For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ ಫೇವರೆಟ್, ರಚಿತಾ ರಾಮ್-ಸುದೀಪ್ ಬಗ್ಗೆ ಶ್ರುತಿ ಹೇಳಿದ್ದೇನು?

  |

  'ಕರ್ಪೂರದ ಗೊಂಬೆ' ಅಂದಾಕ್ಷಣ ನಟಿ ಶ್ರುತಿ ನೆನಪಾಗ್ತಾರೆ. 90ರ ದಶಕದಲ್ಲಿ ಯಶಸ್ವಿ ನಾಯಕಿಯರಲ್ಲಿ ಶ್ರುತಿ ಸಹ ಪ್ರಮುಖರು. ಸೆಪ್ಟೆಂಬರ್ 18ರಂದು ಶ್ರುತಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬಕ್ಕು ಮುಂಚೆ ಫಿಲ್ಮಿಬೀಟ್ ಕನ್ನಡದ ಜೊತೆ ನಟಿ ಶ್ರುತಿ ಮಾತನಾಡಿದರು.

  ಎರಡು ದಶಕಗಳ ಚಿತ್ರರಂಗ, ರಾಜಕೀಯ ಜರ್ನಿ ಹಾಗೂ ಮಗಳ ಭವಿಷ್ಯ ಹೀಗೆ ಅನೇಕ ವಿಷಯಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದು ವಿಶೇಷ. ಈ ಸಂದರ್ಭದಲ್ಲಿ ಕನ್ನಡದ ನಟ-ನಟಿಯರ ಬಗ್ಗೆ ಶ್ರುತಿ ಮಾತನಾಡಿದ್ದಾರೆ. ಆಗಿನ ಸಮಯದಲ್ಲಿದ್ದ ಕಲಾವಿದರು ಹಾಗೂ ಇತ್ತೀಚಿನ ವರ್ಷಗಳಲ್ಲಿ ಇರುವ ನಟ-ನಟಿಯರಲ್ಲಿ ಯಾರು ಇಷ್ಟ ಎಂದು ಹೇಳಿದ್ದಾರೆ. ? ಮುಂದೆ ಓದಿ....

  ಶ್ರುತಿ ಸಿನಿಮಾ ಜೀವನದಲ್ಲಿ ಆ ಒಂದು ಕೊರಗು ಈಗಲೂ ಕಾಡ್ತಿದೆ!ಶ್ರುತಿ ಸಿನಿಮಾ ಜೀವನದಲ್ಲಿ ಆ ಒಂದು ಕೊರಗು ಈಗಲೂ ಕಾಡ್ತಿದೆ!

  ಸರಿತಾ ಫೇವರೆಟ್

  ಸರಿತಾ ಫೇವರೆಟ್

  ''ನಾನು ಚಿತ್ರರಂಗಕ್ಕೆ ಬರುವ ಮುಂಚೆಯಿಂದಲೂ ಸರಿತಾ ಅವರು ಅಂದ್ರೆ ಬಹಳ ಅಚ್ಚುಮೆಚ್ಚು. ಜೂಲಿ ಲಕ್ಷ್ಮಿ ಅವರು ಸಹ ನನಗೆ ಸಿಕ್ಕಾಪಟ್ಟೆ ಇಷ್ಟ' ಎಂದು ಶ್ರುತಿ ಹೇಳಿದ್ದಾರೆ.

  ರಚಿತಾ ರಾಮ್ ಬಗ್ಗೆ....

  ರಚಿತಾ ರಾಮ್ ಬಗ್ಗೆ....

  ರಚಿತಾ ರಾಮ್ ಹೆಸರು ಹೇಳಿದರೆ ನಿಮಗೆ ಫಟ್ ಏನು ನೆನಪಾಗುತ್ತದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರುತಿ ''ಕನ್ನಡದ ನಾಯಕಿಯರೇ ಇಲ್ಲ ಎಂಬ ಕೊರಗು ನೀಗಿಸಿದವರು ರಚಿತಾ ರಾಮ್'' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

  ರಾಧಿಕಾ ಪಂಡಿತ್ ಕುರಿತು..

  ರಾಧಿಕಾ ಪಂಡಿತ್ ಕುರಿತು..

  ರಾಧಿಕಾ ಪಂಡಿತ್ ಅವರ ಹೆಸರು ಹೇಳಿದ್ರೆ ಫಟ್ ಏನು ನೆನಪಾಗುತ್ತದೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರುತಿ ''ಯಶ್-ರಾಧಿಕಾ ಅವರ ಜೋಡಿ ನೋಡುವುದು ಖುಷಿ. ಕನ್ನಡದ ಪ್ರತಿಭಾನ್ವಿತ ಕಲಾವಿದರ ಪಟ್ಟಿಯಲ್ಲಿ ರಾಧಿಕಾ ಸಹ ಪ್ರಮುಖರು'' ಎಂದಿದ್ದಾರೆ.

  ನನ್ನ ನಂಬಿ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ | Shruthi Krishna | Filmibeat Kannada
  ಶಿವಣ್ಣ ಆಲ್ ಟೈಂ ಫೇವರೆಟ್

  ಶಿವಣ್ಣ ಆಲ್ ಟೈಂ ಫೇವರೆಟ್

  ಈಗಿನ ಸಮಯಕ್ಕೆ ಕಿಚ್ಚ ಸುದೀಪ್ ಅವರಂದ್ರೆ ಹೆಚ್ಚು ಇಷ್ಟ. ಶಿವರಾಜ್ ಕುಮಾರ್ ನನಗೆ ಆಲ್ ಟೈಂ ಫೇವರೆಟ್ ಎಂದು ಶ್ರುತಿ ತಿಳಿಸಿದರು. ಇನ್ನು ನಟಿಯರಲ್ಲಿ ರಾಧಿಕಾ ಪಂಡಿತ್, ರಮ್ಯಾ ಅಂದ್ರೆ ಸಹ ಇಷ್ಟ ಎಂದರು.

  English summary
  Kannada actress shruthi interview: Shruthi revealed who is her favorite actor and actress in sandalwood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X