For Quick Alerts
  ALLOW NOTIFICATIONS  
  For Daily Alerts

  ಏನು 'ದಂಡುಪಾಳ್ಯ 2' ನಲ್ಲಿ ಬಿಗ್ ಬಾಸ್ ಶ್ರುತಿನಾ?

  By Suneetha
  |

  ನಿರ್ದೇಶಕ ಶ್ರೀನಿವಾಸ ರಾಜು ಅವರ 'ದಂಡುಪಾಳ್ಯ' ಸಿನಿಮಾದ ಬಗ್ಗೆ ಗಾಂಧಿನಗರದಲ್ಲಿ ಸಾಕಷ್ಟು ಗುಲ್ಲೆದ್ದು, ವಿವಾದಗಳಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರಾನೇ. ಆದರೆ ಅವೆಲ್ಲವನ್ನೂ ಮೆಟ್ಟಿ ನಿಂತು ಸಿನಿಮಾ ರಿಲೀಸ್ ಆಗಿ ಹಿಟ್ ಕೂಡ ಆಯ್ತು, ಪೂಜಾ ಗಾಂಧಿ ಅವರಿಗೆ ಬ್ರೇಕ್ ಕೂಡ ನೀಡಿತ್ತು.

  ಅದಾಯ್ತು ಇದೀಗ ಚಿತ್ರದ ಎರಡನೇ ಭಾಗ ಕೂಡ ಬರುತ್ತಿದ್ದು, ಅದರ ಫಸ್ಟ್ ಲುಕ್ ಪೋಸ್ಟರ್ ಗಳು ಕೂಡ ಬಿಡುಗಡೆ ಆಗಿ ಎಲ್ಲರನ್ನು ಒಂದು ಕ್ಷಣ ಬೆಚ್ಚಿ ಬೀಳಿಸುವಂತೆ ಮಾಡಿದೆ.[ಅಸಹ್ಯ ಹುಟ್ಟಿಸುವ 'ದಂಡುಪಾಳ್ಯ 2'ರ ಚಿತ್ರಗಳು, ಛೀ!]

  ಮತ್ತೆ ಎರಡನೇ ಬಾರಿ ಕೂಡ ನಟಿ ಪೂಜಾ ಗಾಂಧಿ ಅವರು ಚಿತ್ರದ ಪೋಸ್ಟರ್ ಗಳಿಗೆ ಹಾಟ್ ಫೋಸ್ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ. ಇದೆಲ್ಲಾ ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ ಇನ್ನೊಂದು ಹೊಸ ವಿಚಾರ ಇದೆ.

  ಹೌದು 'ದಂಡುಪಾಳ್ಯ ಭಾಗ 2' ಚಿತ್ರತಂಡದಿಂದ ಹೊರ ಬಿದ್ದಿರುವ ಹೊಸ ವಿಚಾರ ಏನಪ್ಪಾ ಅಂದ್ರೆ, ಬಿಗ್ ಬಾಸ್ ಖ್ಯಾತಿಯ ಅಳುಮುಂಜಿ ನಟಿ ಶ್ರುತಿ ಅವರು 'ದಂಡು ಪಾಳ್ಯ 2' ಚಿತ್ರತಂಡಕ್ಕೆ ಸೇರಿಕೊಂಡಿದ್ದಾರೆ.[ಬಿಗ್ ಮನೆಯಿಂದ 'ದಂಡುಪಾಳ್ಯ'ಕ್ಕೆ ಬಂದ 'ಮಳೆ' ಹುಡುಗಿ ಪೂಜಾ]

  ಚಿತ್ರದಲ್ಲಿ ನಟಿ ಶ್ರುತಿ ಅವರು ಪತ್ರಕರ್ತೆಯ ಪಾತ್ರ ವಹಿಸುತ್ತಿರುವುದು ಖಚಿತವಾಗಿದೆ. ಈ ಮೊದಲು ಅಳುಮುಂಜಿ ಶ್ರುತಿ ಮತ್ತು ಪೂಜಾ ಗಾಂಧಿ ಅವರು ಕೊನೆ ತನಕ ಬಿಗ್ ಬಾಸ್ ಮನೆಯಲ್ಲಿ ಒಂದಾಗಿ ಇದ್ದರು. ಇದೀಗ 'ದಂಡುಪಾಳ್ಯ 2' ಮೂಲಕ ಮತ್ತೆ ಒಂದಾಗಿದ್ದಾರೆ.

  'ದಂಡುಪಾಳ್ಯ ಭಾಗ 1' ರಲ್ಲಿ ಸರಣಿ ಹಂತಕರ ಪ್ರಕರಣ ಭೇದಿಸಿದ ಇನ್ಸ್ ಪೆಕ್ಟರ್ ಚಲಪತಿ ಪಾತ್ರದಲ್ಲಿ 'ಆರ್ಮುಗಂ' ರವಿಶಂಕರ್ ಅವರು ಮಿಂಚಿದ್ದರು. 'ಭಾಗ 2'ರಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ಅವರು ಮಿಂಚಲಿದ್ದು, ಅವರಿಗೆ ಯಾವ ಪಾತ್ರ ಅನ್ನೋದನ್ನು ಇನ್ನೂ ಗುಟ್ಟಾಗಿರಿಸಲಾಗಿದೆಯಂತೆ.['ಬಿಗ್ ಬಾಸ್ ಕನ್ನಡ 3' ರಿಯಾಲಿಟಿ ಶೋ ಗೆದ್ದು ಬಿಟ್ಟರೆ ನಟಿ ಶ್ರುತಿ?]

  ಒಟ್ನಲ್ಲಿ ಚಿತ್ರದಲ್ಲಿ ಅಳುಮುಂಜಿ ಶ್ರುತಿ ಮತ್ತು ಪೂಜಾ ಗಾಂಧಿ ಅವರ ಜುಗಲ್ ಬಂದಿ ಹೇಗಿರಬಹುದು ಅನ್ನೋದನ್ನ ನೋಡಲು ಚಿತ್ರ ತೆರೆಗೆ ಬರುವವರೆಗೂ ಕಾಯಲೇಬೇಕಿದೆ. 'ದಂಡುಪಾಳ್ಯ 2' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗಳನ್ನು ನೋಡಲು ಸ್ಲೈಡ್ಸ್ ಗಳನ್ನು ಕ್ಲಿಕ್ಕಿಸಿ...

  English summary
  Kannada Actress Shruti joined to kannada Movie 'Dandupalya 2' team. Kannada Actress Pooja Gandhi, Actor Ravi Kale, Actor Makarand Deshpande in the lead role. The movie is directed by Srinivasa Raju.
  Saturday, April 2, 2016, 16:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X