ಗಂಡು ಮಗುವಿಗೆ ಜನ್ಮ ನೀಡಿದ ನಟಿ ಸಂಜನಾ ಗಲ್ರಾನಿ: ಕುಟುಂಬಸ್ಥರಲ್ಲಿ ಸಂಭ್ರಮ
ಕನ್ನಡದ ಹಾಟ್ ಬ್ಯೂಟಿ ಎಂದೇ ಫೇಮಸ್ ಆಗಿರುವ ನಟಿ ಸಂಜನಾ ಗಲ್ರಾನಿ ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಸದ್ಯ ಕಳೆದ ಎರಡು ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸದೇ ಕುಟುಂಬದ ಜೊತೆ ಸಂತೋಷವಾಗಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಸಂಜನಾ ಗಲ್ರಾನಿ ಇತ್ತೀಚಿಗಷ್ಟೇ ಮುಸ್ಲಿಂ ಸಂಪ್ರಾದಾಯದಂತೆ ಸೀಮಂತ ಶಾಸ್ತ್ರ ಮಾಡಿಕೊಂಡಿದ್ದರು.
ಸಂಜನಾ ಗಲ್ರಾನಿ ತಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಆಗಮನ ನಿರೀಕ್ಷೆಯಲ್ಲಿದ್ದರು. ಇಂದು (ಮೇ 19) ಆ ಗಳಿಗೆ ಕೂಡಿ ಬಂದಿದ್ದು, ನಟಿ ಸಂಜನಾ ಗಲ್ರಾನಿ ಗಂಡು ಮಗು ಜನನವಾಗಿದೆ. ಕುಟುಂಬಸ್ಥರು ಹಾಗೂ ಆಪ್ತರೂ ಈ ಸಂಭ್ರಮವನ್ನು ಸೆಲೆಬ್ರೆಟ್ ಮಾಡಿದ್ದಾರೆ. ಸಂಜನಾಗೆ ಚಿಕಿತ್ಸೆ ನೀಡಿದ ವೈದ್ಯರು ಮಗುವಿನ ಆಗಮನದ ಪೋಟೊವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪೋಟೊ ನೋಡಿದ ಅಭಿಮಾನಿಗಳು ಸಂಜನಾಗೆ ಶುಭಾಶಯ ಕೋರಿದ್ದಾರೆ.
ಮೇ 2020 ರಲ್ಲಿ ಡಾ ಅಜೀಜ್ ಪಾಷಾ ಅವರ ಜೊತೆ ನಟಿ ಸಂಜನಾ ಗಲ್ರಾನಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಆದರೆ, ಈ ಬಗ್ಗೆ ಎಲ್ಲೂ ಬಹಿರಂಗ ಪಡಿಸಿರಲಿಲ್ಲ. ಕೆಲ ದಿನಗಳ ಬಳಿಕ ತಮ್ಮ ಮದುವೆ ವಿಚಾರವನ್ನು ಬಹಿರಂಗ ಪಡಿಸಿದರು. ಅಲ್ಲದೆ ತಾವಿಬ್ಬರು 16 ವರ್ಷವಿರುವಾಗಲೇ ಪರಿಚಯವಿತ್ತು ಎಂಬ ವಿಚಾರವನ್ನು ತಿಳಿಸಿದ್ದರು.

ಕಳೆದ ಎರಡು ವರ್ಷಗಳಲ್ಲಿ ಸಂಜನಾ ಗಲ್ರಾನಿ ಹಲವು ಕಠಿಣ ಪರಿಸ್ಥಿತಿಗಳನ್ನು ಎದುರಿಸಿದರು. ಇದೇ ವೇಳೆ ವಿವಾಹದ ವಿಷಯ ಕೂಡ ಬೆಳಕಿಗೆ ಬಂದಿತ್ತು. ಬಳಿಕ ತಮ್ಮ ಹೊಸ ಮಗುವಿನ ನೀರಿಕ್ಷೆಯಲ್ಲಿಯೇ ತಮ್ಮ ನೋವನ್ನೆಲ್ಲಾ ಮರೆತು ಪತಿ ಜೊತೆ ಖುಷಿಯಾಗಿದ್ದರು. ಇತ್ತೀಚಿಗಷ್ಟೇ ಹಿಂದೂ ಹಾಗೂ ಮುಸ್ಲಿಂ ಸಂಪ್ರಾದಾಯದಂತೆ ನಟಿ ಸಂಜನಾಗೆ ಎರಡೆರಡು ಬಾರಿ ಸೀಮಂತ ಕಾರ್ಯ ಮಾಡಲಾಗಿತ್ತು. ಆ ಪೋಟೊಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.

ಸದ್ಯ ನಟಿ ಸಂಜನಾಗೆ ಈಗ ಗಂಡು ಮಗುವಾಗಿದ್ದು, ಕುಟುಂಬಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ. ಇನ್ನು ನಟಿ ಸಂಜನಾ ಚೊಚ್ಚಲ ಹೆರಿಗೆಯಾಗಿದ್ದು, ಮಗುವಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ. ಇದಿಷ್ಟೇ ಅಲ್ಲದೆ ಸಂಜನಾ ತಂಗಿ ನಿಕ್ಕಿ ಗಲ್ರಾನಿ ಅವರ ವಿವಾಹ ಕೂಡ ಇಂದೇ ನಡೆದಿದ್ದು, ಕುಟುಂಬಸ್ಥರಲ್ಲಿ ಡಬಲ್ ಸಂಭ್ರಮ ಮನೆ ಮಾಡಿದೆ. ಇಂದು ಚೆನ್ನೈನಲ್ಲಿ ನಟ ಆದಿ ಪಿನಿಸೆಟ್ಟಿ ಮತ್ತು ನಿಕ್ಕಿ ಗಲ್ರಾನಿ ಮದುವೆ ಅದ್ಧೂರಿಯಾಗಿ ನಡೆದಿದೆ, ಇವೆರಿಬ್ಬರ ಪೋಟೊಗಳು ಆನ್‌ಲೈನ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.


Click it and Unblock the Notifications











