'ಆಪರೇಷನ್ ಸಿಂಧೂರ' ಬಗ್ಗೆ ಚಕಾರ ಎತ್ತಿದ್ದ ಸಂಜನಾ ಪೋಸ್ಟ್ ಡಿಲೀಟ್

ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ಸೇನೆ ಪಾಕಿಸ್ತಾನದ ಉಗ್ರನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯು ಒಂಬತ್ತು ಭಯೋತ್ಪಾದಕ ನೆಲೆಗಳನ್ನು ನಾಶಗೊಳಿಸಿದೆ. ಈ ದಾಳಿಯಲ್ಲಿ ಕೆಲ 30ಕ್ಕೂ ಹೆಚ್ಚು ಉಗ್ರರು ಜೀವ ಕಳೆದುಕೊಂಡಿರುವುದಾಗಿ ವರದಿಯಾಗಿದೆ.

ಭಾರತೀಯ ಪ್ರವಾಸಿಗರನ್ನು ಕೊಂದ ಪಾಕಿಸ್ತಾನ ಪ್ರೇರಿತ ಉಗ್ರರಿಗೆ ಭಾರತ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. 'ಆಪರೇಷನ್ ಸಿಂಧೂರ' ನಡೆದ ಕಾರ್ಯಾಚರಣೆ ಬಗ್ಗೆ ದೇಶ ವಿದೇಶಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದೇಶದ ಬಹುತೇಕರು ಸೇನೆಯ ಈ ನಡೆಯನ್ನು ಸ್ವಾಗತಿಸಿದ್ದಾರೆ. ಸಿನಿಮಾ ತಾರೆಯರು ಪ್ರತಿಕ್ರಿಯಿಸಿ ಸೇನೆಗೆ ಬಹುಪರಾಕ್ ಎಂದಿದ್ದಾರೆ.

Kannada actress Sanjjanaa Galrani Reacts on operation sindoor

ಇದೀಗ ಕನ್ನಡ ನಟಿ ಸಂಜನಾ ಗರ್ಲಾನಿ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ಪ್ರತಿಯೊಂದು ಪ್ರತಿಕ್ರಿಯೆಗೂ ಸಮನಾದ ಹಾಗೂ ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ ಎಂದು ಸಂಜನಾ ಬರೆದುಕೊಂಡಿದ್ದಾರೆ.

"ನಾನು ಸಂಪೂರ್ಣ ದೇಶಪ್ರೇಮಿ, ಆದರೆ ಅದೇ ಸಮಯದಲ್ಲಿ, ನಾನು ಸಂಪೂರ್ಣ ಶಾಂತಿ ಪ್ರೇಮಿ(piece ಎಂಬ ಪದವನ್ನು ತಪ್ಪಾಗಿ ಟೈಪ್‌ ಮಾಡಿದಂತಿದೆ). ಸಣ್ಣ ಅಥವಾ ದೊಡ್ಡ ಯುದ್ಧದ ಯಾವುದೇ ಸೂಚನೆಯು ದೇಶದ ಖ್ಯಾತಿಗೆ ಒಳ್ಳೆಯದಲ್ಲ, ಅದು ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಅಂತರರಾಷ್ಟ್ರೀಯ ಪ್ರವಾಸಿಗರ ಮೇಲೂ ಇದು ಪರಿಣಾಮ ಬೀರಬಹುದು. ಯುದ್ಧದಲ್ಲಿ ಭಾಗಿಯಾದ ದೇಶಕ್ಕೆ ಆಗುವ ಹಾನಿ ಅಪಾರ. ಊಹೆಗೂ ನಿಲುಕದ್ದು. ತಕ್ಷಣವೇ ಎಲ್ಲವೂ ಮನಸ್ಸಿನ ಶಾಂತಿಯೊಂದಿಗೆ ಕೊನೆಗೊಳ್ಳಲಿ ಎಂದು ನಾನು ಭಾವಿಸುತ್ತೇನೆ. ಜೈಹಿಂದ್" ಎಂದು ಸಂಜನಾ ಪೋಸ್ಟ್ ಮಾಡಿದ್ದಾರೆ.

Kannada actress Sanjjanaa Galrani Reacts on operation sindoor

'ಆಪರೇಷನ್ ಸಿಂಧೂರ' ಕಾರ್ಯಾಚರಣೆ ಬಗ್ಗೆ ಸಂಜನಾ ಅಭಿಪ್ರಾಯಕ್ಕೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಟ್ರೋಲ್ ಸಹ ಮಾಡುತ್ತಿದ್ದಾರೆ. "ಶಾಂತಿಯಿಂದ ಇರಬೇಕು ಎಂದು ಹೇಳುವುದು ಸುಲಭ. ಮೊದಲಿಗೆ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿದ್ದು ಪಾಕ್ ಉಗ್ರರು. ಅದಕ್ಕೆ ಸೇನೆ ತಕ್ಕ ಪ್ರತಿಕ್ರಿಯೆ ನೀಡಿದೆಯಷ್ಟೆ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಭಾರತ ಸೇನೆ ದಾಳಿ ಮಾಡಿರುವುದು ಉಗ್ರನೆಲೆಗಳ ಮೇಲೆ ಮಾತ್ರ, ಆದರೆ ಅವ್ರು ಅಮಾಯಕ ಜನರನ್ನು ಟಾರ್ಗೆಟ್ ಮಾಡಿದ್ದರು" ಎಂದು ಮತ್ತೊಬ್ಬರು ರಿಪ್ಲೇ ಮಾಡಿ ತಿಳಿಸಿದ್ದಾರೆ. ಟೀಕೆ ಹೆಚ್ಚಾಗುತ್ತಿದಂತೆ ಸಂಜನಾ ತಮ್ಮ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

ಸಿಂಧಿ ಕುಟುಂಬದಲ್ಲಿ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಅರ್ಚನಾ ಮನೋಹರ್ ಗಲ್ರಾನಿ ಬಳಿಕ ಸಂಜಾನ ಎಂದು ಹೆಸರು ಬದಲಿಸಿಕೊಂಡಿದ್ದರು. ತೆಲುಗಿನ 'ಸೊಗ್ಗಾಡು' ಚಿತ್ರದ ಸಣ್ಣ ಪಾತ್ರದಲ್ಲಿ ಸಂಜನಾ ನಟಿಸಿದ್ದರು. 'ಗಂಡ-ಹೆಂಡತಿ' ಕನ್ನಡದಲ್ಲಿ ಸಂಜನಾ ನಟಿಸಿದ ಮೊದಲ ಸಿನಿಮಾ. ಬಳಿಕ 'ಅರ್ಜುನ್', 'ಮಹಾನದಿ', 'ಅಗ್ರಜ', 'ದಂಡುಪಾಳ್ಯ-2' ಸೇರಿ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.

ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಸಿನಿಮಾಗಳಲ್ಲಿ ಕೂಡ ಸಂಜನಾ ಗರ್ಲಾನಿ ನಟಿಸಿದ್ದಾರೆ. 2021ರಲ್ಲಿ ವೈದ್ಯ ಅಜೀಜ್ ಪಾಷಾ ಅವರನ್ನು ಸಂಜನಾ ಮದುವೆ ಆಗಿದ್ದರು. ಒಂದು ಗಂಡು ಮಗುವಿನ ತಾಯಿಯಾಗಿರುವ ಆಕೆ ಸದ್ಯ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮದುವೆಯಾಗಿ ತಾಯಿಯಾದ ಬಳಿಕ ಸಂಜನಾ ಸಿನಿಮಾಗಳಲ್ಲಿ ನಟಿಸೋದು ಕಮ್ಮಿಯಾಗಿದೆ. ಬಿಗ್‌ಬಾಸ್ ಕನ್ನಡ ಮೊದಲ ಸೀಸನ್ ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಹೋಗಿದ್ದರು.

ಸಿನಿಮಾಗಳಲ್ಲಿ ನಟಿಸದೇ ಇದ್ದರೂ ಸೋಶಿಯಲ್ ಮೀಡಿಯಾದಲ್ಲಿ ಸಂಜನಾ ಗರ್ಲಾನಿ ಆಕ್ಟೀವ್ ಆಗಿದ್ದಾರೆ. ಮಗನ ಲಾಲನೆ ಪಾಲನೆ ಬಗ್ಗೆ ಆಗಾಗ್ಗೆ ಮಾಹಿತಿ ನೀಡಿ ಫೋಟೊ, ವೀಡಿಯೋ ಹಂಚಿಕೊಳ್ಳುತ್ತಾರೆ. ತಾವು ಎರಡನೇ ಬಾರಿ ಗರ್ಭಿಣಿ ಆಗಿರುವ ಬಗ್ಗೆ ತಿಂಗಳ ಹಿಂದೆ ಮಾಹಿತಿ ನೀಡಿದ್ದರು. ಅಭಿಮಾನಿಗಳು ಅಭಿನಂದನೆ ತಿಳಿಸಿದ್ದರು. ಶೀಘ್ರದಲ್ಲೇ ಸಂಜನಾ-ಅಜೀಜ್ ಪಾಷಾ ದಂಪತಿ ಮನೆಗೆ ಮತ್ತೊಬ್ಬ ಹೊಸ ಅತಿಥಿಯನ್ನು ಸ್ವಾಗತಿಸಲಿದ್ದಾರೆ.

More from Filmibeat

English summary
Sanjjanaa Galrani opens up on operation sindoor, says I am a complete peace lover
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X