For Quick Alerts
  ALLOW NOTIFICATIONS  
  For Daily Alerts

  ಮತ್ತೆ ಶಾಲೆಗೆ ಹೊರಟ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ

  |

  ಸ್ಯಾಂಡಲ್ ವುಡ್ ನಟಿ ಸಂಯುಕ್ತ ಹೆಗ್ಡೆ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ಬೇರೆ ಬೇರೆ ವಿಚಾರಗಳಿಗೆ ಸುದ್ದಿಯಾಗುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಪ್ರಿಯಕರನ ಜೊತೆ ವಿದೇಶದಲ್ಲಿ ಜಾಲಿ ಮಾಡುತ್ತ ಒಂದಿಷ್ಟು ಫೋಟೋಗಳನ್ನು ಅಪ್ ಲೋಡ್ ಮಾಡುತ್ತ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರು.

  ಸಂಯುಕ್ತ ಸಿನಿಮಾ ಬಿಟ್ಟು ಊರು ಸುತ್ತುತ್ತಿದ್ದಾರಾ ಅಂತ ಎಲ್ಲರು ಅಂದುಕೊಳ್ಳುತ್ತಿರಬೇಕಾದ್ರೆ, ಸಂಯುಕ್ತ ದಿಢೀರನೆ ಶಾಲೆಗೆ ಹೊರಟಿದ್ದಾರೆ. ಶಾಲೆ ಕಡೆ ಮುಖ ಮಾಡಿರುವ ಸಂಯುಕ್ತ ನೋಡಿ ಅಚ್ಚರಿ ಪಡುತಿದ್ದಾರೆ ಚಿತ್ರಪ್ರಿಯರು. ಬಿಕಿನಿಯಲ್ಲಿ ಮಿಂಚುತ್ತ ತರಹೇವಾರಿ ಫೋಟೋಗಳನ್ನು ಶೇರ್ ಮಾಡುತ್ತಿದ್ದ ಕಿರಿಕ್ ಸುಂದರಿ, ಈಗ ಶಾಲೆಯ ಯೂನಿಫಾರ್ಮ್ ಹಾಕಿಕೊಂಡು ಶಿಸ್ತಾಗಿ ಶಾಲೆಗೆ ಹೊರಟಿದ್ದಾರೆ.

  ವಿದೇಶಿ ಯುವಕನ ಜೊತೆ ನಟಿ ಸಂಯುಕ್ತ ಹೆಗ್ಡೆ ಲವ್ವಿ ಡವ್ವಿ?ವಿದೇಶಿ ಯುವಕನ ಜೊತೆ ನಟಿ ಸಂಯುಕ್ತ ಹೆಗ್ಡೆ ಲವ್ವಿ ಡವ್ವಿ?

  ಅಂದ್ಹಾಗೆ ಸಂಯುಕ್ತ ಈ ಪರಿ ಶಿಸ್ತಿನಿಂದ ಶಾಲೆಗೆ ಹೊರಟಿದ್ದು ಕಾಲಿವುಡ್ ನ ಕೋಮಲಿ ಚಿತ್ರಕ್ಕಾಗಿ. ತಮಿಳು ಚಿತ್ರರಂಗದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರುವ ಸಂಯುಕ್ತ ಕಾಲಿವುಡ್ ನಟ ಜಯಂ ರವಿ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರದಿಂದ ಸದ್ಸಯ ಸಂಯುಕ್ತ ಲುಕ್ ರಿವೀಲ್ ಆಗಿದೆ. ತಮಿಳು ಚಿತ್ರದಲ್ಲಿ ಸಂಯುಕ್ತ ಹೇಗೆ ಕಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲಕ್ಕೆ ಈ ಫೋಟೋ ತೆರೆ ಎಳೆದಿದೆ.

  ಸ್ಯಾಂಡಲ್ ವುಡ್ ಬಿಟ್ಟು ತಮಿಳು ಮತ್ತು ತೆಲುಗು ಚಿತ್ರರಂಗಕ್ಕೆ ಹಾರಿರುವ ಸಂಯುಕ್ತ ಅಲ್ಲಿನ ಚಿತ್ರಪ್ರಿಯರನ್ನು ರಂಜಿಸಲು ಸಜ್ಜಾಗಿದ್ದಾರೆ. ಕನ್ನಡದಲ್ಲಿ ಕಿರಿಕ್ ಪಾರ್ಟಿ ನಂತರ ಕಾಲೇಜ್ ಕುಮಾರ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಸಂಯುಕ್ತ ಆ ನಂತರ ಸ್ಯಾಂಡಲ್ ವುಡ್ ಕಡೆ ತಿರುಗಿ ನೋಡಿಲ್ಲ. ಈಗ ತಮಿಳು ಚಿತ್ರರಂಗದಲ್ಲಿ ಮಿಂಚಲು ರೆಡಿಯಾಗಿದ್ದಾರೆ.

  Kannada actress Samyuktha Hegde starrer Komali first look released

  ಅಂದ್ಹಾಗೆ 'ಕೋಮಲಿ' ಚಿತ್ರದಲ್ಲಿ ಜಯಂ ರವಿಗೆ ಜೋಡಿಯಾಗಿ ಕಾಜಲ್ ಅಗರ್ ವಾಲ್ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ರೆ ಸಂಯುಕ್ತ ಪಾತ್ರ ಕೂಡ ತುಂಬ ಮಹತ್ವದಾಗಿದೆಯಂತೆ. ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಂಯುಕ್ತ ಈ ಚಿತ್ರದಲ್ಲಿ ಡಿ ಗ್ಲಾಮ್ ಆಗಿ ಮಿಂಚಿದ್ದಾರೆ. ಕೋಮಲಿ ಪ್ರದೀಪ್ ರಂಗನಾಥ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಆಗಸ್ಟ್ 15ಕ್ಕೆ ಚಿತ್ರ ತೆರೆಗೆ ಬರುತ್ತಿದೆ.

  English summary
  Kannada actress Samyuktha Hegde starrer Komali first look released. Samyuktha Hegde playing lead role opposite Tamil actor Jayam ravi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X