'ಗೀತಾ ಗೋವಿಂದಂ' ಬಳಿಕ ದೊಡ್ಡ ಸ್ಟಾರ್ ಚಿತ್ರದಲ್ಲಿ ರಶ್ಮಿಕಾ

By Pavithra

ರಶ್ಮಿಕಾ ಮಂದಣ್ಣ ಸದ್ಯ ಸ್ಯಾಂಡಲ್ ವುಡ್ ಗಿಂತಲೂ ಟಲಿವುಡ್ ನಲ್ಲಿಯೇ ಪ್ರಖ್ಯಾತಿ ಗಳಿಸಿರುವ ನಟಿ. ಕನ್ನಡದ ಒಂದು ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದರೇ ತೆಲುಗಿನಲ್ಲಿ ಮೂರು ಚಿತ್ರದಲ್ಲಿ ಕರ್ನಾಟಕದ ಕ್ರಶ್ ಆಕ್ಟ್ ಮಾಡುತ್ತಿದ್ದಾರೆ.

ಅದರ ಜೊತೆಯಲ್ಲಿ ರಶ್ಮಿಕಾ ಕಾಲಿವುಡ್ ಅಂಗಳಕ್ಕೂ ಕಾಲಿಡುತ್ತಿದ್ದಾರೆ. ಇನ್ನು ರಶ್ಮಿಕಾ ಅಭಿನಯದ 'ಗೀತಾ ಗೋವಿಂದಂ' ಸಿನಿಮಾ ನೂರು ಕೋಟಿ ಕ್ಲಬ್ ಸೇರಿದ ನಂತರ ಸಾನ್ವಿ ಅದೃಷ್ಟ ಮತ್ತಷ್ಟು ಕ್ಲಿಕ್ ಆಗಿದೆ.

ಕನ್ನಡದ ರೀತಿಯಲ್ಲೇ ಟಾಲಿವುಡ್ ಅಂಗಳದಲ್ಲಿಯೂ ರಶ್ಮಿಕಾಗೆ ಬೇಡಿಕೆ ಹೆಚ್ಚಾಗಿದೆ. 'ಗೀತಾ ಗೋವಿಂದಂ' ಸಿನಿಮಾದ ಸಕ್ಸಸ್ ಖುಷಿಯಲ್ಲಿರುವ ರಶ್ಮಿಕಾ ಟಾಲಿವುಡ್ ನ ಬಿಗ್ ಸ್ಟಾರ್ ಜೊತೆ ಅಭಿನಯ ಮಾಡುತ್ತಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಹಾಗಾದರೆ ರಶ್ಮಿಕಾ ಅಭಿನಯದ ಮುಂದಿನ ತೆಲುಗು ಸಿನಿಮಾ ಯಾವುದು? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

ಟಾಲಿವುಡ್ ಸ್ಟಾರ್ ಜೊತೆ ಕರ್ನಾಟಕ ಕ್ರಶ್

ಟಾಲಿವುಡ್ ಸ್ಟಾರ್ ಜೊತೆ ಕರ್ನಾಟಕ ಕ್ರಶ್

ಕರ್ನಾಟಕದ ಕ್ರಶ್ ಅಂತಾನೇ ಅಭಿಮಾನಿಗಳಿಂದ ಕರೆಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್ ನ ಬಿಗ್ ಸ್ಟಾರ್ ಜೊತೆ ಅಭಿನಯ ಮಾಡಲಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಜೋರಾಗಿದೆ.

ಜ್ಯೂನಿಯರ್ ಎನ್ ಟಿ ಆರ್ ಚಿತ್ರದಲ್ಲಿ ರಶ್ಮಿಕಾ

ಜ್ಯೂನಿಯರ್ ಎನ್ ಟಿ ಆರ್ ಚಿತ್ರದಲ್ಲಿ ರಶ್ಮಿಕಾ

ಟಾಲಿವುಡ್ ಸ್ಟಾರ್ ಜ್ಯೂನಿಯರ್ ಎನ್ ಟಿ ಆರ್ ಅಭಿನಯದ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ಅಭಿನಯ ಮಾಡುತ್ತಾರಂತೆ. ಈಗಾಗಲೇ ಸಿನಿಮಾ ನಿರ್ಮಾಪಕರು ಒಂದು ಸುತ್ತಿನ ಮಾತುಕಥೆ ನಡೆಸಿದ್ದು ಫೈನಲ್ ಆಗುವುದಷ್ಟೇ ಬಾಕಿ ಇದ್ಯಂತೆ.

ಬಿಗ್ ಸ್ಟಾರ್ ಗಳ ಜೊತೆ ಅಭಿನಯ

ಬಿಗ್ ಸ್ಟಾರ್ ಗಳ ಜೊತೆ ಅಭಿನಯ

ವಿಜಯ ದೇವರಕೊಂಡ ಸೇರಿದಂತೆ. ಅಕ್ಕಿನೇನಿ ನಾಗಾರ್ಜನ್ ಹಾಗೂ ನಾನಿ ಜೊತೆ 'ದೇವದಾಸ್' ಸಿನಿಮಾದಲ್ಲಿ ರಶ್ಮಿಕಾ ಅಭಿನಯ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮಹೇಶ್ ಬಾಬು, ಅಲ್ಲು ಅರ್ಜುನ್ ಚಿತ್ರದಲ್ಲಿಯೂ ನಾಯಕಿ ಆಗುವ ಸಾಧ್ಯತೆಗಳಿವೆ.

ಮತ್ತೆ ಒಂದಾಯ್ತು 'ಗೀತಾ ಗೊವಿಂದಂ' ಜೋಡಿ

ಮತ್ತೆ ಒಂದಾಯ್ತು 'ಗೀತಾ ಗೊವಿಂದಂ' ಜೋಡಿ

ವಿಜಯ ದೇವರಕೊಂಡ ಜೊತೆ 'ಗೀತಾ ಗೋವಿಂದಂ' ಸಿನಿಮಾದಲ್ಲಿ ಅಭಿನಯ ಮಾಡಿದ ನಂತರ `ಡಿಯರ್ ಕಾಮ್ರೇಡ್' ಚಿತ್ರವನ್ನು ಒಪ್ಪಿಕೊಂಡಿದ್ದಾರೆ ರಶ್ಮಿಕಾ. ತಮಿಳು ಚಿತ್ರರಂಗದಿಂದಲೂ ರಶ್ಮಿಕಾ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆಯಂತೆ.

More from Filmibeat

English summary
Kannada actress rashmika mandanna will be acting as the heroine in the film Junior N T R movie. Rashmika starrer Geetha Govindam rakes in Rs 100 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X