For Quick Alerts
  ALLOW NOTIFICATIONS  
  For Daily Alerts

  ಅಂತೆ ಕಂತೆಗಳು ನಿಜವಾಯ್ತು : ಮಹೇಶ್ ಬಾಬು ಜೊತೆ ರಶ್ಮಿಕಾ ರೋಮ್ಯಾನ್ಸ್

  |

  ರಶ್ಮಿಕಾ ಮಂದಣ್ಣ ದಕ್ಷಿಣ ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ನಟಿ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇರುವ ರಶ್ಮಿಕಾ ಸದ್ಯ ಅಭಿಮಾನಿಗಳಿಗೆ ಮತ್ತೊಂದು ಬ್ರೇಕಿಂಗ್ ಸುದ್ದಿ ನೀಡಿದ್ದಾರೆ.

  ರಶ್ಮಿಕಾ ಬಳಿ ಸದ್ಯ ಕೈ ತುಂಬ ಸಿನಿಮಾಗಳಿವೆ. ಇದರ ನಡುವೆ ಮತ್ತೊಂದು ಸ್ಟಾರ್ ನಟನ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಹೌದು, ರಶ್ಮಿಕಾ ಬಹುದಿನಗಳ ಕನಸಾಗಿದ್ದ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಜೊತೆ ಅಭಿನಯಿಸುವ ಅವಕಾಶ ಈಗ ನನಸಾಗಿದೆ.

  ಸೆಂಚುರಿಯತ್ತ ಮುನ್ನುಗ್ಗುತ್ತಿರುವ 'ಯಜಮಾನ' ಚಿತ್ರದ ಟೈಟಲ್ ಸಾಂಗ್ ರಿಲೀಸ್

  ಮಹೇಶ್ ಬಾಬು ಸಿನಿಮಾದಲ್ಲಿ ರಶ್ಮಿಕಾ ಕಾಣಿಸಿಕೊಳ್ಳುತ್ತಾರೆ ಎನ್ನುವ ಸುದ್ದಿ ಅನೇಕ ದಿನಗಳಿಂದ ಹರಿದಾಡುತ್ತಿತ್ತು. ಕೇವಲ ಅಂತೆ ಕಂತೆಗಳ ಮೂಲಕ ಸದ್ದು ಮಾಡುತ್ತಿದ್ದ ರಶ್ಮಿಕಾ ಈಗ ನಿಜಕ್ಕು ಮಹೇಶ್ ಬಾಬು ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಮುಂದೆ ಓದಿ..

  'ಸರಿಲೆರು ನೀಕೆವ್ವರು' ಸಿನಿಮಾದಲ್ಲಿ ರಶ್ಮಿಕಾ

  'ಸರಿಲೆರು ನೀಕೆವ್ವರು' ಸಿನಿಮಾದಲ್ಲಿ ರಶ್ಮಿಕಾ

  ಮಹೇಶ್ ಬಾಬು ಅಭಿನಯದ ಹೊಸ ಸಿನಿಮಾ 'ಸರಿಲೆರು ನೀಕೆವ್ವರು' ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಹೇಶ್ ಬಾಬು ಅಭಿನಯದ 26ನೇ ಸಿನಿಮಾ ಇದಾಗಿದೆ. ಚಿತ್ರದಲ್ಲಿ ರಶ್ಮಿಕಾ ಪಾತ್ರ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಇಂದು ಬೆಳಗ್ಗೆ ಈ ಚಿತ್ರ ಅದ್ಧೂರಿ ಮುಹೂರ್ತ ಮಾಡಿಕೊಳ್ಳುವ ಮೂಲಕ ಚಿತ್ರೀಕರಣಕ್ಕೆ ಸಜ್ಜಾಗಿ ನಿಂತಿದೆ.

  ಸಂಭಾವನೆ ಹೆಚ್ಚಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ

  ಆರ್ಮಿ ಅಧಿಕಾರಿಯಾಗಿ ಮಹೇಶ್ ಬಾಬು

  ಆರ್ಮಿ ಅಧಿಕಾರಿಯಾಗಿ ಮಹೇಶ್ ಬಾಬು

  'ಸರಿಲೆರು ನೀಕೆವ್ವರು' ಚಿತ್ರದಲ್ಲಿ ಮಹೇಶ್ ಬಾಬು ಆರ್ಮಿ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಹೇಶ್ ಬಾಬು ಅಭಿನಯದ 25ನೇ ಸಿನಿಮಾ 'ಮಹರ್ಷಿ' ಇತ್ತೀಚಿಗಷ್ಟೆ ರಿಲೀಸ್ ಆಗಿ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. 'ಮಹರ್ಷಿ'ಯ ಸಂತಸದ ಅಲೆಯಲ್ಲಿ ತೆಲುತ್ತಿರುವ ಮಹೇಶ್ 26ನೇ ಸಿನಿಮಾ ಅನೌನ್ಸ್ ಮಾಡಿ ಮುಹೂರ್ತ ಕೂಡ ಮಾಡಿಕೊಂಡಿದ್ದಾರೆ. 26ನೇ ಸಿನಿಮಾದ ಬಗ್ಗೆ ಇದ್ದ ಕುತೂಹಲಕ್ಕು ತೆರೆಬಿದ್ದಿದೆ.

  ಅನಿಲ್ ರವಿ ಪುಡಿ ನಿರ್ದೇಶನ

  ಅನಿಲ್ ರವಿ ಪುಡಿ ನಿರ್ದೇಶನ

  ಮಹೇಶ್ ಬಾಬು ಮತ್ತು ರಶ್ಮಿಕಾ ಮತ್ತು ಹೊಸ ಚಿತ್ರಕ್ಕೆ ಅನಿಲ್ ರವಿ ಪುಡಿ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಎಫ್-2 ರಾಜ ದಿ ಗ್ರೇಟ್ ಪಟಾಸ್ ಸಿನಿಮಾಗಳನ್ನು ಮಾಡಿರುವ ಅನಿಲ್ ರವಿ ಪುಡಿ ಈಗ ಮಹೇಶ್ ಬಾಬು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

  ರಶ್ಮಿಕಾ ಅಭಿನಯದ 'ಡಿಯರ್ ಕಾಮ್ರೇಡ್' ಚಿತ್ರದ ಎರಡನೆ ಹಾಡು ರಿಲೀಸ್

  ಸಂತಸ ವ್ಯಕ್ತಪಡಿಸಿದ ರಶ್ಮಿಕಾ

  ಮೊದಲ ಬಾರಿಗೆ ಟಾಲಿವುಡ್ ನ ಸ್ಟಾರ್ ನಟನ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. "ನನಗೆ ಗೊತ್ತು ನೀವೆಲ್ಲರು ಈ ಬಗ್ಗೆ ಕೇಳುತ್ತಿದ್ದೀರಿ. ನಾನು ಈಗ ಈ ಸುಂದರ ತಂಡದ ಒಂದು ಭಾಗವಾಗಿದ್ದೀನಿ. ಮಹೇಶ್ ಬಾಬು ಜೊತೆ ಕೆಲಸ ಮಾಡಲು ಉತ್ಸುಕಳಾಗಿದ್ದೀನಿ" ಎಂದು ಹೇಳಿಕೊಂಡಿದ್ದಾರೆ.

  2020 'ಸರಿಲೆರು ನೀಕೆವ್ವರು' ರಿಲೀಸ್

  ಮಹೇಶ್ ಬಾಬು ಮತ್ತು ರಶ್ಮಿಕಾ ಅಭಿನಯದ ಹೊಸ ಸಿನಿಮಾ ಮುಂದಿನ ವರ್ಷ ತೆರೆಗೆ ಬರುತ್ತಿದೆ. 2020 ಸಂಕ್ರಾತಿ ಹಬ್ಬಕ್ಕೆ ಮಹೇಶ್ ಬಾಬು ಅಭಿಮಾನಿಗಳಿಗೆ ಡಬಲ್ ಧಮಾಕ ಆಗಲಿದೆ. ಈಗಾಗಲೆ ಭಾರಿ ಕುತೂಹಲ ಮೂಡಿಸಿರುವ ಸರಿಲೆರು ನೀಕೆವ್ವರು ಸಿನಿಮಾ ಸಧ್ಯದಲ್ಲೇ ಚಿತ್ರೀಕರಣಕ್ಕೆ ಹೊರಡಲಿದೆ.

  English summary
  Kannada actress Rashmika mandanna is playing lead roal opposite Tollywood prince Mahesh Babu. Sarileru Neekevvaru is Mahesh Babu 26th film, This movie is directed by Anil Ravipudi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X