ಕನ್ನಡ ನಟಿ ರೂಪಿಕಾ ಮದುವೆ ನಿಶ್ಚಯ; ವರ ಯಾರು? ಗಟ್ಟಿಮೇಳ ಯಾವಾಗ?

ಕನ್ನಡ ಚಿತ್ರರಂಗದಲ್ಲಿ ಶುಭ ಸಮಾರಂಭಗಳ ಪರ್ವ ಶುರುವಾಗುತ್ತಿದೆ. ಇತ್ತೀಚೆಗೆ ನಟಿ ಶರ್ಮಿಳಾ ಮಾಂಡ್ರೆ ಮದುವೆ ಸುದ್ದಿ ಹೊರಬಿದ್ದಿತ್ತು. ಇದೀಗ ಮತ್ತೊಬ್ಬ ನಟಿ ರೂಪಿಕಾ ಹಸೆಮಣೆ ಏರಲು ಸಜ್ಜಾಗುತ್ತಿರುವ ಮಾಹಿತಿ ಲಭ್ಯವಾಗಿದೆ. ಕನ್ನಡ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ರೂಪಿಕಾ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

ಕೆನಡಾದ ಇನ್ವೆಸ್ಕೋ ಸಂಸ್ಥೆಯಲ್ಲಿ ಟ್ಯಾಕ್ಸ್ ಸ್ಪೆಷಲಿಸ್ಟ್ ಅಂಕಿತ್ ಎಂಬುವವರ ಜೊತೆ ನಟಿ ರೂಪಿಕಾ ಮದುವೆ ನಡೆಯಲಿದೆ. ಮೂಲತಃ ಬೆಂಗಳೂರಿನವರಾದ ಅಂಕಿತ್ ಕಳೆದ 5 ವರ್ಷಗಳಿಂದ ಕೆನಡಾದಲ್ಲಿ ಸೆಟ್ಲ್ ಆಗಿದ್ದಾರೆ. ಅವರು ಮ್ಯೂಸಿಕಲ್ ಕಂಪೋಸರ್ ಕೂಡ ಆಗಿದ್ದು ಇಂಡಸ್ಟ್ರಿ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಹಿರಿಯರು, ಆಪ್ತರ ಸಮ್ಮುಖದಲ್ಲಿ ಈಗಾಗಲೇ ರೂಪಿಕಾ ಹಾಗೂ ಅಂಕಿತ್ ನಿಶ್ಚಿತಾರ್ಥ ನೆರವೇರಿದೆ. ಆಗಸ್ಟ್ ತಿಂಗಳಲ್ಲಿ ಮದುವೆಗೆ ಸಿದ್ಧತೆ ನಡೀತಿದೆ. ಬೆಂಗಳೂರಿನಲ್ಲೇ ಅದ್ಧೂರಿಯಾಗಿ ಕಲ್ಯಾಣೋತ್ಸವ ನಡೆಯಲಿದೆ.

Kannada Actress Roopika Set to Marry Canada-Based Finance Professional Ankith in August

'ಬೆಳ್ಳಿಚುಕ್ಕಿ', 'ಬದುಕು', 'ಅವಳ ಮನೆ', 'ತ್ರಿವೇಣಿ ಸಂಗಮ' ರೀತಿಯ ಕಿರುತೆರೆ ಧಾರಾವಾಹಿಗಳಲ್ಲಿ ಬಾಲನಟಿಯಾಗಿ ರೂಪಿಕಾ ಬಣ್ಣ ಹಚ್ಚಿದ್ದರು. 'ಚೆಲುವಿನ ಚಿಲಿಪಿಲಿ' ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದರು. 'ತೀರ್ಥರೂಪ', 'ಥರ್ಡ್‌ಕ್ಲಾಸ್', 'ರುದ್ರಾಕ್ಷಿಪುರ', 'ಮಾಯದಂಥ ಮಳೆ', 'ಬೀರ', 'ಮಂಜರಿ', 'ನವರಂಗಿ', 'ಡೈಮಂಡ್ ಕ್ರಾಸ್' ಹೀಗೆ ಹಲವು ಸಿನಿಮಾಗಳಲ್ಲಿ ರೂಪಿಕಾ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೇ 'ಚಿಲ್ ಬ್ರೋ' ಎಂಬ ಒಂದು ತೆಲುಗು ಚಿತ್ರದಲ್ಲಿ ಕೂಡ ಮಿಂಚಿದ್ದಾರೆ.

ಸದ್ಯ ರೂಪಿಕಾ ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಸಿಂಚನಾ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಮ್ಮ ನಟನೆ ಮೂಲಕ ಕಿರುತೆರೆ ವೀಕ್ಷಕರ ಮನಗೆದ್ದಿದ್ದಾರೆ. ಚಿಕ್ಕಂದಿನಿಂದ ರೂಪಿಕಾ ಭರತನಾಟ್ಯ ಕಲಿತಿದ್ದರು. ಹಾಗಾಗಿ ಸಾಕಷ್ಟು ಕಾರ್ಯಕ್ರಮಗಳಲ್ಲಿ ವೇದಿಕೆ ಏರಿ ಹೆಜ್ಜೆ ಹಾಕಿದ್ದಾರೆ. ತಾತ, ಅಪ್ಪ, ಅಮ್ಮ ಎಲ್ಲರೂ ಕಲೆಯ ಹಿನ್ನೆಲೆ ಉಳ್ಳವರು. ಹಾಗಾಗಿ ಚಿಕ್ಕಂದಿನಿಂದ ರೂಪಿಕಾಗೆ ಪ್ರೋತ್ಸಾಹ ಸಿಗುತ್ತಿತ್ತು.

Kannada Actress Roopika Set to Marry Canada-Based Finance Professional Ankith in August

ಬೆನಕ, ಸೂರ್ಯ, ಪ್ರಭಾತ್ ನಾಟಕ ತಂಡಗಳಲ್ಲಿ ರೂಪಿಕಾ ನಟಿಸಿದ್ದಾರೆ. ಮಾಸ್ಟರ್ ಹಿರಣ್ಣಯ್ಯ ಅವರ ನಾಟಕಗಳಲ್ಲಿ ಕೂಡ ಬಣ್ಣ ಹಚ್ಚಿದ್ದರು. ಬಾಲನಟಿಯಾಗಿ 20 ಧಾರಾವಾಹಿಗಳಲ್ಲಿ ಆಕೆ ಕಾಣಿಸಿಕೊಂಡಿದ್ದರು. 'ಜಾಲಿಡೇಸ್' ಹಾಗೂ 'ಕೃಷ್ಣ' ಚಿತ್ರಗಳಲ್ಲಿ ಸಹ ಬಾಲನಟಿಯಾಗಿಯೇ ಮಿಂಚಿದ್ದರು. 9ನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಎಸ್. ನಾರಾಯಣ್ ನಿರ್ದೇಶನದ 'ಚೆಲುವಿನ ಚಿಲಿಪಿಲಿ' ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು.

ಕಲರ್ಸ್ ಕನ್ನಡ ವಾಹಿನಿಯ 'ದೊರೆಸಾನಿ' ಧಾರಾವಾಹಿಯಲ್ಲಿ ನಾಯಕಿ ದೀಪಿಕಾ ಪಾತ್ರದಲ್ಲಿ ರೂಪಿಕಾ ನಟಿಸಿದ್ದರು. ಬಹಳ ವರ್ಷಗಳ ಬಳಿಕ 2022ರಲ್ಲಿ ಕಿರುತೆರೆಗೆ ಮರಳಿದ್ದರು. ಕಾರಣಾಂತರಗಳಿಂದ ಈ ಧಾರಾವಾಹಿ ಬಹಳ ಬೇಗ ಮುಕ್ತಾಯವಾಗಿತ್ತು. ಸದ್ಯ 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಖಡಕ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿಂಚನಾ ಪಾತ್ರದಲ್ಲಿ ದಿವ್ಯಶ್ರೀ ಕಾಣಿಸಿಕೊಂಡಿದ್ದರು. ಅವರು ಧಾರಾವಾಹಿಯಿಂದ ಹೊರ ಬಂದಾಗ ರೂಪಿಕಾ ಆ ಜಾಗ ತುಂಬಿದ್ದರು.

ಗೆಜ್ಜೆ ನೃತ್ಯ ಸ್ಟುಡಿಯೋ ಎಂಬ ಡ್ಯಾನ್ಸ್ ಕ್ಲಾಸ್ ಕೂಡ ರೂಪಿಕಾ ನಡೆಸುತ್ತಿದ್ದಾರೆ. ಸಾಕಷ್ಟು ಜನರಿಗೆ ಡ್ಯಾನ್ಸ್ ಹೇಳಿಕೊಡುತ್ತಿದ್ದಾರೆ. ಇದೀಗ ಜೀವನದ ಮಹತ್ವದ ಘಟ್ಟದಲ್ಲಿದ್ದಾರೆ. ಹೊಸ ಬಾಳಿಗೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಮದುವೆ ಬಳಿಕ ಕೆನಡಾದಲ್ಲೇ ಸೆಟ್ಲ್ ಆಗುವ ಸಾಧ್ಯತೆಯಿದೆ.

Read more about: actress sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X