ಮೊಸರನ್ನ ತಿನ್ನುತ್ತಾ ಕ್ರಿಸ್ಮಸ್ ಶುಭಾಶಯ ಹೇಳಿದ ರುಕ್ಮಿಣಿ ವಸಂತ್: ನೆಟ್ಟಿಗರು ಗರಂ ಆಗಿದ್ದೇಕೆ?

By ಫಿಲ್ಮಿಬೀಟ್ ಡೆಸ್ಕ್

ವಿಶ್ವದಾದ್ಯಂತ ಕ್ರಿಸ್ಮಸ್ ದಿನವನ್ನು ಸಂಭ್ರಮದಿಂದ ಆಚರಿಸಲಾಗಿದೆ. ರಾಜ್ಯದಲ್ಲಿಯೂ ಕ್ರಿಸ್ಮಸ್ ಕಳೆಗಟ್ಟಿದ್ದು, ನಟ ನಟಿಯರು ತಮ್ಮ ಮನೆಗಳಲ್ಲಿ ಹಬ್ಬ ಆಚರಿಸಿ ಅದರ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಖ್ಯಾತಿಯ ನಟಿ ರುಕ್ಮಿಣಿ ವಸಂತ್ ಕೂಡ ಕ್ರಿಸ್ಮಸ್ ಟ್ರೀ ಬಳಿ ಕುಳಿತ ಚಂದದ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಕೈಯಲ್ಲಿ ಮೊಸರನ್ನದ ಪ್ಲೇಟ್ ಹಿಡಿದು, ಕ್ರಿಸ್ಮಸ್ ಗಿಡವನ್ನು ನೋಡುತ್ತಾ ರುಕ್ಮಿಣಿ ವಸಂತ್ ಹಬ್ಬದ ಶುಭಾಶಯ ಹೇಳಿದ್ದಾರೆ. ಹಸಿರು ಬಣ್ಣದ ಡ್ರೆಸ್ ತೊಟ್ಟ ಬೆಡಗಿಗೆ ಸಾಂತಾ ಕ್ಲಾತ್ ಕ್ಯಾಪ್ ಸಖತ್ ಮ್ಯಾಚ್ ಆಗಿದೆ. ಇದಕ್ಕೆ 'ನನ್ನಿಂದ ಮತ್ತು ನನ್ನ ತಟ್ಟೆಯ ಮೊಸರನ್ನದಿಂದ ಕ್ರಿಸ್ಮಸ್ ಶುಭಾಶಯಗಳು" ಎಂದು ಶೀರ್ಷಿಕೆ ನೀಡಿದ್ದಾರೆ.

Kannada Actress Rukmini Vasanth Christmas Celebration Went viral, Fans upset

ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರುಕ್ಮಿಣಿ ವಸಂತ್

'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ಮೊದಲ ಭಾಗ ಬಿಡುಗಡೆ ಆದಾಗಿನಿಂದ ಚೆಲುವೆ ರುಕ್ಮಿಣಿ ವಸಂತ್, ಪುಟ್ಟಿಯಾಗಿ ಸದ್ಯ ಕನ್ನಡ ಚಿತ್ರರಂಗದಲ್ಲಿ ಸಕತ್ ಫೇಮಸ್ ಆಗಿದ್ದಾರೆ. ಇದಾದ ನಂತರ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ ಬಿಡುಗಡೆಯಾಗಿ ಅವರಿಗೆ ಉತ್ತಮ ಹೆಸರು ತಂದುಕೊಟ್ಟಿದೆ. ಗೋಲ್ಡನ್​ ಸ್ಟಾರ್​ ಗಣೇಶ್ ಮತ್ತು ರಂಗಾಯಣ ರಘು ನಟನೆಯ 'ಬಾನ ದಾರಿಯಲಿ' ಚಿತ್ರದಲ್ಲೂ ಜೊತೆಯಾಗಿದ್ದಾರೆ.

ಈಗ ನಟಿ ರುಕ್ಮಿಣಿ ವಸಂತ್ ಕ್ರಿಸ್ಮಸ್ ಫೋಟೋಗಳನ್ನು ಹಂಚಿಕೊಂಡಿದ್ದು, ಮಿಶ್ರ ಪ್ರತಿಕ್ರಿಯೆ ಬರುತ್ತಿವೆ. ಹಲವರು ಫೋಟೋಗಳನ್ನು ಮೆಚ್ಚಿಕೊಂಡೆ ಮತ್ತೆ ಕೆಲವರು ಅವರಿಗೆ ಬುದ್ದಿವಾದ ಹೇಳಿದ್ದಾರೆ. ಕ್ರಿಸ್ಮಸ್ ಶುಭಾಶಯ ಹೇಳಿರುವ ಅವರಿಗೆ, ಜೈ ಶ್ರೀ ರಾಮ್, ಹರೇ ಕೃಷ್ಣ, ಹ್ಯಾಪಿ ಕ್ರಿಸ್‌ಮಸ್‌ ಪುಟ್ಟಿ ಎಂಬ ಕಾಮೆಂಟ್‌ಗಳು ಬರುತ್ತಿವೆ.

ನಿಮ್ಮನ್ನು ಈ ರೀತಿ ಜೋಕರ್ ಹಾಗೆ ನೋಡಲು ಆಗುತ್ತಿಲ್ಲ!

"ದೀಪಾವಳಿ ಹಬ್ಬಕ್ಕೆ ದೀಪದ ಜೊತೆ ಪೋಸ್ಟ್ ಹಾಕದವರು ಇಂದು ಕ್ರಿಸ್ಮಸ್‌ಗೆ ಕ್ಯಾಪ್ ಧರಿಸಿ ಪೋಸ್ಟ್ ಹಾಕಿದ್ದೀರಾ ನಿಮ್ಮನ್ನು ಈ ರೀತಿ ಜೋಕರ್ ಹಾಗೆ ನೋಡಲು ಆಗುತ್ತಿಲ್ಲ. ನೀವು ಯಾವತ್ತಿಗೂ ರಾಣಿಯಾಗೆ ಇರಬೇಕು. ಮೊದಲು ನಮ್ಮ ಸನಾತನ ಧರ್ಮಕ್ಕೆ ಆದ್ಯತೆ ನೀಡಿ. ಗೀತಾ ಜಯಂತಿಯ ಶುಭಾಶಯಗಳು" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

"ನಿಮ್ಮಂತೋರ್ನ ಕನ್ನಡಿಗರು ಅಂತ ಹೇಳಕೊಳ್ಳೋಕೆ ನಮಗೆ ಅಸಹ್ಯ. ನಿಮ್ಮಂತೋರು ಯಾಕಾದ್ರೂ ನಮ್ಮ ಕರ್ನಾಟಕದಲ್ಲಿ ಇರ್ತಿರೋ ಬೆಳಿತಿರೋ ಅಂತ ಒಂದು ಗೊತ್ತಿಲ್ಲ. ಕ್ರಿಸ್ಮಸ್ ಗೆ ಫೋಟೋ ಹಾಕಿ ಪೋಸ್ ಕೊಡಕ್ಕಾಗುತ್ತೆ. ದೀಪಾವಳಿ ದಿನ ದೀಪ ಇಡ್ಕೊಂಡು ಬೆಳಕಾಗಲ್ಲ ನಿಮ್ಮಂತ ಹೆಣ್ಣು ಮಕ್ಕಳಿಗೆ ಹೊಡಿಬೇಕು ಪಟಪಟ ಅಂತ ಏನಾರ ತಗೊಂಡ್ ಹಾಕ್ಬೇಕು ಅಂತ ಅನಿಸ್ತಿದೆ. ಫಸ್ಟು ನಮ್ಮ ಧರ್ಮ ಮೊದಲು ಆಮೇಲೆ ಬೇರೆ ಅವರದು.." ಎಂದು ರುಕ್ಮಿಣಿ ಅವರನ್ನು ದೂರಲಾಗಿದೆ. ಹಲವು ಮಂದಿ ಅವರನ್ನು ಅನ್‌ಫಾಲೋ ಮಾಡುವುದಾಗಿಯೂ ಹೇಳಿದ್ದಾರೆ.

Kannada Actress Rukmini Vasanth Christmas Celebration Went viral, Fans upset

ಇನ್ನು, 'ಬೀರಬಲ್​ ಟ್ರಯಾಲಜಿ' ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ ರುಕ್ಮಿಣಿ ವಸಂತ್, ಸದ್ಯ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಾ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿಯಾಗಿದ್ದಾರೆ. 'ಭೈರತಿ ರಣಗಲ್' ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಫ್ತಿ ಚಿತ್ರ ಖ್ಯಾತಿಯ ನರ್ತನ್ ನಿರ್ದೇಶನದ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣನಿಗೆ ಜೋಡಿ ಆಗಿದ್ದಾರೆ. ಜೊತೆಗೆ ತಮಿಳಿನ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ.

More from Filmibeat

English summary
Rukmini Vasanth christmas celebration photos went viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X