ಮುಸ್ಲಿಂ ವೈದ್ಯ ಅಜೀಜ್ ಪಾಷಾ ಜೊತೆ ಮದುವೆಯಾದ ಸಂಜನಾ ಗಲ್ರಾನಿ ಮತ್ತೊಮ್ಮೆ ಗರ್ಭಿಣಿ ..!
ಪ್ರೀತಿಗೆ ಎಲ್ಲರನ್ನು ಎಲ್ಲವನ್ನೂ ಜಯಿಸುವಂತಹ ನಿಗೂಢವಾದ ಶಕ್ತಿ ಇದೆ. ಪ್ರತಿಯೊಂದು ಧರ್ಮದಲ್ಲಿಯೂ ಈ ಪ್ರೀತಿಯ ಪರಿಕಲ್ಪನೆಗೆ ಅಪಾರವಾದ ಆದ್ಯತೆ ಇದೆ. ಇನ್ನು ನಿಜವಾದ ಪ್ರೀತಿಯ ಆಳಕ್ಕೆ ಇಳಿದು ನೋಡಿದಾಗ ಅದರ ಅರ್ಥ ಹುಡುಕುತ್ತಾ ಹೋದಾಗ ಪ್ರೀತಿ ಎನ್ನುವುದು ಮನಸಿಂದ ಬರಬೇಕೆ ಹೊರತು ಆ ಪ್ರೀತಿ ಒತ್ತಾಯಪೂರ್ವಕವಾಗಿ ಆಗಬಾರದು ಎಂಬ ವಿಚಾರದ ಅರಿವು ಅನೇಕರಿಗೆ ಆಗುತ್ತೆ.
ಹೀಗೆ ಅರಿತುಕೊಂಡು ಪ್ರೀತಿಯನ್ನು ಅರ್ಥ ಮಾಡಿಕೊಂಡು ಪ್ರೀತಿಗೋಸ್ಕರ ತನ್ನ ವೃತ್ತಿಯನ್ನೇ ತ್ಯಾಗ ಮಾಡಿ ಮುಸ್ಲಿಂ ವೈದ್ಯ ಡಾ.ಅಜೀಜ್ ಪಾಷಾ ಅವರನ್ನು ಮದುವೆಯಾದವರು ಸಂಜನಾ ಗಲ್ರಾನಿ. ಹೌದು, ಗಂಡ ಹೆಂಡ್ತಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಸಂಜನಾ ಗಲ್ರಾನಿ ಆ ನಂತರ ಮೇ 2020ರಲ್ಲಿ ಅಜೀಜ್ ಪಾಶಾ ಅವರನ್ನು ಮದುವೆಯಾದರು. ಆ ನಂತರ 2022ರಲ್ಲಿ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದ ಸಂಜನಾ ಗಲ್ರಾನಿ ಮುಸ್ಲಿಂ ಸಂಪ್ರಾದಾಯದಂತೆ ಸೀಮಂತ ಶಾಸ್ತ್ರ ಮಾಡಿಕೊಂಡಿದ್ದರು. ಮೇ 19ರಂದು ಗಂಡು ಮಗುಗೆ ಜನ್ಮ ನೀಡಿದ್ದರು.

ಇಂಥಾ ಸಂಜನಾ ಗಲ್ರಾನಿ ಈಗ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಎರಡನೇ ಬಾರಿ ಸಂಜನಾ ಗರ್ಭಿಣಿಯಾಗಿದ್ದಾರೆ. ಯುಗಾದಿ ಹಬ್ಬದಂದು ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿರುವ ಸಂಜನಾ ಯುಗಾದಿಯ ಹೊಸ ಬೆಳಕು ನಿಮ್ಮ ಜೀವನದಲ್ಲಿ ಶಾತಿ, ಸಮೃದ್ದಿ ಮತ್ತು ಸಂತೋಷವನ್ನು ತರಲಿ, ಈ ಹಬ್ಬ ನಮಗೆ ತುಂಬಾ ವಿಶೇಷವಾದದ್ದು ಯಾಕೆಂದರೆ ನಮ್ಮ ಕುಟುಂಬಕ್ಕೆ ಹೊಸ ಸದಸ್ಯರೊಬ್ಬರು ಶೀಘ್ರದಲ್ಲಿಯೇ ಬರಲಿದ್ದಾರೆ. ನಿಮ್ಮ ಪ್ರೀತಿ ಮತ್ತು ಆಶೀವಾದ ಸದಾ ನಮ್ಮ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ.
ಸದ್ಯ ಸಂಜನಾ ಗಲ್ರಾನಿ ಅವರ ಸೀಮಂತ ಶಾಸ್ತ್ರದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಅನೇಕರು ಸಂಜನಾ ಅವರಿಗೆ ಶುಭಾಶಯವನ್ನು ಕೋರುತ್ತಿದ್ದಾರೆ. ಇನ್ನುಳಿದಂತೆ ಅಜೀಜ್ ಪಾಶಾ ಅವರನ್ನು ಮದುವೆಯಾದ ನಂತರ ಚಿತ್ರರಂಗದಿಂದ ಅಂತರವನ್ನು ಕಾಪಾಡಿಕೊಂಡಿರುವ ಸಂಜನಾ 2020ರಲ್ಲಿ ಮಾದಕ ಮಾಯಾಜಾಲದಲ್ಲಿ ಸಿಲುಕಿಕೊಂಡಿದ್ದರು. ಡ್ರಗ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು. ಚಿತ್ರರಂಗದಲ್ಲಿ ಬೆಳೆಯಬೇಕೆನ್ನುವ ಸಂಜನಾ ಅವರ ಈ ಆಶಯಕ್ಕೆ ಈ ಪ್ರಕರಣ ಮುಳುವಾಗಿದ್ದು ಸುಳ್ಳಲ್ಲ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೊಮ್ಮೆ ಮಾತನಾಡಿದ್ದ ಸಂಜನಾ, ಡ್ರಗ್ಸ್ ಪ್ರಕರಣದಲ್ಲಿ ನಾನು ಬಂಧಿಯಾದಾಗ ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲಾ ರೀತಿಯ ಮಾಧ್ಯಮವೂ ನನ್ನನ್ನು ಆರೋಪಿ ಅಪರಾಧಿ ಎಂಬಂತೆ ಪ್ರತಿಬಿಂಬಿಸಿತು. ಆದರೆ, ಅಲ್ಲಿ ಯಾವುದೇ ರೀತಿಯ ಕುರುಹುಗಳಿಲ್ಲದೆ ಇಡೀ ಕೇಸ್ ಬಿದ್ದು ಹೋಯಿತು. ಅದನ್ನು ಯಾವ ಮಾಧ್ಯಮದವರು ಹೈಲೈಟ್ ಮಾಡಲೇ ಇಲ್ಲ. ಬದಲಾಗಿ ನನ್ನನ್ನು ಆರೋಪಿಯಾಗಿ ಮಾತ್ರ ಚಿತ್ರಿಸುವ ಪ್ರಯತ್ನ ನಡೆಯಿತು. ಈ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ರೀತಿಯ ಟೆಸ್ಟ್‌ಗಳು ನೆಗೆಟಿವ್ ಆಗಿಯೇ ಬಂದಿತ್ತು. ತನಿಖೆಯಲ್ಲಿ ಕಳೆದ ಹತ್ತು ವರ್ಷಗಳು ನನ್ನ ಎಲ್ಲಾ ರೀತಿಯ ಮೊಬೈಲ್ ಡೇಟಾ ಹಾಗೂ ಇತರೆ ಮಾಹಿತಿಯನ್ನು ಕಲೆ ಹಾಕಿದ್ದರು. ಎಲ್ಲೂ ನಾನು ಅಪರಾಧಿಯಾಗಿ ಕಂಡು ಬಂದಿಲ್ಲ" ಎಂದು ತಮ್ಮ ಡ್ರಗ್ ಪ್ರಕರಣದ ಕುರಿತು ಹೇಳಿದ್ದರು.
ಮುಂದುವರೆದು ಎಷ್ಟೇ ಕಾಂಟಾಕ್ಟ್‌ಗಳಿದ್ದರೂ ನನ್ನ ಕಷ್ಟ ಕಾಲದಲ್ಲಿ ಯಾವುದು ನನಗೆ ಸಹಾಯ ಮಾಡಲಿಲ್ಲ. ನನ್ನ ತಂದೆ ತಾಯಿಯವರು ಕೂಡ ಹಿರಿಯ ನಾಗರಿಕರು. ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ನಾನು ನಿರಪರಾಧಿ ಎಂದು ಸಾಬೀತಾದರೂ ಸಹ ಇಂದಿಗೂ ನನಗೆ ಸರಿಯಾದ ಮಾನ್ಯತೆ ಸಿಕ್ಕಿಲ್ಲ. ಇಂದಿಗೂ ನಾನು ಇಂಡಸ್ಟ್ರಿ ಹಾಗೂ ನನ್ನ ನಟನಾ ಕೆರಿಯರ್‌ನಿಂದ ದೂರವೇ ಉಳಿಯುವಂತಾಗಿದೆ. ಈ ಬಗ್ಗೆ ನನಗೆ ಬಹಳ ಬೇಸರವಿದೆ ಎಂದು ತಮ್ಮ ಮನದ ನೋವು ಹೊರ ಹಾಕಿದ್ದರು ಸಂಜನಾ ಗಲ್ರಾನಿ.


Click it and Unblock the Notifications











