ನಟಿ ಶ್ರುತಿ ಹರಿಹರನ್ ಪರವಾಗಿ ದನಿಯೆತ್ತಿದ್ದ ಶ್ರದ್ಧಾ ಶ್ರೀನಾಥ್
''ಕನ್ನಡ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇದೆ'' ಅಂತ ಈ ಹಿಂದೆ ಹೇಳಿದ್ದ ನಟಿ ಶ್ರುತಿ ಹರಿಹರನ್ ಇದೀಗ ದಕ್ಷಿಣ ಭಾರತದ ಪ್ರಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.
''ವಿಸ್ಮಯ' ಚಿತ್ರದ ರಿಹರ್ಸಲ್ ವೇಳೆ ಅರ್ಜುನ್ ಸರ್ಜಾ ನನ್ನನ್ನ ತಬ್ಬಿಕೊಂಡರು. ನನಗೆ ಅದು ಬ್ಯಾಡ್ ಟಚ್ ಎಂದು ಅನಿಸಿತು. ಸಾಲದಕ್ಕೆ, ಡಿನ್ನರ್ ಗೆ ಹೋಗೋಣ ಬಾ, ರೆಸಾರ್ಟ್ ಗೆ ಹೋಗೋಣ ಬಾ ಎಂದು ಅರ್ಜುನ್ ಸರ್ಜಾ ಕರೆಯುತ್ತಿದ್ದರು. ನಾನು ಒಪ್ಪಿಕೊಳ್ಳಲಿಲ್ಲ'' ಎಂದು ಶ್ರುತಿ ಹರಿಹರನ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಇಲ್ಲಿಯವರೆಗೂ ಯಾವುದೇ ವಿವಾದಗಳಲ್ಲಿ ಅರ್ಜುನ್ ಸರ್ಜಾ ಸಿಲುಕಿದವರಲ್ಲ. ತಮ್ಮ ಮೂರು ದಶಕಗಳ ಸಿನಿ ಕೆರಿಯರ್ ನಲ್ಲಿ ಅರ್ಜುನ್ ಸರ್ಜಾ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ. ಹೀಗಿರುವಾಗ, 'ಜೆಂಟಲ್ ಮ್ಯಾನ್' ಮೇಲೆ ಶ್ರುತಿ ಹರಿಹರನ್ ಆರೋಪ ಮಾಡಿರುವುದರಿಂದ ಚಿತ್ರರಂಗದವರೂ ಹಾಗೂ ಸಿನಿ ಪ್ರಿಯರು ಆಘಾತಗೊಂಡಿದ್ದಾರೆ.
ಬಹುತೇಕ ಮಂದಿ ಅರ್ಜುನ್ ಸರ್ಜಾ ಪರವಾಗಿ ನಿಂತಿದ್ದಾರೆ. ಶ್ರುತಿ ಹರಿಹರನ್ ವಿರುದ್ಧ ಛೀಮಾರಿ ಹಾಕುತ್ತಿದ್ದಾರೆ. ಇದನ್ನೆಲ್ಲ ಗಮನಿಸಿದ ನಟಿ ಶ್ರದ್ಧಾ ಶ್ರೀನಾಥ್, ಶ್ರುತಿ ಹರಿಹರನ್ ಪರವಾಗಿ ದನಿಯೆತ್ತಿದ್ದಾರೆ. ಶ್ರುತಿ ಪರವಾಗಿ ಶ್ರದ್ಧಾ ಸಾಲು ಸಾಲು ಟ್ವೀಟ್ ಗಳನ್ನ ಮಾಡಿದ್ದಾರೆ. ಮುಂದೆ ಓದಿರಿ...
ನನಗಿದ್ದು ಗೊತ್ತಿತ್ತು
''ನವೆಂಬರ್ 2016 ರಲ್ಲಿ ನಾನು ಹಾಗೂ ಶ್ರುತಿ ಹರಿಹರನ್ ಒಟ್ಟಿಗೆ ಒಂದು ಟಾಕ್ ಶೋಗೆ ಹೋಗಿದ್ವಿ. ಅಲ್ಲಿ ಕಾಸ್ಟಿಂಗ್ ಕೌಚ್ ಟಾಪಿಕ್ ಬಂತು. ಶೋನಲ್ಲಿ ಶ್ರುತಿ ಯಾರ ಹೆಸರೂ ಹೇಳಲಿಲ್ಲ. ಕ್ಯಾಮರಾ ಆಫ್ ಆದ್ಮೇಲೆ ಶ್ರುತಿ ಎಲ್ಲವನ್ನೂ ವಿವರಿಸಿದ್ರು. ಅವತ್ತೇ ನನಗೆ ಈ ಘಟನೆ ಬಗ್ಗೆ ಗೊತ್ತಾಗಿದ್ದು'' ಎಂದು ಶ್ರುತಿ ಹರಿಹರನ್ ಬರೆದುಕೊಂಡಿರುವ #ಮೀಟೂ ಪೋಸ್ಟ್ ಬಗ್ಗೆ ಶ್ರದ್ಧಾ ಶ್ರೀನಾಥ್ ಟ್ವೀಟ್ ಮಾಡಿದ್ದಾರೆ.
ಯಾರಿಗೂ ಈ ರೀತಿ ಆಗಬಾರದು
''ಶ್ರುತಿಗೆ ಈ ರೀತಿ ಆಗಿರುವುದು ನನಗೆ ಬೇಸರ ತಂದಿದೆ. ಕೆಲಸ ಮಾಡುವ ಸ್ಥಳದಲ್ಲಿ ಯಾರಿಗೂ ಮುಜುಗರ ಆಗಬಾರದು. ಯಾರೂ ಇನ್ನೊಬ್ಬರನ್ನು ಮುಜುಗರ ಪಡಿಸಬಾರದು'' ಎಂದು ಟ್ವೀಟಿಸಿದ್ದಾರೆ ನಟಿ ಶ್ರದ್ಧಾ ಶ್ರೀನಾಥ್.
ಪ್ರಾಣ ಬೆದರಿಕೆ ಕರೆಗಳು ಬರುತ್ತಿವೆ
''ಸ್ಟಾರ್' ಜೊತೆಗೆ ಆದ ಕರಾಳ ಅನುಭವದ ಕುರಿತು ಓರ್ವ ಮಹಿಳೆ ಮಾತನಾಡಿದರೆ ಇಂಟರ್ ನೆಟ್ ನಲ್ಲಿ ಕೆಟ್ಟ ಕಾಮೆಂಟ್ ಗಳು ಬರುತ್ತಿವೆ. ಆಕೆಗೆ ಪ್ರಾಣ ಬೆದರಿಕೆ ಕರೆಗಳು ಬರುತ್ತಿವೆ. ಅಲ್ಲದೇ, ಪಬ್ಲಿಸಿಟಿ ಹಾಗೂ ಎಲ್ಲರ ಗಮನ ಸೆಳೆಯಲು ಈ ರೀತಿ ಮಾಡುತ್ತಿದ್ದಾರೆ ಅಂತ ಆರೋಪಿಸುತ್ತಿದ್ದಾರೆ'' ಎಂದು ಬೇಸರದಿಂದ ಟ್ವೀಟ್ ಮಾಡಿದ್ದಾರೆ ನಟಿ ಶ್ರದ್ಧಾ ಶ್ರೀನಾಥ್.
ಗಂಡಸರು ಎಲ್ಲಿ.?
''ಗಂಡಸರು ಎಲ್ಲಿ.? ನನಗೆ ಕುತೂಹಲ ಕಾಡುತ್ತಿದೆ. 70mm ಸ್ಕ್ರೀನ್ ಮೇಲೆ ತಾಯಿ ಹಾಗೂ ಸಹೋದರಿಯರನ್ನ ಕಾಪಾಡಲು ದುಷ್ಟರ ವಿರುದ್ದ ಹೋರಾಡುವ ಗಂಡಸರು ಈಗ ತಮ್ಮ ಜಾದು ತೋರಿಸಲಿ. ನಮ್ಮ ಸೂಪರ್ ಹೀರೋಗಳು ಈ ಬಗ್ಗೆ ಏನು ಯೋಚಿಸುತ್ತಿದ್ದಾರೆ ಅಂತ ನಾನು ತಿಳಿದುಕೊಳ್ಳಬೇಕು'' ಎಂದು ಟ್ವೀಟ್ ಮಾಡಿದ್ದಾರೆ ಶ್ರದ್ಧಾ ಶ್ರೀನಾಥ್.
ಕ್ಯಾರೆಕ್ಟರ್ ಬಗ್ಗೆ ಮಾತನಾಡುತ್ತಾರೆ
''ಹೆಸರು ಹೇಳಿ ತಮ್ಮ ಅಭಿಪ್ರಾಯವನ್ನ ಮಹಿಳೆಯರು ಹಂಚಿಕೊಂಡರೆ, ಆಕೆಯ ಕ್ಯಾರೆಕ್ಟರ್ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಇದನ್ನೆಲ್ಲ ಸೈಲೆಂಟ್ ಆಗಿ ನೋಡಬೇಡಿ. ವಾಟ್ಸ್ ಆಪ್ ನಲ್ಲಿ ಫಾರ್ವರ್ಡ್ ಕಳುಹಿಸುವ ಬದಲು ದನಿ ಎತ್ತಿ'' ಎಂದಿದ್ದಾರೆ ನಟಿ ಶ್ರದ್ಧಾ ಶ್ರೀನಾಥ್


Click it and Unblock the Notifications











