ಟ್ರೋಲ್ ಗಳ ವಿಚಾರದಲ್ಲಿ ಇನ್ಮುಂದೆ ಸುಮ್ಮನಿರಲ್ಲ: ರಶ್ಮಿಕಾ ಮಂದಣ್ಣ

Recommended Video

ಪರ್ಸನಲ್ ಲೈಫ್ ವಿಚಾರಗಳನ್ನು ಗುಟ್ಟಾಗಿಡ್ತಾರಂತೆ ರಶ್ಮಿಕಾ | FILMIBEAT KANNADA

ಸ್ಯಾಂಡಲ್ ವುಡ್ ನಟಿ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಟ್ರೋಲ್ ವಿಚಾರವಾಗಿ ಮಾತನಾಡಿದ್ದಾರೆ. ಕೆಟ್ಟ ಪದಗಳನ್ನು ಬಳಸಿ ಟ್ರೋಲ್ ಮಾಡುವ ಬಗ್ಗೆ ಬೇಸರ ವ್ಯಕ್ತಪಡಿಸುತ್ತ, ಈಗ ಟ್ರೋಲ್ ಗಳಿಗೆ ಉತ್ತರ ಕೊಡಲು ಕಲಿತಿದ್ದೀನಿ ಎಂದು ಹೇಳಿದ್ದಾರೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಟ್ರೋಲ್ ಆದ ನಟಿಯರಲ್ಲಿ ರಶ್ಮಿಕಾ ಕೂಡ ಒಬ್ಬರು.

ರಶ್ಮಿಕಾ ಎಷ್ಟೇ ಟ್ರೋಲ್ ಮಾಡಿದರು ಯಾವುದೆ ಪ್ರತಿಕ್ರಿಯೆ ನೀಡುತ್ತಿರಲ್ಲಿಲ್ಲ. ಆದರೀಗ ಟ್ರೋಲ್ ಗಳಿಗೆ ಪ್ರತಿಕ್ರಿಯೆ ಕೊಡಲು ಸಿದ್ಧರಾಗಿರುವುದಾಗಿ ಹೇಳಿದ್ದಾರೆ. ಇತ್ತೀಚಿಗೆ 'ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ'ದಲ್ಲಿ ಭಾಗಿಯಾಗಿದ್ದ ರಶ್ಮಿಕಾ 'ಫಿಲ್ಮಿಬೀಟ್'ಗೆ ನೀಡಿದ ಸಂದರ್ಶನದಲ್ಲಿ ಟ್ರೋಲ್ ಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ರಶ್ಮಿಕಾ ಹೇಳಿದ್ದೇನು?

ರಶ್ಮಿಕಾ ಹೇಳಿದ್ದೇನು?

"ನಾನೀನ್ನು ಚಿಕ್ಕವಳು. ಎಲ್ಲವನ್ನು ಸ್ವೀಕರಿಸುತ್ತೇನೆ. ಈ ಬಗ್ಗೆ ನಿತ್ಯಾ ಮೆನನ್ ಜೊತೆ ಮಾತನಾಡುತ್ತಿದ್ದೆ, ಅವರು ಇದೆಲ್ಲ ಕಮ್ಮಿ ಆಗುತ್ತೆ, ಸ್ವಲ್ಪ ಸಮಯ ಅಷ್ಟೆ ಎಂದು ಹೇಳಿದರು. ನನ್ನ ಸಹ ಕಲಾವಿದರು ಕೂಡ ಹಾಗೆ ಹೇಳುತ್ತಿದ್ದಾರೆ. ಇದೆಲ್ಲ ಸ್ವಲ್ಪ ದಿನ ನಂತರ ಕಮ್ಮಿ ಆಗುತ್ತೆ ಎನ್ನುತ್ತಿದ್ದಾರೆ. ನಾನು ಕೂಡ ಯಾವಾಗ ಇದೆಲ್ಲ ಕಮ್ಮಿ ಆಗುತ್ತೆ ಎಂದು ಕಾಯುತ್ತಿದ್ದೀನಿ" ಎಂದು ಹೇಳಿದ್ದಾರೆ.

ಈಗ ಉತ್ತರ ಕೊಡಲು ಕಲಿತ್ತಿದ್ದೀನಿ

ಈಗ ಉತ್ತರ ಕೊಡಲು ಕಲಿತ್ತಿದ್ದೀನಿ

"ಬಹಳ ಸಮಯದ ನಂತರ ಈಗ ಹೇಗೆ ಪ್ರತಿಕ್ರಿಯೆ ನೀಡಬೇಕು ಎನ್ನುವುದು ಗೊತ್ತಾಗಿದೆ. ಟ್ರೋಲ್ ಗಳಿಂದ ಮಾನಸಿಕವಾಗಿ ತುಂಬ ಹಿಂಸೆ ಆಗುತ್ತಿತ್ತು. ಮೊದಲು ಯಾವ ರೀತಿ ಪ್ರತಿಕ್ರಿಯೆ ನೀಡಬೇಕೆಂದು ಗೊತ್ತಾಗುತ್ತಿರಲಿಲ್ಲ. ಈಗ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ ಹೇಗೆ ಉತ್ತರಿಸಬೇಕು ಎನ್ನುವ ವಿಶ್ವಾಸ ಬಂದಿದೆ. ನನ್ನ ಕೆಲಸದ ಬಗ್ಗೆ ಮಾತನಾಡಿ. ಆದರೆ ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಬೇಡಿ. ಮೊದಲು ಜನರು ನನ್ನ ಬಗ್ಗೆ ತಿಳಿದುಕೊಳ್ಳಲಿ ಎಂದು ಅಂದುಕೊಳ್ಳುತ್ತಿದ್ದೆ. ಆದರೀಗ ನನ್ನ ವೈಯಕ್ತಿಕ ಜೀವನದ ಬಗ್ಗೆ ಗೊತ್ತಾಗದಂತೆ ನೋಡಿಕೊಳ್ಳುವುದನ್ನು ನಾನು ಕಲಿಯಬೇಕು. ಮುಚ್ಚಿಟ್ಟಷ್ಟು ಫನ್ ಜಾಸ್ತಿ" ಎಂದು ಹೇಳಿದ್ದಾರೆ.

ಗೋವಾ ಫಿಲ್ಮ್ ಫೆಸ್ಟ್ ನಲ್ಲಿ ರಶ್ಮಿಕಾ

ಗೋವಾ ಫಿಲ್ಮ್ ಫೆಸ್ಟ್ ನಲ್ಲಿ ರಶ್ಮಿಕಾ

50ನೇ ಗೋವ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅದ್ದೂರಿ ತೆರೆ ಬಿದ್ದಿದೆ. ಇದೇ ತಿಂಗಳು 20ರಿದಂ 28ರ ವರೆಗೆ ನಡೆದ ಫಿಲ್ಮ್ ಫೆಸ್ಟ್ ನಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದಿಂದ ನಟಿ ರಶ್ಮಿಕಾ ಮಂದಣ್ಣ ಮತ್ತು ನಿತ್ಯಾ ಮೆನನ್ ಭಾಗಿಯಾಗಿದ್ದರು. ಮೊದಲ ಬಾರಿಗೆ ಫಿಲ್ಮ್ ಫೆಸ್ಟ್ ನಲ್ಲಿ ಭಾಗಿಯಾಗಿದ್ದ ರಶ್ಮಿಕಾ ಸಂತಸ ವ್ಯಕ್ತಪಡಿಸಿ, ಮುಂದಿನ ವರ್ಷ ಕೂಡ ಭಾಗಿಯಾಗುತ್ತೇನೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಬಾಲ್ಯದ ಫೋಟೋಗೆ ಕೆಟ್ಟ ಪದ ಬಳಸಿ ಟ್ರೋಲ್

ಬಾಲ್ಯದ ಫೋಟೋಗೆ ಕೆಟ್ಟ ಪದ ಬಳಸಿ ಟ್ರೋಲ್

ಟ್ರೋಲ್ ಪೇಜ್ ಗಳಿಗೆ ಅತೀ ಹೆಚ್ಚು ಬಾರಿ ಆಹಾರವಾದ ನಟಿಯರಲ್ಲಿ ರಶ್ಮಿಕಾ ಕೂಡ ಒಬ್ಬರು. ಇತ್ತೀಚಿಗೆ ರಶ್ಮಿಕಾ ಬಾಲ್ಯದ ಫೋಟೋ ಬಳಸಿ ತೀರಾ ಕೆಟ್ಟ ಪದಗಳಿಂದ ಟ್ರೋಲ್ ಮಾಡಲಾಗಿತ್ತು. ಅನೇಕ ಕಲಾವಿದರು ರಶ್ಮಿಕಾ ಪರ ಧ್ವನಿ ಎತ್ತಿದ್ದರು. ಕೆಟ್ಟ ಪದಗಳನ್ನು ಬಳಸಿ ಟ್ರೋಲ್ ಮಾಡುವವರ ವಿರುದ್ಧ ಅನೇಕರು ಆಕ್ರೋಶ ಹೊರ ಹಾಕಿದ್ದರು. ನಟಿ ರಚಿತಾ ರಾಮ್ ಸೇರಿದಂತೆ ಸ್ಯಾಂಡಲ್ ವುಡ್ ನ ಅನೇಕ ನಿರ್ದೇಶಕರು ಕೂಡ ರಶ್ಮಿಕಾ ಪರ ಧ್ವನಿ ಎತ್ತಿದ್ದರು.

More from Filmibeat

English summary
Kannada actress Rashmika Mandanna reacts on trolls in international film festival of Goa.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X