ಅಂತೂ ಇಂತೂ ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್ ಬಗ್ಗೆ ಮೌನ ಮುರಿದ ರಶ್ಮಿಕಾ.!

Recommended Video

ರಕ್ಷಿತ್ ಬಗ್ಗೆ ಏನ್ ಹೇಳಿದ್ರು ರಶ್ಮಿಕಾ ಮಂದಣ್ಣ..! | Filmibeat Kannada

ಕಳೆದ ಒಂದರೆಡು ವಾರಗಳಿಂದಲೂ ನಟಿ ರಶ್ಮಿಕಾ ಮಂದಣ್ಣ ಹೆಸರು ಟಾಪ್ ಟ್ರೆಂಡಿಂಗ್ ನಲ್ಲಿದೆ. 'ಗೀತ ಗೋವಿಂದಂ' ಸಿನಿಮಾ ಸೂಪರ್ ಹಿಟ್ ಆದ್ಮೇಲೆ, ಟಾಲಿವುಡ್ ನಲ್ಲಿ ರಶ್ಮಿಕಾ ಮಂದಣ್ಣ ಮನೆ ಮಾತಾದರು. ಇತ್ತ ಸ್ಯಾಂಡಲ್ ವುಡ್ ನಲ್ಲಿ ರಶ್ಮಿಕಾ ಮಂದಣ್ಣ ಸದ್ದು ಮಾಡಿದ್ದೇ ಬೇರೆ ವಿಷಯಕ್ಕೆ.

ನಟಿ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ನಿಶ್ಚಿತಾರ್ಥ ಮುರಿದು ಬಿದ್ದಿದೆ... ರಶ್ಮಿಕಾ ಮಂದಣ್ಣ-ರಕ್ಷಿತ್ ಶೆಟ್ಟಿ ನಡುವೆ ಬ್ರೇಕಪ್ ಆಗಿದೆ... ಎಂಬ ಗುಸುಗುಸು ಗಾಂಧಿನಗರದಲ್ಲಿ ಹರಿದಾಡಿತು.

ಬ್ರೇಕಪ್ ವಿಚಾರದ ಬಗ್ಗೆ ರಶ್ಮಿಕಾ ತಾಯಿ ಸುಮನ್ ಮಂದಣ್ಣ ಪ್ರತಿಕ್ರಿಯೆ ನೀಡಿದರು. ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಕ್ಲಾರಿಟಿ ಕೊಟ್ಟರು. ಇಲ್ಲಿಯವರೆಗೂ ಬ್ರೇಕಪ್ ಬಗ್ಗೆ ರಶ್ಮಿಕಾ ಮಂದಣ್ಣ ತುಟಿ ಬಿಚ್ಚಿರಲಿಲ್ಲ. ಇದೀಗ ಟ್ವಿಟ್ಟರ್ ನಲ್ಲಿ ಈ ಕುರಿತು ರಶ್ಮಿಕಾ ಮಂದಣ್ಣ ಮೌನ ಮುರಿದಿದ್ದಾರೆ. ಮುಂದೆ ಓದಿರಿ....

ಕ್ಷಮೆ ಕೇಳಿದ ರಶ್ಮಿಕಾ

ಕ್ಷಮೆ ಕೇಳಿದ ರಶ್ಮಿಕಾ

''ಇಷ್ಟು ದಿನ ನಾನು ಸೈಲೆಂಟ್ ಆಗಿ ಇದ್ದದ್ದಕ್ಕೆ ಕ್ಷಮೆ ಇರಲಿ. ಆದ್ರೆ, ನನ್ನ ಬಗ್ಗೆ ಬರುತ್ತಿರುವ ಎಲ್ಲಾ ಸ್ಟೋರಿಗಳು, ಆರ್ಟಿಕಲ್ ಗಳು, ಕಾಮೆಂಟ್ಸ್ ಹಾಗೂ ಟ್ರೋಲ್ ಗಳನ್ನ ನಾನು ಗಮನಿಸುತ್ತಿದ್ದೇನೆ. ಎಲ್ಲೆಡೆ ನನ್ನನ್ನ ಬಿಂಬಿಸುತ್ತಿರುವ ರೀತಿ ನನಗೆ ಬೇಸರ ತರಿಸಿದೆ'' - ರಶ್ಮಿಕಾ ಮಂದಣ್ಣ

ರಶ್ಮಿಕಾ ಮಾಡಿರುವ ಟ್ವೀಟ್ ಏನು.?

''ನಾನು ಇಲ್ಲಿ ಯಾವುದಕ್ಕೂ, ಯಾರ ಬಗ್ಗೆಯೂ ಸ್ಪಷ್ಟನೆ ಕೊಡಲ್ಲ. ಆದ್ರೆ, ರಕ್ಷಿತ್ ಆಗಲಿ, ನಾನಾಗಲಿ ಅಥವಾ ಚಿತ್ರರಂಗದಲ್ಲಿ ಯಾರೇ ಆಗಲಿ ಇದನ್ನೆಲ್ಲ ಅನುಭವಿಸಬಾರದು ಎಂಬುದನ್ನಷ್ಟೇ ನಾನು ಹೇಳಲು ಬಯಸುವೆ'' - ರಶ್ಮಿಕಾ ಮಂದಣ್ಣ

ನೆಮ್ಮದಿಯಿಂದ ಕೆಲಸ ಮಾಡಲು ಬಿಡಿ

ನೆಮ್ಮದಿಯಿಂದ ಕೆಲಸ ಮಾಡಲು ಬಿಡಿ

''ಪ್ರತಿ ನಾಣ್ಯಕ್ಕೆ ಹೇಗೆ ಎರಡು ಮುಖಗಳು ಇರುತ್ತವೆಯೋ, ಹಾಗೇ ಪ್ರತಿಯೊಂದು ಕಥೆಗೂ ಎರಡು ಆಯಾಮ ಇರುತ್ತವೆ. ಚಿತ್ರರಂಗದಲ್ಲಿ ಕೆಲಸ ಮಾಡುವವರನ್ನ ನೆಮ್ಮದಿಯಿಂದ ಕೆಲಸ ಮಾಡಲು ಬಿಡಿ'' - ರಶ್ಮಿಕಾ ಮಂದಣ್ಣ

ಕನ್ನಡ ಚಿತ್ರದಲ್ಲಿ ನಟಿಸುವೆ

ಕನ್ನಡ ಚಿತ್ರದಲ್ಲಿ ನಟಿಸುವೆ

''ಕನ್ನಡ ಚಿತ್ರದಲ್ಲಿ ನಾನು ನಟಿಸುವೆ. ನಾನು ಇಲ್ಲಿಯೇ ಇರುವೆ. ಯಾವುದೇ ಭಾಷೆ ಆಗಲಿ, ಯಾವುದೇ ಚಿತ್ರರಂಗ ಆಗಲಿ.. ನನ್ನ ಬೆಸ್ಟ್ ನಾನು ಕೊಡುವೆ. ಧನ್ಯವಾದಗಳು'' - ರಶ್ಮಿಕಾ ಮಂದಣ್ಣ

More from Filmibeat

English summary
Kannada Actress Rashmika Mandanna reacts about Breakup with Rakshit Shetty.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X