ಮತ್ತೆ ಬೋಲ್ಡ್ ಅವತಾರದಲ್ಲಿ ವೈರಲ್ ಆದ ಕಿರಿಕ್ ಪಾರ್ಟಿ ಹುಡುಗಿ ಸಂಯುಕ್ತ ಹೆಗ್ಡೆ!

By ಫಿಲ್ಮಿಬೀಟ್ ಡೆಸ್ಕ್

ಸಂಯುಕ್ತ ಹೆಗ್ಡೆ ಸ್ಯಾಂಡಲ್‌ವುಡ್‌ನ ಬೋಲ್ಡ್ & ಬ್ಯೂಟಿಫುಲ್ ಬೆಡಗಿ. ಮೊದಲ ಸಿನಿಮಾ ಕಿರಿಕ್ ಪಾರ್ಟಿ ಮೂಲಕ ಸಕ್ಸಸ್ ಕಂಡಿದ್ದ ನಟಿ, ಸಿನಿಮಾಗಳಿಗಿಂತ ನೃತ್ಯದ ಕಡೆ ಒಲವು ತೋರಿದ್ದೇ ಹೆಚ್ಚು. ಮೊದಲ ಸಿನಿಮಾ ಸಕ್ಸಸ್ ಸಿಕ್ಕ ಕೆಲವೇ ಕೆಲವು ನಾಯಕಿಯಲ್ಲಿ ಕಿರಿಕ್ ಪಾರ್ಟಿ ಸಂಯುಕ್ತ ಹೆಗ್ಡೆ ಕೂಡ ಒಬ್ಬರು.

ಸಂಯುಕ್ತ ಹೆಗ್ಡೆ ಇತ್ತೀಚೆಗೆ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಇನ್ನೊಂದು ಕಡೆ ಒಮ್ಮೆ ಭಾರತದ ಯಾವುದೋ ಮೂಲೆಯಲ್ಲಿದ್ದರೆ, ಮತ್ತೊಮ್ಮೆ ವಿದೇಶದಲ್ಲಿ ಕಾಣಿಸಿಕೊಳ್ಳುತ್ತಾರೆ. ದೇಶ ವಿದೇಶದಲ್ಲಿ ತೆಗೆದ ತನ್ನದೇ ಬೋಲ್ಡ್ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಕನ್ನಡದ ನಟಿಯರು ಇಷ್ಟೊಂದು ಬೋಲ್ಡ್ ಆಗಿ ಕಂಡಿದ್ದು ಬಲು ಅಪರೂಪ. ಈಗ ಗೆಳತಿಯ ಬರ್ತ್‌ಡೇ ಪಾರ್ಟಿಯಲ್ಲಿ ಬ್ಲ್ಯಾಕ್ ಕಲರ್‌ನ ಗ್ಲಾಮರಸ್ ಡ್ರೆಸ್‌ನಲ್ಲಿ ಬೋಲ್ಡ್ ಲುಕ್ ಕೊಟ್ಟಿದ್ದಾರೆ.

Kannada Actress Samyuktha Hegde In Birthday Party Photos Goes Viral

ತುಂಡುಡುಗೆ ತೊಟ್ಟು ಕೈಯಲ್ಲಿ ಗ್ಲಾಸ್ ಹಿಡಿದ ಸಂಯುಕ್ತ

ಪಾರ್ಟಿ, ಮೋಜಿ-ಮಸ್ತಿ ಇವೆಲ್ಲವೂ ಸಿನಿಮಾ ರಂಗದಲ್ಲಿ ಕಾಮನ್. ಪ್ರತಿ ದಿನ ಯಾರದರೂ ಒಂದಲ್ಲ ಒಂದು ಪಾರ್ಟಿ ನೀಡುತ್ತಲೇ ಇರುತ್ತಾರೆ. ಸಂಜೆಯಾಗುತ್ತಿದ್ದಂತೆ ಸಿನಿಮಾ ತಾರೆಯರ ಗ್ಲಾಮರ್ ಲೋಕ ಹಾಗೇ ತೆರೆದುಕೊಳ್ಳುತ್ತೆ. ಸಿನಿಮಾ ಲೋಕದ ತಾರೆಯರು, ಸ್ನೇಹಿತರೆಲ್ಲಾ ಒಟ್ಟಾಗುತ್ತಾರೆ. ಯಾರದ್ದೋ ಬರ್ತ್‌ಡೇ ಪಾರ್ಟಿ, ಯಾರದ್ದೋ ಸಕ್ಸಸ್ ಪಾರ್ಟಿ, ಹೀಗೆ ಪಾರ್ಟಿಗೇನು ಮೋಸ ಇರಲಿಲ್ಲ. ಇಂತಹ ಪಾರ್ಟಿಯಲ್ಲಿ ಸೆಲೆಬ್ರೆಟಿಗಳು ಕಣ್ಣು ಕುಕ್ಕುವ ಗ್ಲಾಮರ್ ಡ್ರೆಸ್‌ನಲ್ಲಿ ಮಿಂಚುತ್ತಾರೆ.

ಸಂಯುಕ್ತ ಹೆಗ್ಡೆ ಕೂಡ ಗೆಳತಿಯ ಬರ್ತ್‌ಡೇ ಪಾರ್ಟಿಯಲ್ಲಿ ಸಖತ್ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಬ್ಲ್ಯಾಕ್ ಕಲರ್‌ನ ಶಾರ್ಟ್ ಡ್ರೆಸ್ ತೊಟ್ಟು, ಕೈಯಲ್ಲಿ ಗ್ಲಾಸ್ ಹಿಡಿದು, ಡಿಫ್ರೆಂಟ್ ಡಿಫ್ರೆಂಟ್ ಭಂಗಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಇವೇ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸಂಯುಕ್ತ ಹೆಗ್ಡೆ ಬೋಲ್ಡ್ ಅವತಾರಕ್ಕೆ ನೆಟ್ಟಿಗರು ಹಾಡಿ ಹೊಗಳುತ್ತಲೂ ಇದ್ದಾರೆ.

Kannada Actress Samyuktha Hegde In Birthday Party Photos Goes Viral

ಬ್ಲ್ಯೂ ಬಿಕಿಯಲ್ಲಿ ನಿದ್ದೆ ಕದ್ದಿದ್ದ ಸಂಯುಕ್ತ ಹೆಗ್ಡೆ

ಸಂಯುಕ್ತ ಹೆಗ್ಡೆ ಕೇವಲ ಪಾರ್ಟಿ ಪ್ರಿಯೆ ಅಷ್ಟೇ ಅಲ್ಲ, ಫಿಟ್ನೆಸ್, ಟ್ರಾವೆಲ್‌ ಕಡೆಗೂ ಹೆಚ್ಚು ಒಲವು ತೋರುತ್ತಾರೆ. ಹೀಗಾಗಿ ಆಗಾಗ ವಿದೇಶಿ ಪ್ರವಾಸ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಸಂಯುಕ್ತ ದುಬೈಗೆ ಹಾರಿದ್ದರು ಎನ್ನಲಾಗಿದೆ. ಈ ವೇಳೆ ದುಬೈನಲ್ಲಿ ಬಿಕಿನಿಯಲ್ಲಿ ಲುಕ್ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದರು.

ಸಂಯುಕ್ತ ಹೆಗ್ಡೆ ಬ್ಲ್ಯೂ ಬಿಕಿನಿಯಲ್ಲಿ ಪ್ರವಾಸವನ್ನು ಎಂಜಾಯ್ ಮಾಡುತ್ತಿರುವ ವಿಡಿಯೋ ಹಾಗೂ ಫೋಟೊಗಳನ್ನು ಶೇರ್ ಮಾಡಿದ್ದರು. ಆ ಫೋಟೊಗಳೂ ಕೂಡ ವೈರಲ್ ಆಗಿದ್ದವು. ಈಗ ಮತ್ತೆ ಸ್ನೇಹಿತರೊಂದಿಗೆ ಪಾರ್ಟಿ ಮೂಡಿನಲ್ಲಿದ್ದು, ಗ್ಲಾಮರ್ ಲುಕ್ ಕೊಟ್ಟು ಮಿಂಚಿದ್ದಾರೆ. ಪಾರ್ಟಿ ವೇರ್‌ನಲ್ಲಿ ಸಂಯುಕ್ತ ಹೆಗ್ಡೆ ಲುಕ್ ಕಂಡು ನೆಟ್ಟಿಗರು ಅಕ್ಷರಶ: ತಲೆ ಕೆಡಿಸಿಕೊಂಡಿದ್ದಾರೆ.

Kannada Actress Samyuktha Hegde In Birthday Party Photos Goes Viral

'ಕಿರಿಕ್ ಪಾರ್ಟಿ' ಸಂಯುಕ್ತ ಹೆಗ್ಡೆ ಪಾಲಿಗೆ ಲಕ್ಕಿ ಸಿನಿಮಾ. ಮೊದಲ ಸಿನಿಮಾನೇ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಈ ಸಿನಿಮಾ ಬಳಿಕ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರೂ, ಸಂಯುಕ್ತಾಗೆ ಸಕ್ಸಸ್ ಅನ್ನೋದು ಸಿಗಲಿಲ್ಲ. ಪರಭಾಷೆಯಲ್ಲೂ ನಟಿಸಿ ಬಂದಿದ್ದಾರೆ. ಆದರೂ, ಗೆಲುವು ಸಿಕ್ಕಿಲ್ಲ. ಆದರೂ, ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಟಿ ತನ್ನ ಇಚ್ಛೆಯಂತೆ ಬದುಕುತ್ತಿದ್ದಾರೆ. ಬೋಲ್ಡ್ ಆಗಿಯೂ, ಬ್ಯೂಟಿಫುಲ್ ಆಗಿಯೂ ಕಾಣಿಸಿಕೊಳ್ಳುತ್ತಾ ಸೌಂದರ್ಯೋಪಾಸಕರ ನಿದ್ದೆ ಕದಿಯುತ್ತಲೇ ಇದ್ದಾರೆ.

More from Filmibeat

English summary
Kannada Actress Samyuktha Hegde in Birthday Party Photos Goes Viral, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X