ಅಂದು ಕರ್ನಾಟಕದ ಕ್ರಶ್, ಇಂದು ಸೆನ್ಸೇಷನಲ್ ನಟಿಯಾದ ರಶ್ಮಿಕಾ ಮಂದಣ್ಣ
Recommended Video
ನಟಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾತರೀಯ ಚಿತ್ರರಂಗದ ಸೆನ್ಸೇಷನಲ್ ನಟಿ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತ ಒಂದಿಷ್ಟು ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಿರುವ ರಶ್ಮಿಕಾ ಸದಾ ಸುದ್ದಿಯಲ್ಲಿ ಇರುತ್ತಾರೆ.
ಎಷ್ಟೇ ವಿವಾದಗಳನ್ನು ಮಾಡಿಕೊಂಡರು ರಶ್ಮಿಕಾ ಆರೋಧಿಸುವ ಅಭಿಮಾನಿಗಳ ಸಂಖ್ಯೆ ಕಮ್ಮಿ ಆಗಿಲ್ಲ. ಅಲ್ಲದೆ ರಶ್ಮಿಕಾಗೆ ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಸದ್ಯ ಕಿರಿಕ್ ಸುಂದರಿ 'ಸೆನ್ಸೇಷನ್ ಆಫ್ ದಿ ಇಯರ್' ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ರಶ್ಮಿಕಾಗೆ ಒಲಿದ ಸೆನ್ಸೇಷನ್ ಆಫ್ ದಿ ಇಯರ್ ಪ್ರಶಸ್ತಿ
ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ರಶ್ಮಿಕಾ ಸದ್ಯ ಕನ್ನಡ ಮಾತ್ರವಲ್ಲದೆ ದಕ್ಷಿಣ ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿದ್ದಾರೆ. ಸದಾ ಸುದ್ದಿಯಲ್ಲಿರುವ ಕಿರಿಕ್ ಸುಂದರಿಗೆ ಜೆ ಎಫ್ ಡಬ್ಲ್ಯೂ ಮ್ಯಾಗಜಿನ್ 'ಸೆನ್ಸೇಷನ್ ಆಫ್ ದಿ ಇಯರ್' ಪ್ರಶಸ್ತಿ ನೀಡಿ ಗೌರವಿಸಿದೆ.

ಅಂದು ಕರ್ನಾಟಕ ಕ್ರಶ್, ಇಂದು ಸೆನ್ಸೇಷನಲ್ ಗರ್ಲ್
ರಕ್ಷಿತ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿದ್ದ ಸೂಪರ್ ಹಿಟ್ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಷ್ಮಾ ಧರಿಸಿ ಸಾನ್ವಿಯಾಗಿ ಮೊದಲ ಬಾರಿಗೆ ಕನ್ನಡಿಗರ ಮುಂದೆ ಬಂದಿದ್ದರು. ರಶ್ಮಿಕಾ ಮೊದಲ ನೋಟಕ್ಕೆ ಚಿತ್ರಾಭಿಮಾನಿಗಳು ಫಿದಾ ಆಗಿದ್ದರು. ಅಂದು ಕರ್ನಾಟಕ ಕ್ರಶ್ ಅಂತಾನೆ ಖ್ಯಾತಿಗಳಿಸಿದ್ದ ರಶ್ಮಿಕಾ ಇಂದು ದಕ್ಷಿಣ ಭಾರತೀಯ ಚಿತ್ರರಂಗದ ಸೆನ್ಸೇಷನಲ್ ನಟಿಯಾಗಿದ್ದಾರೆ.

ಬ್ಯಾಕ್ ಲೆಸ್ ಟಾಪ್ ನಲ್ಲಿ ರಶ್ಮಿಕಾ ಮಿಂಚಿಂಗ್
ಇತ್ತೀಚಿಗೆ ರಶ್ಮಿಕಾ ಧರಿಸಿದ್ದ ಬ್ಯಾಕ್ ಲೆಸ್ ಟಾಪ್ ಸಿಕ್ಕಾಪಟ್ಟೆ ವೈರಲ್ ಆಗತ್ತು. ವಿಶೇಷ ಅಂದ್ರೆ ರಶ್ಮಿಕಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಸೆನ್ಸೇಷನ್ ಆಫ್ ದಿ ಇಯರ್ ಪ್ರಶಸ್ತಿ ಕಾರ್ಯಕ್ರಮಕ್ಕಾಗಿ. ಪಿಂಕ್ ಡ್ರೆಸ್ ಧರಿಸಿ ಪ್ರಶಸ್ತಿಗೆ ಮುತ್ತಿಟ್ಟಿರುವ ರಶ್ಮಿಕಾಗೆ ಅಭಿಮಾನಿಗಳಿಂದ ಶುಭಾಶಯಗಳು ಹರಿದು ಬರುತ್ತಿವೆ.

ಧನ್ಯವಾದ ತಿಳಿಸಿದ ರಶ್ಮಿಕಾ
"ಪ್ರೀತಿ ಮತ್ತು ಸಹಕಾರ ನೀಡದ ಎಲ್ಲರಿಗೂ ಧನ್ಯವಾದಗಳು. ಇದು ನನಗೆ ಮತ್ತಷ್ಟು ಕಷ್ಟಪಟ್ಟು ಕೆಲಸ ಮಾಡಲು ಪ್ರೇರೆಪಿಸುತ್ತದೆ, ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ ಮತ್ತು ಒಳ್ಳೆಯ ಕಥೆಗಳು ನಿಮಗೆ ಎಂದಿಗೂ ಮರೆಯಲಾಗದ ಹೆಸರನ್ನು ನೀಡುತ್ತೆ. ಈ ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕೆ ಧನ್ಯವಾದಗಳು" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಪ್ರಶಸ್ತಿಯ ಜೊತೆಗೆ ಫೋಟೋ ಕೂಡ ಶೇರ್ ಮಾಡಿದ್ದಾರೆ.


Click it and Unblock the Notifications











