For Quick Alerts
ALLOW NOTIFICATIONS  
For Daily Alerts

  ಕನ್ನಡ ನಟಿ ಸಂಜನಾಗೆ ಹುಟ್ಟುಹಬ್ಬದ ಸಂಭ್ರಮದ ಕ್ಷಣ

  |
  ಕನ್ನಡದ ಮಾಡೆಲ್ ಹಾಗೂ ನಟಿ ಸಂಜನಾ ಇಂದು (10 ಅಕ್ಟೋಬರ್) ತಮ್ಮ 'ಹುಟ್ಟುಹಬ್ಬ' ಆಚರಿಸಿಕೊಳ್ಳುತ್ತಿದ್ದಾರೆ. ಮಾಡೆಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಂಜನಾ 2006 ರಲ್ಲಿ 'ಒರು ಕಾದಲ್ ಸೇವೀರ್' ಮತ್ತು ಕನ್ನಡದ 'ಗಂಡ-ಹೆಂಡತಿ' ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. 'ಗಂಡ ಹೆಂಡತಿ' ಚಿತ್ರದ ಪಾತ್ರ ಅವರಿಗೆ ಮೆಚ್ಚುಗೆಗಿಂತ ಹೆಚ್ಚಾಗಿ ವಿವಾದವನ್ನೇ ಸೃಷ್ಟಿಸಲು ಕಾರಣವಾಯ್ತು.

  ಅದಿರಲಿ, ನಂತರ ನಟಿ ಸಂಜನಾ ತೆಲುಗು ಚಿತ್ರ 'ಬುಜ್ಜಿಗಾಡು' ಮೂಲಕ ತೆಲುಗು ಚಿತ್ರರಂಗಕ್ಕೂ ಅಡಿಯಿಟ್ಟರು. ನಂತರ ಅಲ್ಲಿ 'ಪೊಲೀಸ್ ಪೊಲೀಸ್' ಚಿತ್ರವನ್ನೂ ಮಾಡಿ ಅಲ್ಲಿನ ಪ್ರೇಕ್ಷಕರ ಗಮನಸೆಳೆಯಲು ಸಫಲರಾದರು. ಇತ್ತ ಮಾತೃಭಾಷೆ ಕನ್ನಡದಲ್ಲೂ ನಟನೆ ಮುಂದುವರಿಸಿದ ಸಂಜನಾ, 'ಹುಡುಗ ಹುಡುಗಿ', 'ಮೈಲಾರಿ', 'ಬನ್ನಿ ಮತ್ತೆ ಪ್ರೀತ್ಸೋಣ', 'ಸಾಗರ್', 'ಒಂದು ಕ್ಷಣದಲ್ಲಿ', 'ನರಸಿಂಹ', 'ರೆಬೆಲ್' ಹೀಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸುತ್ತಾ ಬಂದಿದ್ದಾರೆ.

  ದಕ್ಷಿಣ ಭಾರತದ ಇನ್ನೊಂದು ಭಾಷೆ ಮಲಯಾಳಂನಲ್ಲಿಯೂ ಸಂಜನಾ ನಟಿಸಿದ್ದಾರೆ. ಮಮ್ಮುಟ್ಟಿ ಹಾಗೂ ಸುರೇಶ್ ಗೋಪಿ ಅಭಿನಯದ 'ಕಿಂಗ್ ಅಂಡ್ ಕಮಿಷನರ್' ಮಲಯಾಳಂ ಚಿತ್ರದಲ್ಲಿ ನಟಿಸುವ ಮೂಲಕ ಅಲ್ಲೂ ಸಲ್ಲುವ ನಟಿ ಅನ್ನಿಸಿಕೊಂಡಿದ್ದಾರೆ. ಇದೀಗ 2 ತೆಲುಗು ಚಿತ್ರದಲ್ಲಿ ನಟಿಸುತ್ತಿರುವ ಸಂಜನಾ, ಪ್ರತಿಷ್ಠಿತ ಬ್ಯಾನರ್ ಮಹೇಶ್ ಬಾಬುರ 'ಪದ್ಮಾಲಯ' ನಿರ್ಮಿಸುತ್ತಿರುವ 'ಮಹಾನದಿ' ಎಂಬ ನಾಯಕಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಇದೀಗ ಸಂಜನಾ ನಟಿಸುತ್ತಿರುವ 'ಮಹಾನದಿ' ಚಿತ್ರವು ಬಿಗ್ ಬಜೆಟ್ ಚಿತ್ರವಾಗಿದ್ದು ದೊಡ್ಡ ಬ್ಯಾನರ್ ಮೂಲಕ ಅದ್ದೂರಿಯಾಗಿ ಮೂಡಿ ಬರುತ್ತಿರುವುದರಿಂದ ಸಹಜವಾಗಿಯೇ ಈ ಚಿತ್ರದ ಬಗ್ಗೆ ಎಲ್ಲರಿಗೂ ಹೆಚ್ಚು ನಿರೀಕ್ಷೆಯಿದೆ. ಅದರಲ್ಲೂ ಸ್ವತಃ ಸಂಜನಾ ಈ ಚಿತ್ರದ ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ. ಈ ಚಿತ್ರ ತಮಗೆ ಭಾರಿ ಬ್ರೇಕ್ ನೀಡಲಿದೆ ಎಂಬ ಮಹಾ ನಿರೀಕ್ಷೆಯನ್ನು ಹೊಂದಿರುವ ಸಂಜನಾ ಈ ಚಿತ್ರದ ಬಿಡುಗಡೆಯನ್ನು ಎದುರುನೋಡುತ್ತಿದ್ದಾರೆ.

  ಅಂದಹಾಗೆ, ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸಂಜನಾ, ಅದನ್ನು ವಿಶೇಷವಾಗಿ ಆಚರಿಸಿಕೊಳ್ಳಲು ಪ್ಲಾನ್ ಮಾಡಿದ್ದಾರಂತೆ. ತರುಣ್ ಚಂದ್ರ ಜೊತೆ ಅವರ ನಟನೆಯ 'ಒಂದು ಕ್ಷಣದಲ್ಲಿ' ಚಿತ್ರ ಈಗ ಕರ್ನಾಟಕದಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಈ ವೇಳೆ ಸಂಜನಾ ಹುಟ್ಟುಹಬ್ಬದ ಸಂಭ್ರಮವೂ ಸೇರಿಕೊಂಡಿದೆ. ಈ ಸಂದರ್ಭದಲ್ಲಿ 'ಒನ್ ಇಂಡಿಯಾ ಕನ್ನಡ'ದ ಪರವಾಗಿ ಸಂಜನಾಗೆ ಹುಟ್ಟುಹಬ್ಬದ ಶುಭಾಶಯಗಳು. (ಒನ್ ಇಂಡಿಯಾ ಕನ್ನಡ)

  English summary
  Today (10th October) Kannada Actress Sanjjanaa is celebrating her Birthday. This model turned film actress who started her career through her film debut with the a controversial role in the Kannada film Ganda Hendthi in 2006. She acted in more than 25 movies till now. Here is Birthday Wishes to Sanjjanaa.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more