ಪತ್ರದ ಮೂಲಕ ಅಸಮಾಧಾನ ಹೊರ ಹಾಕಿದ ಶಾನ್ವಿ: 'ಗೀತಾ' ನಾಯಕಿಯ ಬೇಸರ ಯಾರ ಮೇಲೆ?

ಸ್ಯಾಂಡಲ್ ವುಡ್ ನಟಿ ಶಾನ್ವಿ ಶ್ರೀವಾಸ್ತವ್ ಅಭಿನಯದ ಗೀತಾ ಸಿನಿಮಾ ಸದ್ಯ ರಿಲೀಸ್ ಆಗಿದೆ. ಗೀತಾಗೆ ಸಿಕ್ಕ ಉತ್ತಮ ಪ್ರತಿಕ್ರಿಯ ಸಂತಸದಲ್ಲಿರುವ ಶಾನ್ವಿ ಸಾಮಾಜಿಕ ಜಾಲತಾಣದಲ್ಲಿ ದಿಢೀರನೆ ಒಂದು ಪೋಸ್ಟ್ ಮಾಡಿದ್ದಾರೆ. ಶಾನ್ವಿಯ ಈ ಪೋಸ್ ಈಗ ಸಾಕಷ್ಟು ಅನುಮಾನ ಮೂಡಿಸುತ್ತಿದೆ.

ಶಾನ್ವಿ ತೀರಾ ಬೇಸರದಿಂದ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪತ್ರವೊಂದನ್ನು ಬರೆದಿದ್ದಾರೆ. ಯಾವುದೊ ಒಂದು ಚಿತ್ರತಂಡದ ವಿರುದ್ದ ಮಾಸ್ಟರ್ ಪೀಸ್ ಸುದಂರಿ ಅಸಮಾದಾನ ಹೊರಹಾಕುವ ಜೊತೆಗೆ ಈ ಪತ್ರದ ಮೂಲಕ ಸಹೋದ್ಯೋಗಿಗಳಿಗೆ ಮನವಿಯನ್ನು ಮಾಡಿದ್ದಾರೆ. ಆದ್ರೆ ಶಾನ್ವಿಯ ಬೇಸರ ಯಾರ ಮೇಲೆ ಎನ್ನುವುದು ಬಹಿರಂಗವಾಗಿಲ್ಲ. ಗೀತಾ ಸಿನಿಮಾ ರಿಲೀಸ್ ಆದ ಬೆನ್ನಲೆ ಈ ರೀತಿಯ ಪತ್ರ ಬರೆದಿರುವುದು ಸಾಕಷ್ಟು ಅನುಮಾನಾದ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಶಾನ್ವಿ ಬರೆದ ಪತ್ರದಲ್ಲಿ ಏನಿದೆ?

ಶಾನ್ವಿ ಬರೆದ ಪತ್ರದಲ್ಲಿ ಏನಿದೆ?

"ಉತ್ತಮವಾದ ಸಿನಿಮಾಗಳನ್ನು ಯಾರು ಪ್ರೀತಿಯಿಂದ ನೋಡುವುದಿಲ್ಲ? ಮತ್ತು ಪ್ರೇಕ್ಷಕರಿಗಾಗಿ ಯಾರು ಒಳ್ಳೆಯ ಸಿನಿಮಾಗಳನ್ನು ಮಾಡಬೇಕು ಅಂತ ಬಯಸೋಲ್ಲ. ಒಂದು ಸಿನಿಮಾ ಅಂತಿಮವಾಗಿ ಹೇಗೆ ಮೂಡಿ ಬರುತ್ತೊ ಗೊತ್ತಿಲ್ಲ. ಆದ್ರೆ ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಬಹಳ ಅಗತ್ಯವಿದೆ. ಕ್ರೀಡೆಯಲ್ಲಿ ಸೋಲು ಅಥವಾ ಗೆಲುವು ಸಿಗುವ ಕೊನೆ ಕ್ಷಣದ ವರೆಗೂ ಹೇಗೆ ಫೈಟ್ ಮಾಡುತ್ತಾರೋ ಹಾಗೆ ಪ್ರಯತ್ನ ಪಡಬೇಕು" ಎಂದು ಹೇಳಿದ್ದಾರೆ.

ಸಿನಿಮಾದಲ್ಲಿ ಬದಲಾವಣೆಯಾದರೆ ತಿಳಿಸಿ

ಸಿನಿಮಾದಲ್ಲಿ ಬದಲಾವಣೆಯಾದರೆ ತಿಳಿಸಿ

"ನಾನು ಬಹಳ ವಿನಯದಿಂದ ಮನವಿ ಮಾಡಿಕೊಳ್ಳುತ್ತಿದ್ದೇನೆ. ಒಂದು ಒಳ್ಳೆಯ ಸಿನಿಮಾ ಮಾಡಲು ಬೇಕಾದದ್ದನ್ನು ಪ್ರಾಮಾಣಿಕವಾಗಿ, ಶ್ರದ್ಧೆಯಿಂದ, ಕೆಲಸದ ಬಗ್ಗೆ ನೈತಿಕತೆಯಿಂದ ಮಾಡುವುದಕ್ಕೆ ಪ್ರಾಮುಖ್ಯತೆ ನೀಡಿ. ಪ್ರತಿಯಬ್ಬ ನಟನೂ ಆಯಾ ಸಿನಿಮಾದ ಭಾಗ. ಪ್ರಾಮಾಣಿಕವಾಗಿ ಅವರನ್ನು ಅಪ್ರೋಚ್ ಮಾಡಬೇಕಿದೆ. ಸ್ಕ್ರಿಪ್ಟ್ ನಿರೂಪಣೆ ಹೇಗಿರುತ್ತದೆಯೋ ಹಾಗೆ ತೆರೆಮೇಲೆ ಇರಬೇಕು. ಬದಲಾವಣೆ ಮಾಡಿಕೊಂಡರೆ ಅದನ್ನು ನಟರಿಗೆ ತಿಳಿಸಬೇಕು"

ನಟರನ್ನು ದಿಕ್ಕುತಪ್ಪಿಸುವುದು ನೀತಿಬಾಹಿರ

ನಟರನ್ನು ದಿಕ್ಕುತಪ್ಪಿಸುವುದು ನೀತಿಬಾಹಿರ

"ಬದಲಾವಣೆ ನಿಜಕ್ಕು ಪ್ರಾಮಾಣಿಕವಾಗಿದ್ದರೆ ಸಿನಿಮಾದಲ್ಲಿ ಅದರ ಅಗತ್ಯತೆಯನ್ನು ನಟ ಅರ್ಥ ಮಾಡಿಕೊಳ್ಳುತ್ತಾನೆ. ಮತ್ತು ಅದನ್ನು ಗೌರವಿಸುತ್ತಾರೆ. ನಟರನ್ನು ದಿಕ್ಕುತಪ್ಪಿಸುವುದು ನೀತಿಬಾಹಿರ, ಅಲ್ಲದೆ ಸುಳ್ಳು ಆಶ್ವಾಸನೆಗಳನ್ನು, ಯಾವುದೆ ರೀತಿಯ ಸಮಜಾಯಿಷಿಗೆ ಪ್ರಯತ್ನಸುವುದು, ವೃತ್ತಿಪರತೆ ಇಲ್ಲದಿರುವುದನ್ನು ಖಂಡಿತವಾಗಿ ಒಪ್ಪುವುದಲ್ಲ"

ಗೀತಾ ಸಿನಿಮಾ ರಿಲೀಸ್ ಆಗಿದೆ

ಗೀತಾ ಸಿನಿಮಾ ರಿಲೀಸ್ ಆಗಿದೆ

ಶಾನ್ವಿ ಹೀಗೆ ದಿಢೀರನೆ ಬೇಸರ ಹೊರಹಾಕಿರುವುದು ಯಾವ ಸಿನಿಮಾ ತಂಡದ ವಿರುದ್ಧ ಎನ್ನುವುದು ಗೊತ್ತಿಲ್ಲ. ಆದ್ರೆ ಶಾನ್ವಿ ಅಭಿನಯದ ಗೀತಾ ಸಿನಿಮಾ ಇತ್ತೀಚಿಗಷ್ಟೆ ರಿಲೀಸ್ ಆಗಿದೆ. ಇನ್ನು ಅವನೇ ಶ್ರೀಮನ್ನಾರಾಯಣ ಚಿತ್ರ ರಿಲೀಸ್ ಗೆ ರೆಡಿಯಾಗುತ್ತಿದೆ. ಇದರ ಬೆನ್ನಲ್ಲೆ ಈಗ ಶಾನ್ವಿ ಪೋಸ್ಟ್ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

More from Filmibeat

English summary
Kannada actress Shanvi Srivastava wrote a letter to her colleague.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X