»   » ಪ್ರಭಾಸ್ ಚಿತ್ರವನ್ನ 'ಕಿರಿಕ್' ಸಾನ್ವಿ ರಿಜೆಕ್ಟ್ ಮಾಡಿದ್ಯಾಕೆ?

ಪ್ರಭಾಸ್ ಚಿತ್ರವನ್ನ 'ಕಿರಿಕ್' ಸಾನ್ವಿ ರಿಜೆಕ್ಟ್ ಮಾಡಿದ್ಯಾಕೆ?

Posted By:
Subscribe to Filmibeat Kannada

'ಕಿರಿಕ್ ಪಾರ್ಟಿ' ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಸದ್ಯ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕನ್ನಡದ ಟಾಪ್ ನಟರ ಜೊತೆಯಲ್ಲಿ ಸಿನಿಮಾ ಮಾಡ್ತಿರುವ ರಶ್ಮಿಕಾ, ಅತ್ತ ಟಾಲಿವುಡ್ ನಲ್ಲೂ ತೊಡಗಿಸಿಕೊಂಡಿದ್ದಾರೆ.

ಈ ಮಧ್ಯೆ ಬಾಹುಬಲಿ ಖ್ಯಾತಿ ನಟ ಪ್ರಭಾಸ್ ಚಿತ್ರದಲ್ಲಿ ನಟಿಸುವಂತೆ ರಶ್ಮಿಕಾ ಮಂದಣ್ಣ ಅವರಿಗೆ ಆಫರ್ ಬಂದಿದೆ ಎಂಬ ಸುದ್ದಿಗಳು ಹರಿದಾಡಿದ್ವು. ಆದ್ರೆ, ಯಾವ ಚಿತ್ರಕ್ಕೆ, ಆಮೇಲೆ ಏನಾಯ್ತು ಎಂಬುದು ಗೊತ್ತಿರಲಿಲ್ಲ. ಇದೀಗ ಈ ವಿಷ್ಯವನ್ನ ಸ್ವತಃ ರಶ್ಮಿಕಾ ಅವರೇ ಬಹಿರಂಗ ಪಡಿಸಿದ್ದಾರೆ.

Kannada Actress Rashmika Mandanna Reject Prabhas Film?

ಪ್ರಭಾಸ್ ಜೊತೆ ನಟಿಸಲು ಆಫರ್ ಬಂದಿದ್ದು ನಿಜಾ. ಆದ್ರೆ, ಡೇಟ್ ಹೊಂದಾಣಿಕೆ ಆಗದ ಕಾರಣ ಈ ಚಿತ್ರ ಇನ್ನು ಕನ್ ಫರ್ಮ್ ಆಗಿಲ್ಲವಂತೆ. ಇನ್ನು ಈ ಚಿತ್ರತಂಡದ ಜೊತೆ ಸಂಪರ್ಕದಲ್ಲಿರುವ ನಟಿ, ನಟಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎನ್ನುತ್ತಾರೆ.

ಸದ್ಯ, ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ', ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಚಮಕ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆ ತೆಲುಗಿನಲ್ಲಿ ನಾಗಶೌರ್ಯ ಮತ್ತು ರಾಮ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೇ, ಪ್ರಭಾಸ್ ಮುಂದಿನ ಚಿತ್ರದಲ್ಲಿ ರಶ್ಮಿಕಾ ಅವರನ್ನ ಹೀರೋಯಿನ್ ಆಗಿ ನೋಡಬಹುದಂತೆ.

English summary
Why did Kannada Actress Rashmika Mandanna Rejected Telugu Actor Prabhas's Film.?

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X