ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ರಶ್ಮಿಕಾ ಮಂದಣ್ಣ

By Naveen

ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ರಕ್ಷಿತ್ ಶೆಟ್ಟಿ ನಡುವೆ ಬ್ರೇಕ್ ಅಪ್ ಸುದ್ದಿ ನಿನ್ನೆ ತಾನೇ ಕೇಳಿ ಬಂದಿತ್ತು. ರಶ್ಮಿಕಾ ಅವರ ಕುಟುಂಬದ ಮೂಲಗಳೆ ಈ ವಿಷಯವನ್ನು ಸ್ಪಷ್ಟ ಪಡಿಸಿತ್ತು. ಈ ಘಟನೆಯ ಬೆನ್ನಲ್ಲೆ ರಶ್ಮಿಕಾ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ.

ನಿನ್ನೆ (ಭಾನುವಾರ) ತುಮಕೂರಿನ ಸಿದ್ಧಗಂಗಾ ಮಠಕ್ಕೆ ಆಗಮಿಸಿದ್ದ ರಶ್ಮಿಕಾ ಶ್ರೀ ಶಿವಕುಮಾರ ಸ್ವಾಮಿಜಿ ಅವರ ದರ್ಶನ ಮಾಡಿ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ರಶ್ಮಿಕಾ ಅವರ ತಾಯಿ ಕೂಡ ಅವರ ಜೊತೆಗೆ ಇದ್ದರು. ಮಠಕ್ಕೆ ಬಂದ ನಟಿಯನ್ನು ಕಂಡು ಭಕ್ತರು ಸಹ ಅವರ ಜೊತೆಗೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.

kannada actress rashmika mandanna visit to sri siddaganga mutt

ಅಂದಹಾಗೆ, ಇನ್ನೊಂದು ಕಡೆ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಬ್ರೇಕ್ ಅಪ್ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡಿದೆ. ಇಬ್ಬರ ಕುಟುಂಬದ ನಡುವೆ ಹೊಂದಾಣಿಕೆ ತೊಂದರೆಯಾಗಿದ್ದು, ಚರ್ಚೆ ನಡೆಸಿ ಒಂದು ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆಯಂತೆ.

kannada actress rashmika mandanna visit to sri siddaganga mutt

ಸದ್ಯ ವೈಯಕ್ತಿಕ ಜೀವನಕ್ಕಿಂತ ಸಿನಿಮಾಗಳಲ್ಲಿ ಹೆಚ್ಚು ಗಮನ ನೀಡಲು ನಿರ್ಧಾರ ಮಾಡಿರುವ ರಶ್ಮಿಕಾ ಮಂದಣ್ಣ ಅದಕ್ಕೂ ಮುಂಚೆ ಸಿದ್ಧಗಂಗಾ ಮಠಕ್ಕೆ ಬಂದು ಸ್ವಾಮಿಜಿಗಳ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ.

More from Filmibeat

English summary
Kannada actress Rashmika Mandanna visit to Sri Siddaganga Mutt, Tumakuru. Yesterday (September 9th).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X