ವಿಜಯ್ ದೇವರಕೊಂಡಗೆ ಹೇರ್ ಸ್ಟೈಲ್ ಮಾಡಿದ ರಶ್ಮಿಕಾ ಮಂದಣ್ಣ
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿರುವ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ. ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಸಿನಿಮಾ ವಿಚಾರಗಳ ಜೊತೆಗೆ ವಿವಾದಗಳು ಬೇತಾಳದಂತೆ ಅಂಟಿಕೊಂಡು ರಶ್ಮಿಕಾ ಬೆನ್ನು ಬಿಡುವಂತೆ ಕಾಣುತ್ತಿಲ್ಲ.
ರಶ್ಮಿಕಾ ಏನೆ ಮಾತನಾಡಿದರು, ಯಾವುದೆ ಸಿನಿಮಾ ಮಾಡಿದರು ಅಲ್ಲೊಂದು ವಿವಾದ ಸೃಷ್ಡಿಯಾಗುತ್ತಿದೆ. ವಿಜಯ್ ದೇವರಕೊಂಡ ಜೊತೆ ಉತ್ತಮ ಸ್ನೇಹ ಬೆಳೆಸಿಕೊಂಡಿರುವ ರಶ್ಮಿಕಾ ವಿರುದ್ಧ ನೆಟ್ಟಗರು ಕೆಂಡಾರುತ್ತಿದ್ದಾರೆ.
ಕನ್ನಡ ವಿರೋದಿ ರಶ್ಮಿಕಾ, ಕನ್ನಡ ಸಿನಿಮಾಗಳನ್ನು ಮಾಡುವುದಿಲ್ಲ, ಹತ್ತಿದ ಏಣಿಯನ್ನು ಒದ್ದು ಹೋಗಿದ್ದಾರೆ ಹೀಗೆ ತರಹೇವಾರಿ ರೀತಿಯಲ್ಲಿ ರಶ್ಮಿಕಾರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ ನೆಟ್ಟಿಗರು. ಈ ನಡುವೆ ರಶ್ಮಿಕಾ ಅವರ ಮತ್ತೊಂದು ವಿಡೋಯಿ ವೈರಲ್ ಆಗಿದೆ. ವಿಜಯ್ ದೇವರಕೊಂಡಗೆ ರಶ್ಮಿಕಾ ಹೇರ್ ಸ್ಟೈಲ್ ಮಾಡುವ ವಿಡಿಯೋ ಎಲ್ಲಾ ಕಡೆ ಹರಿದಾಡುತ್ತಿದೆ.

ವಿಜಯ್ ಗೆ ರಶ್ಮಿಕಾ ಹೇರ್ ಸ್ಟೈಲ್
ಇತ್ತೀಚಿಗೆ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಅವರಿಗೆ ಹೇರ್ ಸ್ಟೈರ್ ಮಾಡಿದ್ದಾರೆ. ಹೇರ್ ಸ್ಟೈರ್ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ. ಅಂದ್ಹಾಗೆ ರಶ್ಮಿಕಾ ತುಂಬಾ ಸೀರಿಯಸ್ ಆಗಿ ವಿಜಯ್ ಗೆ ಹೇರ್ ಸ್ಟೈಲ್ ಮಾಡಿದ್ದಾರೆ ಅಂತ ಅಂದ್ಕೋಬೇಡಿ ಇಂದೊಂದು ತಮಾಷೆಯ ಹೇರ್ ಸ್ಟೈಲ್ ವಿಡಿಯೋ ಆಗಿದೆ.

ವಿಜಯ್ ಕೂದಲನ್ನು ಎಳೆದಾಡಿದ ರಶ್ಮಿಕಾ
ವಿಜಯ್ ದೇವರಕೊಂಡ ಉದ್ದ ಕೂದಲು ಮತ್ತು ದಾಡಿ ಬಿಟ್ಟಿದ್ದಾರೆ. ಇತ್ತೀಚಿಗೆ ರಿಲೀಸ್ ಆದ ಡಿಯರ್ ಕಾಮ್ರೇಡ್ ಸಿನಿಮಾದಲ್ಲೂ ವಿಜಯ್ ಈ ಒಂದು ಗೆಪಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಚಿತ್ರೀಕರಣ ಸಮಯದಲ್ಲಿ ರಶ್ಮಿಕಾ ವಿಜಯ್ ತಲೆ ಬಾಚುವ ನೆಪದಲ್ಲಿ ಕೂದಲು ಹಿಡಿದು ಎಳೆದು ತಮಾಷೆ ಮಾಡಿದ್ದಾರೆ. ಈ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗಿದೆ. ಈ ವಿಡಿಯೋ ರಶ್ಮಿಕಾ ಮತ್ತು ವಿಜಯ್ ಇಬ್ಬರು ಸ್ನೇಹ ಎಷ್ಟು ಗಾಢವಾಗಿದೆ ಎನ್ನುವುದು ಗೊತ್ತಾಗುತ್ತಿದೆ.

ಡಿಯರ್ ಕಾಮ್ರೇಡ್ ಗೆ ಮಿಶ್ರ ಪ್ರತಿಕ್ರಿಯೆ
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅಭಿನಯದ ಡಿಯರ್ ಕಾಮ್ರೇಡ್ ಸಿನಿಮಾ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಆದ್ರೆ ಕನ್ನಡದ ಡಿಯರ್ ಕಾಮ್ರೇಡ್ ನಿರೀಕ್ಷೆಯ ಮಟ್ಟ ಮುಟ್ಟುವಲ್ಲಿ ವಿಫಲವಾಗಿದೆ. ನಾಲ್ಕು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಿ ಆಗಿದೆ. ಬಾರಿ ಹೈಪ್ ಕ್ರಿಯೇಟ್ ಮಾಡಿದ್ದ ಈ ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರೆಯೆ ವ್ಯಕ್ತವಾಗಿದೆ.

ಕನ್ನಡ ವಿರೋಧಿ ರಶ್ಮಿಕಾ
ರಶ್ಮಿಕಾ ಕನ್ನಡ ವಿರೋದಿ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕೆಯನ್ನು ಹಿಗ್ಗಾಮುಗ್ಗ ಥಳಿಸುತ್ತಿದ್ದಾರೆ. ಕನ್ನಡ ಬರಲ್ಲ ಎಂದು ಹೇಳಿರುವ ರಶ್ಮಿಕಾ ಅವರಿಗೆ ಕನ್ನಡಾಭಿಮಾನಿಗಳು ಸರಿಯಾಗೆ ಮಂಗಳಾರತಿ ಮಾಡುತ್ತಿದ್ದಾರೆ. ಇದರ ನಡುವೆ ನಟಿ ಅನುಷ್ಕಾ ಶೆಟ್ಟಿ ಅಮ್ಮನಿಗೆ ಕನ್ನಡದಲ್ಲಿ ವಿಶ್ ಮಾಡಿದ್ದು ರಶ್ಮಿಕಾ ದೊಡ್ಡ ತಲೆನೋವಾಗಿತ್ತು. ಈ ವಿಚಾರವಾಗಿ ರಶ್ಮಿಕಾ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.


Click it and Unblock the Notifications











