ಬೆಂಗಳೂರಿನಿಂದ ಕೊಚ್ಚಿಗೆ ಹೋಗುವಾಗ ಶ್ರದ್ಧಾಗೆ ಕೆಟ್ಟ ಅನುಭವ.! ಪ್ರೂಫ್ ಬೇಕಾ.?
ಇಡೀ ಭಾರತದಲ್ಲಿ #ಮೀಟೂ ಅಭಿಯಾನ ಯದ್ವಾತದ್ವಾ ಸೌಂಡ್ ಮಾಡುತ್ತಿದೆ. #ಮೀಟೂ ಎಂಬ ವೇದಿಕೆ ಸಿಕ್ಕಿರುವ ಕಾರಣ ಮಹಿಳೆಯರು ತಮಗಾದ ಘೋರ ಅನುಭವಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಅಂಜಿಕೆ ಇಲ್ಲದೆ ಹಂಚಿಕೊಳ್ಳುತ್ತಿದ್ದಾರೆ.
#ಮೀಟೂ ಅಭಿಯಾನದ ಮೂಲಕ ದೊಡ್ಡ ದೊಡ್ಡ ತಾರೆಯರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಆರೋಪಗಳನ್ನು ಮಾಡುವುದು ಸುಲಭ, ಆದರೆ ಸಾಕ್ಷಿ ಇರಬೇಕಲ್ವಾ ಅಂತ ಕೆಲವರು ವಾದಿಸುತ್ತಿದ್ದಾರೆ.
ಹೀಗಿರುವಾಗಲೇ, ನಟಿ ಶ್ರದ್ಧಾ ಶ್ರೀನಾಥ್ ತಮಗಾದ ಒಂದು ಕೆಟ್ಟ ಅನುಭವವನ್ನ ವಿವರಿಸಿದ್ದಾರೆ. ಅದಕ್ಕೆ ಸಾಕ್ಷಿ ಹೇಗೆ ಕೊಡಲಿ ಅಂತ ಪ್ರಶ್ನಿಸಿದ್ದಾರೆ. ಅಷ್ಟಕ್ಕೂ, ಶ್ರದ್ಧಾ ಶ್ರೀನಾಥ್ ಗೆ ಆಗಿದ್ದೇನು.? ಸಂಪೂರ್ಣ ಮಾಹಿತಿ ಇಲ್ಲಿದೆ, ಓದಿರಿ...
ಇಂತಹ ಸಮಯದಲ್ಲಿ ಸಾಕ್ಷಿ ಇಟ್ಟುಕೊಳ್ಳುವುದು ಹೇಗೆ.?
''ಒಮ್ಮೆ ಬೆಂಗಳೂರಿನಿಂದ ಕೊಚ್ಚಿಗೆ ಬಸ್ ನಲ್ಲಿ ತೆರಳುತ್ತಿದ್ದೆ. ನಾನು ನಿದ್ರಿಸುತ್ತಿರುವಾಗ, ನನ್ನ ಪಕ್ಕ ಕುಳಿತಿದ್ದ ಪ್ರಯಾಣಿಕ ನನ್ನ ತೊಡೆ ಭಾಗದ ಮೇಲೆ ಕೈಯಿಟ್ಟ. ಆಗ ನಾನು ಗಾಬರಿಯಿಂದ ಎದ್ದೆ. ಇದಕ್ಕೆ ನನ್ನ ಬಳಿ ಸಾಕ್ಷಿ ಇಲ್ಲ. ಆತ ನನ್ನ ಮೇಲೆ ಕೈ ಇಟ್ಟಾಗ ನಾನು ಸೆಲ್ಫಿ ತೆಗೆದುಕೊಳ್ಳಬೇಕಿತ್ತೇ.?'' ಎಂದು ನಟಿ ಶ್ರದ್ಧಾ ಶ್ರೀನಾಥ್ ಟ್ವೀಟ್ ಮಾಡಿದ್ದಾರೆ.
ಶ್ರುತಿ ಹರಿಹರನ್ ಪರವಾಗಿ ಶ್ರದ್ಧಾ ಮಾತು
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ನಿನ್ನೆಯಷ್ಟೇ ಗಂಭೀರ ಆರೋಪ ಮಾಡಿದ್ದರು. ಈ ವೇಳೆ ''ಸಾಕ್ಷಿ ಏನಿದೆ.?'' ಅಂತ ಹಲವರು ಪ್ರಶ್ನಿಸಿದ್ದರು. ಇದಕ್ಕೆ ನಟಿ ಶ್ರದ್ಧಾ ಶ್ರೀನಾಥ್ ತಿರುಗೇಟು ಕೊಟ್ಟಿದ್ದಾರೆ.
ಖಂಡಿಸಿದ ಶ್ರದ್ಧಾ ಶ್ರೀನಾಥ್
''ಒಂದುವರೆ ವರ್ಷಗಳ ಹಿಂದೆಯೇ ನಟಿ ಶ್ರುತಿ ಹರಿಹರನ್ ದೂರು ಕೊಡಬೇಕಿತ್ತು. ಶೂಟಿಂಗ್ ಮಾಡಲ್ಲ ಎನ್ನಬೇಕಿತ್ತು. ಚಿತ್ರತಂಡದಿಂದ ಹೊರಗೆ ಬರಬೇಕಿತ್ತು'' ಎಂಬ ಮಾತುಗಳು ಚಿತ್ರರಂಗದಿಂದಲೇ ಕೇಳಿಬಂದಿದೆ. ಇದನ್ನೆಲ್ಲ ನಟಿ ಶ್ರದ್ಧಾ ಶ್ರೀನಾಥ್ ತಮ್ಮದೇ ಧಾಟಿಯಲ್ಲಿ ಖಂಡಿಸಿದ್ದಾರೆ.

ಶ್ರದ್ಧಾ ಮಾತಲ್ಲಿ ಅರ್ಥ ಇದೆ ಅಂತ ನಿಮಗೆ ಅನ್ಸುತ್ತಾ.?
ಘೋರ ಅನುಭವಕ್ಕೆ ಒಳಗಾದ ಮಹಿಳೆಯರಿಗೆ ಸಾಕ್ಷಿ ಕೇಳುವುದು ಸರಿಯೇ.? ಶ್ರದ್ಧಾ ಆಡಿರುವ ಮಾತು ಸರಿಯಿದೆ ಅಂತ ನಿಮಗೆ ಅನ್ಸುತ್ತಾ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.


Click it and Unblock the Notifications











