»   » ಮದುವೆ ಬಗ್ಗೆ ಫೇಸ್ ಬುಕ್ಕಿನಲ್ಲಿ ರೊಚ್ಚಿಗೆದ್ದ ಸಂಯುಕ್ತಾ ಹೊರನಾಡು

ಮದುವೆ ಬಗ್ಗೆ ಫೇಸ್ ಬುಕ್ಕಿನಲ್ಲಿ ರೊಚ್ಚಿಗೆದ್ದ ಸಂಯುಕ್ತಾ ಹೊರನಾಡು

Posted By:
Subscribe to Filmibeat Kannada

ಪ್ರಕಾಶ್ ರೈ ಅವರ 'ಒಗ್ಗರಣೆ' ಚಿತ್ರದಿಂದ ಬೆಳಕಿಗೆ ಬಂದ ನಟಿ ಸಂಯುಕ್ತಾ ಹೊರನಾಡು ಅವರು ಸದ್ದಿಲ್ಲದೇ ಮದುವೆಯಾಗಿದ್ದಾರೆ ಎಂದು ಎಲ್ಲೆಡೆ ಗಾಸಿಪ್ ಗಳು ಹರಿದಾಡಿತ್ತು.

ಆದರೆ ಇದಕ್ಕೆಲ್ಲಾ ನಟಿ ಸಂಯುಕ್ತಾ ಅವರು ಫೇಸ್ ಬುಕ್ಕಿನಲ್ಲಿ ಉತ್ತರಿಸುವ ಮೂಲಕ ಎಲ್ಲಾ ಗಾಳಿಸುದ್ದಿಗಳಿಗೂ ಪರದೆ ಎಳೆದಿದ್ದಾರೆ.

Kannada Actress Samyukta Horanadu new look in Bride

ಇತ್ತೀಚೆಗೆ ನಟಿ ಸಂಯುಕ್ತ ಅವರ ಮದುಮಗಳ ಫೋಟೋ ಮತ್ತು ವರ ತಾಳಿ ಕಟ್ಟುತ್ತಿರುವ ಮಾದರಿಯ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದನ್ನು ಕಂಡು ನಟಿ ಸಂಯುಕ್ತಾ ಅವರು ಸೀಕ್ರೆಟ್ ಆಗಿ ಮದುವೆ ಆಗಿದ್ದಾರೆ ಎಂದು ಯಾವುದೋ ಚಾನಲ್ ಗಾಳಿಸುದ್ದಿ ಹಬ್ಬಿಸಿತ್ತು.

Kannada Actress Samyukta Horanadu new look in Bride

ಇದಕ್ಕೆ ಸಂಯುಕ್ತಾ ಅವರು 'ನಾನೇನು ಮದ್ವೆ ಆಗಿಲ್ಲ. ಅಷ್ಟೇ ಅಲ್ಲ ಇನ್ನು 100 ವರ್ಷ ಮದ್ವೆ ಆಗಲ್ಲ. ಈ ಚಿತ್ರಗಳು ಇತ್ತೀಚೆಗೆ ನಡೆದ ಮಲಬಾರ್ ಗೋಲ್ಡ್ ಚಿನ್ನಾಭರಣ ಮಳಿಗೆಯ 'ಬ್ರೈಡ್ಸ್ ಆಫ್ ಇಂಡಿಯಾ' ಜಾಹೀರಾತಿನ ಶೂಟಿಂಗ್ ಗೆ ಈ ಕಾಸ್ಟ್ಯೂಮ್ ಹಾಕಿದ್ದಾಗಿ' ನಟಿ ಫೇಸ್‌ ಬುಕ್ಕಿನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Hellloooo, hiiiiii, I AM NOT MARRIED!!!! I posted this picture yesterday and I just found out from a news channel that...

Posted by Samyukta Hornad on Friday, December 11, 2015

ಅದೇನೇ ಇರಲಿ ಈ ಮದು ಮಗಳ ಗೆಟಪ್ ನಲ್ಲೂ ನಮ್ಮ ಚೆಂದುಳ್ಳಿ ಚೆಲುವೆ ಸಂಯುಕ್ತಾ ಹೊರನಾಡು ಅವರು ಸಖತ್ ಆಗಿ ಮಿಂಚಿದ್ದು, ಇನ್ನು ನಿಜವಾಗ್ಲೂ ಮದುವೆ ಆಗುವಾಗಿನ ಸಂದರ್ಭದಲ್ಲಿ ಅದು ಹೇಗೆ ಕಾಣಬಹುದು ನೀವೇ ಊಹಿಸಿ.

English summary
Kannada Actress Samyukta Horanadu new look in Bride

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada