For Quick Alerts
  ALLOW NOTIFICATIONS  
  For Daily Alerts

  IAS ಅಧಿಕಾರಿಯಾದ 'ಯು ಟರ್ನ್' ಸುಂದರಿ ಶ್ರದ್ಧಾ ಶ್ರೀನಾಥ್

  |

  ಸ್ಯಾಂಡಲ್ ವುಡ್ ನಟಿ ಶ್ರದ್ಧಾ ಶ್ರೀನಾಥ್ ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಸಿನಿಮಾರಂಗದಲ್ಲೂ ಬ್ಯುಸಿಯಾಗಿದ್ದಾರೆ. ಯು ಟರ್ನ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಶ್ರದ್ಧಾ ಈಗ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ.

  ಇದೀಗ ಶ್ರದ್ಧಾ IAS ಅಧಿಕಾರಿಯಾಗುವ ಕಾತರದಲ್ಲಿದ್ದಾರೆ. ಶ್ರದ್ಧಾ ನಟನೆ ಬಿಟ್ಟು IAS ಮಾಡಿದ್ರಾ ಎಂದು ಯೋಚಿಸುತ್ತಿದ್ದೀರಾ? ಶ್ರದ್ಧಾ IAS ಅಧಿಕಾರಿ ಆಗಿರುವುದು ನಿಜ ಆದರೆ ನಿಜ ಜೀವನದಲ್ಲಿ ಅಲ್ಲ ಸಿನಿಮಾದಲ್ಲಿ. ಹೌದು, ಯು ಟರ್ನ್ ಸುಂದರಿ ಮುಂದಿನ ಸಿನಿಮಾದಲ್ಲಿ IAS ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ತೆಲುಗಿನ ಮತ್ತೊಂದು ಸಿನಿಮಾಗೆ ನಟಿ ಶ್ರದ್ಧಾ ಗ್ರೀನ್ ಸಿಗ್ನಲ್: ನಾಯಕ ಯಾರು?ತೆಲುಗಿನ ಮತ್ತೊಂದು ಸಿನಿಮಾಗೆ ನಟಿ ಶ್ರದ್ಧಾ ಗ್ರೀನ್ ಸಿಗ್ನಲ್: ನಾಯಕ ಯಾರು?

  ಶ್ರದ್ಧಾ ಇದೀಗ ಮಲಯಾಳಂ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಚಿತ್ರಕ್ಕೆ ಖ್ಯಾತ ನಿರ್ದೇಶಕ ಬಿ. ಉನ್ನಿಕೃಷ್ಣನ್ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಸಿನಿಮಾದಲ್ಲಿ ಶ್ರದ್ಧಾ ಐಎಎಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಶೇಷ ಅಂದರೆ ಕನ್ನಡದ ಸುಂದರಿ ಶ್ರದ್ಧಾ ಮಲಯಾಳಂನ ಖ್ಯಾತ ನಟ ಮೋಹನ್ ಲಾಲ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ.

  ಮೊದಲ ಬಾರಿಗೆ ಶ್ರದ್ಧಾ ಮೋಹನ್ ಲಾಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಂದ್ಹಾಗೆ ಶ್ರದ್ಧಾ ಈಗಾಗಲೇ ಮಲಯಾಳಂ ಸಿನಿಮಾದಲ್ಲಿ ಮಿಂಚಿದ್ದಾರೆ. ಶ್ರದ್ಧಾ ಬಣ್ಣದ ಲೋಕದ ಪಯಣ ಪ್ರಾರಂಭಿಸಿದ್ದೇ ಮಲಯಾಳಂ ಸಿನಿಮಾರಂಗದಿಂದ. ಇದೀಗ ಮತ್ತೆ ಮಾಲಿವುಡ್ ನಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಖ್ಯಾತ ನಟ ಮೋಹನ್ ಲಾಲ್ ಮತ್ತು ಮತ್ತು ನಿರ್ದೇಶಕ ಉನ್ನಿಕೃಷ್ಣನ್ ಕಾರಣ ಸಿನಿಮಾ ಒಪ್ಪಿಕೊಂಡಿರುವುದಾಗಿ ಶ್ರದ್ಧಾ ಹೇಳಿದ್ದಾರೆ.

  ಮತ್ತೆ ನಿಖಿಲ್ ಎದುರಾಗಿ ನಿಂತ ಡಿ ಬಾಸ್ ದರ್ಶನ್ | Filmibeat Kannada

  ಅಂದ್ಹಾಗೆ ಈ ಸಿನಿಮಾದ ಚಿತ್ರೀಕರಣ ನವೆಂಬರ್ 20ರ ನಂತರ ಪ್ರಾರಂಭಿಸುವ ಸಾಧ್ಯತೆ ಇದೆ. ಶ್ರದ್ಧಾ ತಮಿಳಿನಲ್ಲಿ ಮಾರ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಚಕ್ರ ಸಿನಿಮಾ ಸಹ ರಿಲೀಸ್ ಗೆ ಸಿದ್ಧವಾಗುತ್ತಿದೆ. ಕನ್ನಡದಲ್ಲಿ ಗೋದ್ರ, ರುದ್ರಪ್ರಯಾಗ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

  English summary
  Kannada Actress shraddha srinath roped for Mohanlal's upcommin film with Director Unnikrishnan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X