನಲಿಲ್ಲ. ''ಮೀಡಿಯಾಗಳಲ್ಲಿ ಬರುತ್ತಿರುವ ಸುದ್ದಿಯೆಲ್ಲ ಸುಳ್ಳು'' ಅಂತ ರಕ್ಷಿತ್ ಶೆಟ್ಟಿ ಏನೋ ಹೇಳಿಬಿಟ್ಟರು, ಆದ್ರೆ, ರಶ್ಮಿಕಾ ಮಂದಣ್ಣ ಈ ಬಗ್ಗೆ ಬಾಯಿ ಬಿಡಲಿಲ್ಲ.!

ಹೀಗಿರುವಾಗಲೇ, ರಶ್ಮಿಕಾ ಮಂದಣ್ಣ ಬಗ್ಗೆ ಇನ್ನೊಂದು ಗುಸುಗುಸು ನಿನ್ನೆ ಗಾಂಧಿನಗರದ ಗಲ್ಲಿಗಳಲ್ಲಿ ಕೇಳಿಬಂತು. ಅದೇನಪ್ಪಾ ಅಂದ್ರೆ, ಈಗಾಗಲೇ ಕಮಿಟ್ ಆಗಿದ್ದ ಕನ್ನಡ ಚಿತ್ರದಿಂದ ರಶ್ಮಿಕಾ ಮಂದಣ್ಣ ಹೊರಬಂದಿದ್ದಾರೆ ಎಂಬ ಗಾಸಿಪ್ ನಿನ್ನೆ ಕೇಳಿಬಂದಿತ್ತು. ಈಗ ಇದೇ ಗಾಸಿಪ್ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಸ್ಪಷ್ಟನೆ ಕೊಟ್ಟಿದ್ದಾರೆ. ಮುಂದೆ ಓದಿರಿ....

'ವೃತ್ರ' ಚಿತ್ರದಿಂದ ರಶ್ಮಿಕಾ ಹೊರಬಂದಿರುವುದು ನಿಜ.!

'ವೃತ್ರ' ಚಿತ್ರದಿಂದ ರಶ್ಮಿಕಾ ಹೊರಬಂದಿರುವುದು ನಿಜ.!

ಗೌತಮ್ ಅಯ್ಯರ್ ನಿರ್ದೇಶನ ಮಾಡಬೇಕಿದ್ದ 'ವೃತ್ರ' ಚಿತ್ರತಂಡದಿಂದ ನಟಿ ರಶ್ಮಿಕಾ ಮಂದಣ್ಣ ಹೊರಬಂದಿದ್ದಾರೆ. ಡೇಟ್ಸ್ ಕ್ಲಾಶ್ ಆಗಿರುವ ಕಾರಣ 'ವೃತ್ರ' ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಗುಡ್ ಬೈ ಹೇಳಿದ್ದಾರೆ.

ರಶ್ಮಿಕಾ ಮಾಡಿರುವ ಟ್ವೀಟ್ ನೋಡಿ...

''ನಾನು 'ವೃತ್ರ' ಚಿತ್ರದಲ್ಲಿ ಇರುವುದಿಲ್ಲ. ವೃತ್ತಿ ಜೀವನದ ಆರಂಭದಲ್ಲಿಯೇ ಇಂತಹ ನಿರ್ಧಾರ ಒಳ್ಳೆಯದಲ್ಲ ಎಂದು ನಾನು ಭಾವಿಸಿದ್ದೆ. ಈ ಬಗ್ಗೆ ನಾನು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರ ಬಳಿಯೂ ಚರ್ಚೆ ಮಾಡಿದ್ದೆ. ಅವರು ನನ್ನ ಪರಿಸ್ಥಿತಿಯನ್ನ ಅರ್ಥ ಮಾಡಿಕೊಂಡಿದ್ದಾರೆ. ಗೌತಮ್ ಹಾಗೂ ಇಡೀ ತಂಡಕ್ಕೆ ನನ್ನ ಶುಭಾಶಯಗಳು'' ಎಂದು ನಟಿ ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದಾರೆ.

ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದಿತ್ತು.!

ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದಿತ್ತು.!

ಈಗಾಗಲೇ 'ವೃತ್ರ' ಚಿತ್ರಕ್ಕಾಗಿ ನಟಿ ರಶ್ಮಿಕಾ ಮಂದಣ್ಣ ಫೋಟೋ ಶೂಟ್ ಕೂಡ ಮಾಡಿದ್ದರು. ಈ ಚಿತ್ರದಲ್ಲಿ ನಟಿ ರಶ್ಮಿಕಾಗೆ ತನಿಖಾ ಅಧಿಕಾರಿಯ ಪಾತ್ರ ಇತ್ತು. ಆದ್ರೀಗ, ಅನಿವಾರ್ಯ ಕಾರಣಗಳಿಂದ ಸಿನಿಮಾದಿಂದ ರಶ್ಮಿಕಾ ಹೊರನಡೆದಿದ್ದಾರೆ.

ಕಾರಣ ಏನು.?

ಕಾರಣ ಏನು.?

ಸದ್ಯಕ್ಕೆ ಟಾಲಿವುಡ್ ನಲ್ಲಿ ನಟಿ ರಶ್ಮಿಕಾ ಬಿಜಿಯಿದ್ದಾರೆ. ಮುಂದಿನ ವರ್ಷಾರಂಭದವರೆಗೂ ಅವರ ಡೇಟ್ಸ್ ಬ್ಲಾಕ್ ಆಗಿದೆ. 'ವೃತ್ರ' ಚಿತ್ರಕ್ಕೆ ಅವರ ಬಳಿ ಡೇಟ್ಸ್ ಇಲ್ಲ. ಹೀಗಾಗಿ, ಬೇರೆ ದಾರಿ ಇಲ್ಲದೆ 'ವೃತ್ರ'ದಿಂದ ಹೊರಗೆ ಬಂದಿದ್ದಾರೆ.

More from Filmibeat

English summary
Kannada Actress Rashmika Mandanna confirms that she is out of Kannada Movie Vrithra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X